ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಂ.ಬಸವಣ್ಣ ಅವರಿಗೆ ಸನ್ಮಾನ

ಚಾಮರಾಜನಗರ:  ಇತ್ತೀಚಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿದ ಚಾಮರಾಜನಗರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ ಅವರನ್ನು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್
ಹಾಗೂ ಚಾಮರಾಜನಗರ ಹಾಲು ಉತ್ಪಾದಕರ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಗರದ ರಥದ ಬೀದಿಯಲ್ಲಿರುವ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಸಭಾಂಗಣದಲ್ಲಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಫಲತಾಂಬುಲ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಹೆಚ್.ಎಂ.ಬಸವಣ್ಣ ಮಾತನಾಡಿ, ತಮ್ಮ 32 ವರ್ಷಗಳ ಸಹಕಾರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ತಮಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ವಿವಿಧ ಸಂಘಸಂಸ್ಥೆಗಳ ಮುಖಂಡರು ತಮ್ಮನ್ನು ಸನ್ಮಾಸುತ್ತಿರುವುದು ತುಂಬಾ ಸಂತಸವಾಗಿದೆ ಎಂದರು.

ಸನ್ಮಾನಿಸಿದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಹೆಚ್. ಎಂ.ಬಸವಣ್ಣ ಅವರು 32 ವರ್ಷಗಳಿಂದಲ್ಲೂ ವಿವಿಧ ಸಹಕಾರ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಯಾಗಿ ನಿರಂತರವಾಗಿ ಇದುವರೆವಿಗೂ ಸೇವೆ ಸಲ್ಲಿಸಿದ್ದಾರೆ. ವೆಂಕಟಯ್ಯನಛತ್ರದ ಪ್ರಾಥಮಿಕ ‌ ಕೃಷಿ ಪತ್ತಿನ ಸಂಘದಲ್ಲಿ ನಿರ್ದೇಶಕರಾಗಿದ್ದು, ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘ ನಿರ್ದೇಶಕರಾಗಿ, 3ನೇ ಬಾರಿಗೆ ಅಧ್ಯಕ್ಷರಾಗಿ ಈಗಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಜಿಲ್ಲಾ ಸಹಕಾರ ಯೂನಿಯನ್ ನಲ್ಲೂ ನಿರ್ದೇಶಕರಾಗಿ, ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿ ವೃದ್ಧಿ ಬ್ಯಾಂಕ್ 2 ಬಾರಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಅವರ ಸಹಕಾರ ಸೇವೆಗೆ ಸಂದ ಫಲವಾಗಿದೆ. ಅವರಿಗೆ ಸಹಕಾರ ರತ್ನ ಪ್ರಶಸ್ತಿ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ಅವರಿಗೆ ಮುಂದಿನ ದಿನಗಳಲ್ಲೂ ದೊಡ್ಡ‌ಮಟ್ಟದ ಪ್ರಶಸ್ತಿ ಗಳು ಲಭಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ  ಪಿಎಲ್ ಡಿ  ಬ್ಯಾಂಕ್ ಉಪಾಧ್ಯಕ್ಷ ಮಹದೇವನಾಯಕ, ಮುಖಂಡ ಚಂದಕವಾಡಿ ಕಪಿನಿನಾಯಕ, ಚಾಮರಾಜನಗರ ಹಾಲು ಉತ್ಪಾದಕರ ನೌಕರರ ಸಂಘದ ದಿನೇಶ್, ಸೋಮಣ್ಣ, ಮಹದೇವಪ್ಪ, ಮಹೇಶ, ಅರಸ್, ಸಿದ್ದರಾಜು, ಕುಮಾರಸ್ವಾಮಿ, ಬೆಂಡರವಾಡಿ ಮಹೇಶ್ ಪಟೇಲ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *