ತಮ್ಮಡಹಳ್ಳಿ ಕೆರೆಯಿಂದ ಆನೆಮಡುವಿನಕೆರೆಗೆ ಪೈಪ್‌ಲೈನ್ ಕಾಮಗಾರಿ ಖಂಡಿಸಿ ರೈತ ಸಂಘಟನೆ, ಉಡಿಗಾಲ ಗ್ರಾಮಸ್ಥರಿಂದ ಪ್ರತಿಭಟನೆ

  • ಕಾಲುವೆ ಮುಖಾಂತರ  ಆನೆಮಡುವಿನಕೆರೆಗೆ  ನೀರು ಹರಿಸಲು ಆಗ್ರಹ

ಚಾಮರಾಜನಗರ: ತಮ್ಮಡಹಳ್ಳಿ ಕೆರೆಯಿಂದ ಆನೆಮಡುವಿನಕೆರೆಗೆ ಪೈಪ್‌ಲೈನ್ ಕಾಮಗಾರಿ ಮಾಡುವುದನ್ನು ಖಂಡಿಸಿ ರೈತ ಸಂಘಟನೆಗಳು, ಉಡಿಗಾಲ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಶಾಮಿಯಾನ ‌ ಹಾಕಿ ಬೆಳಿಗ್ಗೆಯಿಂದ ಮದ್ಯಾಹ್ನ 3 ಗಂಟೆತನಕ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆ ಇಇ ಗುರುಪ್ರಸಾದ್ ಭೇಟಿ ಮೇಲಾಧಿಕಾರಿಗಳ ಜೊತೆ ಮಾತನಾಡಿ 2, 3 ದಿನಗಳೊಳಗೆ ರೈತರು, ಗ್ರಾಮಸ್ಥರ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾನಿತರು ಪ್ರತಿಭಟನೆ ಕೈ ಬಿಟ್ಟರು.

ನಂಜದೇವನಪುರ ಎಲ್ಲೆಯಲ್ಲಿ ಸ. ನಂ 155 ಆನೆ ಮಡುವಿನ ಕೆರೆಯಾಗಿದ್ದು ಸರಿ ಸುಮಾರು 44 ಎಕರೆ ಗಿಂತ ಮೇಲ್ಪಟ್ಟಿದ್ದು ಅದು ಸಣ್ಣ ನೀರಾವರಿ ಇಲಾಖೆಗೆ ಸೇರಿರುತ್ತದೆ. ಈ ಆನೆ ಮಡುವಿನ ಕೆರೆಗೆ ಪ್ರಕೃತಿ ದತ್ತವಾದ  ಉಡಿಗಾಲ ಗ್ರಾಮದ ಚಿಕ್ಕಮೋರಿ ಕಾಲುವೆ ಮುಖಾಂತರ ಕಾವೇರಿ ನೀರಾವರಿ ನಿಗಮ ದವರು ಗುರುತ್ವಾಕರ್ಷಣ ದ ಮೂಲಕ ನೀರು ಹರಿಸಿ ಕೆರೆಯನ್ನು ತುಂಬಿಸುತ್ತಿದ್ದಾರೆ. ಆನೆ ಮಡುವಿನ ಕೆರೆಯು 20 ಕೆರೆಗಳನ್ನು ತುಂಬಿಸುವ ಯೋಜನೆಯಲ್ಲಿ ಸೇರಿದ್ದು, ತಾಂತ್ರಿಕ ದೋಷದಿಂದ ಸುಮಾರು ವರ್ಷಗಳು ನೀರನ್ನು ತುಂಬಿಸಲು ಆಗದೇ ತದನಂತರದಲ್ಲಿ ದೋಷವನ್ನು ಸರಿಪಡಿಸಿ ಕೆರೆಗೆ ನೀರನ್ನು ಹರಿಸಿ ತುಂಬಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ತಮ್ಮಡಹಳ್ಳಿ ಕೆರೆಯಿಂದ ಪೈಪ್ ಲೈನ್ ಮೂಲಕ ನೀರು ತುಂಬಿಸುತ್ತೇವೆ ಎಂದು ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಕಾವೇರಿ ನೀರಾವರಿ ನಿಗಮದವರು ಅಧಿಕಾರ ದುರುಪಯೋಗ ಮಾಡಿಕೊಂಡು ಮತ್ತು ಕಾನೂನು ಬಾಹಿರವಾಗಿ ತಮ್ಮ ಇಚ್ಛೆಗೆ ಅನುಸಾರದಂತೆ ಪೈಪ್ ಲೈನನ್ನು ಮಾಡಲು ಯೋಜನೆ ರೂಪಿಸಿ ಗುತ್ತಿಗೆಗೆ ಕೊಟ್ಟಿರುತ್ತಾರೆ. ಅವರು ಮಾಡುತ್ತಿರುವುದು ಅಕ್ಷಮ್ಯ ವೆಂದು ನಾವು ದಾಖಲೆಗಳ ಸಮೇತ ಸಾಭೀತು ಮಾಡಲು ಸಿದ್ಧರಿದ್ದೇವೆ. ಕಾವೇರಿ ನೀರಾವರಿ ನಿಗಮ ದವರು ಮತ್ತು ಸಣ್ಣ ನೀರಾವರಿ ಇಲಾಖೆಯವರ ವಿರುದ್ದ  ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಒಂದು ವೇಳೆ ನಾಲಾ ಮುಖಾಂತರ ನೀರು‌ಹರಿಸುವುದು ಬಿಟ್ಟು  ಪೈಪ್ ಲೈನ್ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮದ ಮುಖಂಡರಾದ ಮಾದೇಶ್ ಕಟ್ಟೆಹೊಲ, ಯು.ಎಂ.ಪ್ರಭುಸ್ವಾಮಿ, ಉಡಿಗಾಲ ಕುಮಾರಸ್ವಾಮಿ, ಮಂಜು, ಬಿ. ಗುರುಪ್ರಸಾದ್ ಎಚ್ಚರಿಸಿದರು
ಪ್ರತಿಭಟನೆಯಲ್ಲಿ ರೈತರು, ಗ್ರಾಮಸ್ಥರು ಭಾಗವಹಿಸಿದ್ದರು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು.

Leave a Reply

Your email address will not be published. Required fields are marked *