- ಉಡಿಗಾಲ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ

ಚಾಮರಾಜನಗರ: ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಮುಖಂಡ ಯು.ಎಂ.ಪ್ರಭುಸ್ವಾಮಿ ಹೇಳಿದರು.
ತಾಲೂಕಿನ ಉಡಿಗಾಲ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಜಿ.ಪಂ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಮತ್ತು ಸಾರಕ್ಷತಾ ಇಲಾಖೆ ವತಿಯಿಂದ ನಡೆದ 2026-07 ನೇ ಸಾಲಿನ ಉಡಿಗಾಲ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯು ಧರ್ಮ ರಹಿತ, ವರ್ಣ ರಹಿತ, ಭಾಷೆ ರಹಿತವಾಗಿದ್ದು,ಸರ್ಕಾರಿ ಶಾಲೆಯು ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತಮ್ಮ ತಂದೆ ಮಾಜಿ ಶಾಸಕರಾಗಿದ್ದ ಮಾದಪ್ಪ ಅವರು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದರು. ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಆಗಾಗಿ ಈ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಚೆನ್ನಾಗಿ ಓದುವ ಮೂಲಕ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡ ಮಾದೇಶ್ ಮಾತನಾಡಿದರು.
ಎಸ್ ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್ ಪಿ ಮಾದೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು.
ಗುತ್ತಿಗೆದಾರ ಸಿದ್ದರಾಜಪ್ಪ, ಪಿಡಿಓ ಕಾವೇರಿ,ಬಿಆರ್ ಪಿ ಮಹದೇವಪ್ಪ, ಎಸ್ ಡಿಎಂಸಿ ಹಾಲಿ ಸದಸ್ಯರು, ಮಾಜಿ ಸದಸ್ಯರು, ಮುಖ್ಯ ಶಿಕ್ಷಕ ಎಂ.ಡಿ.ಮಹದೇವಯ್ಯ, ಸಹ ಶಿಕ್ಷಕರಾದ ಪ್ರಸಾದ್, ಚೆನ್ನಬಸವಣ್ಣ, ವಿಜಯಲಕ್ಷ್ಮಿ, ಬಿ.ಆರ್.ಪದ್ಮಾವತಿ, ಟಿ.ವೀಣಾ, ಪ್ರಿಯದರ್ಶಿನಿ, ವೀಣಾ, ರಾಜೇಶ್ವರಿ, ಕ್ಲಸ್ಟರ್ ನ ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
