ಸಾಂಸ್ಕೃತಿಕ ಮಹಾಪುರುಷರ ಹೆಜ್ಜೆ ಗುರುತುಗಳು ಕುರಿತ ವಿಚಾರ ಸಂಕಿರಣ, ಸಾಂಸ್ಕೃತಿಕ ಉತ್ಸವ
ಚಾಮರಾಜನಗರ : ಜಾನಪದ ಈ ಮಣ್ಣಿನ ಸಾಂಸ್ಕೃತಿಕ ನೆಲೆಗಟ್ಟು ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಹೇಳಿದರು.
ನಗರದ ರೋಟರಿ ಭವನದಲ್ಲಿ ಕರ್ನಾಟಕ ಸರ್ಕಾರ, ರಂಗಜಂಗಮ ಜನಪದ ವೇದಿಕೆ, ಕನ್ನಡ ಮತ್ತು. ಸಂಸ್ಕೃತಿ ಇಲಾಖೆ ಬೆಂಗಳೂರು ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಮಹಾಪುರುಷರ ಹೆಜ್ಜೆ ಗುರುತುಗಳು ಕುರಿತ ವಿಚಾರ ಸಂಕಿರಣ, ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಪ್ರದಾಯಿಕ ಹಾಡು ಹೇಳುವವರು ಕೆಳಸ್ತರದ ಜನರನ್ನು ಸೇರಿಸುತ್ತಿರಲಿಲ್ಲ. ಅದರಲ್ಲೂ ಕೆಳಸ್ತರದವರು ಕಟ್ಟಿರುವ ಸಂಸ್ಕೃತಿಗೆ ಸಂಪ್ರದಾಯಿಕ ಹಾಡುಗಳನ್ನು ಹಾಡುತ್ತಿದ್ದರು ಇಂದು ಜಾನಪದಕ್ಕೆ ನಿಮ್ಮ ಮೇಲೆ ಕೈ ಹಾಕಿದ್ದಾರೆ. ನೀವು ಎಚ್ಚರಿಕೆ ವಹಿಸಬೇಕು. ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಪದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲದಿದ್ದರೆ ಬಹಳಷ್ಟು ಮಂದಿ ಜಾನಪದ ಕಲೆಯಲ್ಲಿ ಮುಂದೆ ಬರುತ್ತಿರಲಿಲ್ಲ. ಹಿಂದೆ ಜಾನಪದ ಹಾಡುಗಳನ್ನು ಹಾಡಲು ಕೀಳಿರಿಮೆಯಿತ್ತು. ಎಸ್.ಕೆ. ಕರೀಂಖಾನ್, ಎಚ್.ಎಲ್.ನಾಗೇಗೌಡರು, ಪರಶಿವಬಸವಯ್ಯನವರು ಸೇರಿದಂತೆ ಎಲ್ಲ ವಿದ್ವಾಂಸರು ಜಾನಪದ ಹಾಡುಗಳ ಕೀಳಿರಿಮೆಯಲ್ಲ ಮೇಳಿರಿಮೆ ವೇದಿಕೆಯಲ್ಲಿ ಹಾಡಬಹುದು ಎಂದು ಮಾರ್ಗದರ್ಶನ ನೀಡಿದರು. ಆಗಾಗಿ ಇಂದು ಜಾನಪದ ಸರ್ವವ್ಯಾಪಿಯಾಗಿ ಬೆಳೆದಿದೆ. ಕಲಾವಿದರು ಜಿಲ್ಲೆಗೆ ಗೌರವ ತಂದು ಕೊಟ್ಟಿದ್ದಾರೆ ಎಂದರು.
ಚಾಮರಾಜನಗರ ಶಾಪಗ್ರಸ್ತ ಜಿಲ್ಲೆಯಲ್ಲ: ಸಾಹಿತಿ ಮಹದೇವ ಶಂಕನಪುರ ಕಾರ್ಯಕ್ರಮ ಉದ್ಘಾಟಿಸಿ
ಸಾಂಸ್ಕೃತಿಕ ಮಹಾಪುರುಷರ ಹೆಜ್ಜೆ ಗುರುತುಗಳು ವಿಚಾರ ಕುರಿತು ಮಾತನಾಡಿ, ಚಾಮರಾಜನಗರ ಜಿಲ್ಲೆಯು ಶಾಪಗ್ರಸ್ತ ಜಿಲ್ಲೆಯಲ್ಲ, ಶಾಪ ವಿಮೋಚನೆ ಮಾಡುವ ಜಿಲ್ಲೆಯಾಗಿದೆ. ಜಿಲ್ಲೆಯ ಮಣ್ಣು ಇದು ಎಲ್ಲ ರೀತಿಯ ವಿಮೋಚನೆ ಮಾಡುವಂತಹ ಮಹಿಮಪುರುಷರು, ಪವಾಡಪುರುಷರು, ಸತ್ಪುರುಷರು, ಯೋಗಿಗಳು, ಸಿದ್ಧಪುರುಷರು ನಡೆದಾಡಿರುವ ಈ ನೆಲ ಹೇಗೆ ಶಾಪಗ್ರಸ್ತವಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ಚಾಮರಾಜನಗರದ ನೆಲದ ಸ್ಪರ್ಶ ಮಾಡುವವರಿಗೆ ಶಾಪವಿಮೋಚನೆಯಾಗಿ ಒಳ್ಳೆಯದಾಗುವುದನ್ನು ನಾವು ನೋಡುತ್ತೇವೆ ಹೊರತು ಯಾವ ದೃಷ್ಟಿನಲ್ಲೂ ಶಾಪಗ್ರಸ್ತ ಜಿಲ್ಲೆಯಲ್ಲ. ಈ ನೆಲದಲ್ಲಿ ವಾಲಾಡುವ, ಎಲ್ಲರ ತಲೆಯ ಮೇಲೆ ಆರ್ಶೀವಾದ ಮಾಡುವ ಮಲೈಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ, ಗೋಪಾಲಸ್ವಾಮಿ, ಬಿಳಿಗಿರಿರಂಗಸ್ವಾಮಿ, ಈ ರೀತಿ ಹಲವಾರು ಸಂತರನ್ನೊಳಗೊಂಡು ಎಲ್ಲರ ಪಾಪವನ್ನು ವಿಮೋಚನೆ ಮಾಡುವವರು ಜಿಲ್ಲೆಯಲ್ಲಿ ನೆಲೆಸಿದ್ದಾರೆ ಎಂದರು.
ಸಾಂಸ್ಕೃತಿಕ ಮಹಾಪುರುಷರ ಹೆಜ್ಜೆ ಗುರುತುಗಳು ಒಂದು ದೊಡ್ಡ ಪಿಹೆಚ್‌ಡಿಗೆ ಸಮಾನವಾದ ವಿಷಯ ಇದು. ಅಂತಹ ಮಹತ್ವದ ವಿಷಯವನ್ನು ವಿಶ್ವವಿದ್ಯಾನಿಲಯಗಳಲ್ಲಿ, ಜಾನಪದ ಅಕಾಡೆಮಿಗಳಲ್ಲಿ ಸಾಹಿತ್ಯ ಆಕಾಡೆಮಿಗಳಲ್ಲಿ ವಿದ್ವತ್ ಪೂರ್ಣವಾದಂತಹ ವೇದಿಕೆಗಳಲ್ಲಿ ನಾವು ಮಾತನಾಡುವ ವಸ್ತು ವಿಷಯವಾಗಿದೆ ಎಂದರು.
ರೋಟರಿ ಅಧ್ಯಕ್ಷ ಅಬ್ದುಲ್‌ಅಜೀಜ್ ದೀನಾ, ನಗರಸಭಾ ಮಾಜಿ ಸದಸ್ಯ ಎಂ.ಮಹೇಶ್ ಚಿತ್ರನಟ ಉಮ್ಮತ್ತೂರು ಬಸವರಾಜು ಮಾತನಾಡಿದರು. ರಂಗಜಂಗಮ ಜನಪದ ವೇದಿಕೆ ಅಧ್ಯಕ್ಷ ಮಹೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಸನ್ಮಾನ : ಜನಪದ ಆಕಾಡೆಮಿ ಪುರಸ್ಕೃತ ನಿಂಗಶೆಟ್ಟಿ, ತತ್ವಪದ ರಾಚಯ್ಯ, ಚಿತ್ರಕಲಾವಿದ ಮಂಗಲ ಹೊಸೂರು ಮಧುಸೂದನ್, ಅಕಾಶವಾಣಿ ಕಲಾವಿದೆ ತೊಳಸಮ್ಮ ಅವರನ್ನು ಸನ್ಮಾನಿಸಲಾಯಿತು.
ತಂಬೂರಿ ಪದ,ಸೋಬಾನೆ ಪದ ಜನಪ್ರಿಯ ಗೀತೆಗಳು, ಜನಪದ ಹಾಡುಗಳು, ಖುಷಿ ನೀಡಿತು.
ಕಾರ್ಯಕ್ರಮದಲ್ಲಿ ನಾಗ್ರಮೇಶ್,
ಮಹೇಂದ್ರ, ಪರಶಿವಮೂರ್ತಿ, ಸುಮಿತ್ರ, ನಿಂಗರಾಜಮ್ಮ, ರಾಜಶೇಖರ್ , ಜೈ ಗುರು ಮಹದೇವಸ್ವಾಮಿ, ಕಾವ್ಯ, ಸೌಂದರ್ಯ, ಪುಷ್ಪ ,ಅಮೂಲ್ಯ, ದೀಕ್ಷ ,ಸ್ಪೂರ್ತಿ, ಪ್ರೇರಣ ಇತರರು ಹಾಜರಿದ್ದರು.
