ಚಾಮರಾಜನಗರ: ವಿ.ಎನ್.ಯೋಧ ಮಾರ್ಷಲ್ ಆಕಾಡೆಮಿ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆ ಪಟುಗಳು ಭಾಗವಹಿಸಿ ಕಟಾ, ಕುಮಿತೆ ವಿಭಾಗದಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿ ಬಹುಮಾನಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಟಾದಲ್ಲಿ ಬಾಲಕಿಯರ ವಿಭಾಗದಲ್ಲಿ ಅಮರಾ,ಕಾಮಿಲಾ, ಸೋನು ಪ್ರಥಮ, ಜೋಯಾ ದ್ವಿತೀಯ, ಫಾತಿಮಾ, ಇಖ್ರಾ, ಬಾಲಕರ ವಿಭಾಗದಲ್ಲಿ ಮಹಮ್ಮದ್ ಅತೀಫ್, ಅವೇಜ್ ಕಮಲ್, ಸೈಯದ್ ರಿಹಾನ್, ಸೈಯದ್ ಜುಹೇರ್, ಮಹಮ್ಮದ್ ಹುಜೈಫಾ ಪ್ರಥಮ, ಎಂ.ಆರ್.ಭರತ್ ಕುಮಾನ್, ಚಿರಂತ್, ಮಹಮ್ಮದ್ ನಿಹಾಲ್, ಸೈಯದ್ ಆಯಾನ್ ದ್ವಿತೀಯ , ಮಹಮ್ಮದ್, ಮಹಮ್ಮದ್ ಜಿಷಾನ್, ಮಹಮ್ಮದ್ ಅಲಿ, ಕುಮಿತೆ ವಿಭಾಗದಲ್ಲಿ ಫಾತಿಮಾ ಪ್ರಥಮ ಮೊಹಮ್ಮದ್ ದ್ವಿತೀಯ, ಅತಿಫ್ , ಜುಹೇರ್ ಅಮರಾ
ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅಭಿನಂದನೆ: ವಿಜೇತ ಕರಾಟೆ ಪಟುಗಳನ್ನು ಮುಖ್ಯ ಕರಾಟೆ ತರಬೇತುದಾರರು ಹಾಗೂ ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರರಾದ ಸೆನ್ಸಾಯ್ ಗಳಾದ ಯೋಗೀಶ್, ಅಬ್ದುಲ್ ಫೈಸಲ್, ವಿಜಯ್ ಅಭಿನಂದಿಸಿದ್ದಾರೆ.
ಸನ್ಮಾನ: ವಿಜೇತ ಕರಾಟೆ ಪಟುಗಳನ್ನು ಮುಖ್ಯ ಕರಾಟೆ ತರಬೇತುದಾರರು ಹಾಗೂ ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರರಾದ ಸೆನ್ಸಾಯ್ ಗಳಾದ ಯೋಗೀಶ್, ಅಬ್ದುಲ್ ಫೈಸಲ್, ವಿಜಯ್ ಅವರನ್ನು ಕರಾಟೆಪಟುಗಳ ಪೋಷಕರು ಸನ್ಮಾನಿಸಿದರು.
