ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಷ್ಟ್ರಪಿತ ಮಹಾತ್ಮಾಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನ ಆಚರಿಸಲಾಯಿತು.
ಮಹಾತ್ಮ ಗಾಂಧೀಜಿಯವರ ಮಾತೃಭಾಷಾ ಚಿಂತನ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮಾತೃಭಾಷಾ ಶಿಕ್ಷಣವೇ ಜಗತ್ತಿನಲ್ಲಿ ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಪ್ರಮುಖ ಅಡಿಪಾಯವಾಗಿದೆ. ಮಾತೃಭಾಷೆ ಶಿಕ್ಷಣದಿಂದ ಚೈತನ್ಯ ಶಕ್ತಿ, ಸೃಜನಶೀಲತೆ, ಚಿಂತನಾ ಶಕ್ತಿ ಹೆಚ್ಚುತ್ತದೆ ಪರಿಪೂರ್ಣವಾಗಿ ಅರಿಯಲು ಮಾತೃಭಾಷೆ ಶಿಕ್ಷಣ ತುಂಬಾ ಅಗತ್ಯ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿಗಳು ಭಾರತದ ಪ್ರಧಾನಿಗಳಾಗಿ ಭಾರತದ ಗಡಿ ಮತ್ತು ಕೃಷಿ ರಕ್ಷಣೆ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಭಾರತದ ಸೈನಿಕರಿಗೆ ಮತ್ತು ರೈತರಿಗೆ ಜೈ ಜವಾನ್ ಜೈ ಕಿಸಾನ್ ಘೋಷಣೆಯ ಮೂಲಕ ರಾಷ್ಟ್ರೀಯ ಸ್ಪೂರ್ತಿಯನ್ನು ತುಂಬಿದ ಮಹಾನ್ ವ್ಯಕ್ತಿ..ಭಾರತದ ಗಡಿ ರಕ್ಷಣೆಗಾಗಿ, ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದ ಮಹಾನ್ ಸಂರಕ್ಷಕ. ಲಾಲ್ ಬಹದ್ದೂರ್ ಶಾಸ್ತ್ರಿರವರನ್ನು ಭಾರತೀಯರು ಎಂದು ಮರೆಯಲಾರ ರು. ಭಾರತದ ಸ್ವಾತಂತ್ರ್ಯಕ್ಕಾಗಿ ನೇತೃತ್ವವನ್ನು ವಹಿಸಿದ ಮಹಾತ್ಮ ಗಾಂಧೀಜಿ ವಿಶ್ವದ ಶಾಂತಿ ಪ್ರಿಯರು ಅವರ ಜನ್ಮದಿನವನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿ ಜಗತ್ತಿನ ಎಲ್ಲಾ ದೇಶಗಳಲ್ಲಿ ಆಚರಿಸುತ್ತಿರುವುದು ಭಾರತೀಯರಾದ ನಮಗೆಲ್ಲರಿಗೂ ಬಹಳ ಹೆಮ್ಮೆ ಮತ್ತು ಗೌರವ ಎಂದು ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿರವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜೀವನ ಚರಿತ್ರೆಯನ್ನು ವಿವರಿಸಿದರು. ಅಹಿಂಸಾ ತತ್ವ ಸಾರುವ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ,ನಿವೃತ್ತ ಶಿಕ್ಷಕಿ ಸರಸ್ವತಿ, ಜಯರಾಜ್, ಸಿದ್ದರಾಜು ಇದ್ದರು.
.
ಗಾಂಧಿ ಜಯಂತಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಗಾಂಧೀಜಿಯವರಿಗೆ ಪ್ರಿಯವಾದ ಬಡವರ ಬಾದಾಮಿ ಎಂದೇ ಪ್ರಸಿದ್ಧವಾದ ಕಡ್ಲೆಕಾಯಿ ಬೀಜ ಹಾಗೂ ಗಾಂಧೀಜಿಯವರ ಕಿರು ಪುಸ್ತಕವನ್ನು ವಿತರಿಸಲಾಯಿತು.