ಕನ್ನಡ ಭಾಷೆ, ಸಾಹಿತ್ಯ ಉಳಿವಿಗೆ ಪ್ರತಿಯೊಬ್ಬರು ಕಟಿಬದ್ಧರಾಗಿ : ಪ್ರೊ. ಎಂ.ಆರ್. ಗಂಗಾಧರ್

ಚಾಮರಾಜನಗರ: ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಎದುರಾಗಿರುವ ಪ್ರಸ್ತುತ ಸವಾಲುಗಳನ್ನು ಮೆಟ್ಟಿನಿಲ್ಲುವ ಮೂಲಕ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆ, ಸಾಹಿತ್ಯದ ಉಳಿವಿಗೆ ಕಟಿಬದ್ಧರಾಗಬೇಕಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಅಭಿಪ್ರಾಯಪಟ್ಟರು.

   ಚಾಮರಾಜನಗರ ವಿಶ್ವವಿದ್ಯಾನಿಲಯದ ಸೆಮಿನಾರ್ ಹಾಲ್‍ನಲ್ಲಿಂದು ವಿ.ವಿ. ಕನ್ನಡ ವಿಭಾಗದಿಂದ ಕನ್ನಡ ಭಾμÉ ಮತ್ತು ಸಾಹಿತ್ಯ : ಪ್ರಸ್ತುತ ಸವಾಲುಗಳು ಕುರಿತು ಆಯೋಜಿಸಲಾಗಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ಕನ್ನಡ ಭಾಷೆಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಕಡಿಮೆಯಾಗುತ್ತಿರುವುದು ವಿಪರ್ಯಾಸವಾಗಿದೆ. ನಮ್ಮ ಮಾತೃಭಾಷೆ ಕನ್ನಡವಾಗಿದ್ದು, ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡದ ಬಗ್ಗೆ ಜಾಗೃತರಾಗುತ್ತೇವೆ. ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇತರೆ ಭಾಷಿಕರಿಂದ ಕನ್ನಡಕ್ಕೆ ಧಕ್ಕೆ ಉಂಟಾಗದಂತೆ ನಮ್ಮ ಭಾಷೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಅನೇಕ ಮಹನೀಯರು ನೀಡಿರುವ ಕೊಡುಗೆಯನ್ನು ಉಳಿಸಿಕೊಂಡು ಮುನ್ನೆಡೆಯುವ ಅವಶ್ಯವಿದೆ ಎಂದರು. 

   ಶಿಕ್ಷಣ ಮತ್ತು ಆರೋಗ್ಯ ಖಾಸಗಿಕರಣವಾಗುತ್ತಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಪಾಶ್ಚಿಮಾತ್ಯ ಸಂಸ್ಕøತಿಗೆ ಒಳಗಾಗಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿವಿಗೆ ಎಲ್ಲರು ಮುಂದಾಗಬೇಕು. ಕನ್ನಡ ಭಾಷೆ, ಸಾಹಿತ್ಯದ ಪ್ರಸ್ತುತ ಸವಾಲುಗಳ ಬಗ್ಗೆ ಆಳವಾದ ಅಧ್ಯಯನ, ಚರ್ಚೆ, ಚಿಂತನೆಗಳು ಆಗಬೇಕು, ಪ್ರಬಂಧಗಳು, ಪುಸ್ತಕಗಳು ಪ್ರಕಟವಾಗಿ ಬಿಡುಗಡೆಯಾಗಬೇಕು. ಮಕ್ಕಳು ಕನ್ನಡ ಪುಸ್ತಕಗಳು, ಲೇಖನಗಳನ್ನು ಹೆಚ್ಚಾಗಿ ಓದುವಂತಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

   ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಮಂಜೂರಾಗಿದ್ದ ಮಂಟೇಸ್ವಾಮಿ ಅಧ್ಯಯನ ಪೀಠ ಕಾರಣಾಂತರಗಳಿಂದ ಮೈಸೂರು ವಿಶ್ವವಿದ್ಯಾಲಯಕ್ಕೆ ಸ್ಥಳಾಂತರವಾಗಿದೆ. ಅದನ್ನು ಮತ್ತೆ ಚಾಮರಾಜನಗರ ವಿ.ವಿಗೆ ವರ್ಗಾಯಿಸುವಂತೆ ಕೋರಲಾಗುವುದು. ಸಾಧ್ಯವಾಗದಿದ್ದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವಿಚಾರ ಮಂಡಿಸಿ ಮಂಟೇಸ್ವಾಮಿ ಅಧ್ಯಯನ ಪೀಠವನ್ನು ಹೊಸದಾಗಿ ಇಲ್ಲಿಯೇ ಆರಂಭಿಸಿ ಜಿಲ್ಲೆಯಲ್ಲಿ ಮಂಟೇಸ್ವಾಮಿ ಪರಂಪರೆ ಉಳಿವಿಗೆ ಪ್ರಯತ್ನಿಸಲಾಗುವುದು ಎಂದು ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಹೇಳಿದರು.

   ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪೆÇ್ರ. ಎಂ. ನಂಜಯ್ಯ ಹೊಂಗನೂರು ಅವರು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ವಲಯದ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕು. ಶಿಕ್ಷಣಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪ್ರಾಮುಖ್ಯತೆ ನೀಡಬೇಕು. ಶತಮಾನ ಕಂಡ ಕನ್ನಡ ಶಾಲೆಗಳನ್ನು ಪುನಶ್ಚೇತನಗೊಳಿಸಬೇಕು. ಕನ್ನಡ ಭಾಷೆ, ಸಾಹಿತ್ಯ ಉಳಿವಿಗೆ ಪ್ರಜ್ಞಾವಂತ ಕನ್ನಡಿಗರು ಮುಂದಾಗುವ ಮೂಲಕ ಕನ್ನಡ ಕಟ್ಟಲು ನೆರವಾಗಬೇಕು ಎಂದರು. 

   ಚಾಮರಾಜನಗರ ಜಿಲ್ಲೆಯು ಮಹದೇಶ್ವರರು, ಮಂಟೇಸ್ವಾಮಿ ನಡೆದಾಡಿದ ಪೂಣ್ಯಭೂಮಿಯಾಗಿದೆ. ಮಂಟೇಸ್ವಾಮಿ ಅಧ್ಯಯನ ಪೀಠ ಮೈಸೂರಿಗೆ ಸ್ಥಳಾಂತರವಾಗಿರುವುದು ಬೇಸರದ ಸಂಗತಿ. ಅಧ್ಯಯನ ಪೀಠವನ್ನು ಪುನಹ ಚಾಮರಾಜನಗರ ವಿ.ವಿಗೆ ನೀಡಲು ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಲಾಗುವುದು ಎಂದು ಪೆÇ್ರ. ಎಂ. ನಂಜಯ್ಯ ಹೊಂಗನೂರು ಅವರು ತಿಳಿಸಿದರು.

   ಕಾರ್ಯಕ್ರಮದಲ್ಲಿ ಕನ್ನಡ ಭಾμÉ ಮತ್ತು ಸಾಹಿತ್ಯದ ಪ್ರಸ್ತುತ ಸವಾಲುಗಳ ಕುರಿತು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ (ಮೌಲ್ಯಮಾಪನ) ಪೆÇ್ರ. ಕೆ.ಎಂ. ಮಹದೇವನ್, ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಪೆÇ್ರ. ಕೃಷ್ಣಮೂರ್ತಿ ಹನೂರು ಅವರು ಮಾತನಾಡಿದರು. 

   ಚಾಮರಾಜನಗರ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಮಹೇಶ್‍ಬಾಬು, ಅಧ್ಯಾಪಕರಾದ ಬಿ. ಗುರುರಾಜು ಯರಗನಹಳ್ಳಿ, ಮೂಕಹಳ್ಳಿ ಎಂ.ಎಸ್. ಬಸವಣ್ಣ, ಡಾ. ಆರ್. ಶಶಿಕಲಾ, ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

   ವಿಚಾರ ಸಂಕಿರಣದ ಅಂಗವಾಗಿ ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಗೋಷ್ಠಿಗಳಲ್ಲಿ ವಿಷಯತಜ್ಞರು ವಿವಿಧ ವಿಚಾರಗಳನ್ನು ಮಂಡಿಸಿದರು.

Leave a Reply

Your email address will not be published. Required fields are marked *