BSS ವಿದ್ಯೋದಯ ಸಂಸ್ಥೆಯಿಂದ ಸ್ವಾತಂತ್ರ್ಯದಿನಾಚರಣೆ

ಮೈಸೂರು: ನಗರದ ಬಿಎಸ್‍ಎಸ್ ವಿದ್ಯೋದಯ ಸಂಸ್ಥೆಯಿಂದ ಸಂಭ್ರಮ ಹಾಗೂ ದೇಶಭಕ್ತಿಯೊಂದಿಗೆ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಯುರ್ವೇದ ವೈದ್ಯರಾದ ಡಾ. ಎ. ಎಸ್. ಚಂದ್ರಶೇಖರ್ ಪಾಲ್ಗೊಂಡಿದ್ದರು.


ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಸ್ತು, ಜ್ಞಾನ, ದೇಶಭಕ್ತಿ ಮತ್ತು ಸಮಾಜಸೇವೆಯ ಮಹತ್ವವನ್ನು ತಿಳಿಸಿದರು.
ಡಾ.ಎ.ಎಸ್. ಚಂದ್ರಶೇಖರ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಅಗತ್ಯ ಇರುವವರಿಗೆ ಉಚಿತ ಔಷಧಿಗಳನ್ನು ನೀಡುವಂತಹ ಹಲವು ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದಾರೆ. ಅವರು ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಆಯುರ್ವೇದ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಇವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಮಾಜ ಸೇವಕರೂ ಕೂಡಾ ಆಗಿರುವ ಇವರ ಕಾರ್ಯವನ್ನು ಮೆಚ್ಚಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಪರವಾಗಿ ವಾಸುದೇವ ಭಟ್ಟಾ, ಮುರುಳಿಧರ ಭಟ್ಟಾ, ಪ್ರಾಂಶುಪಾಲರಾದ ನವ್ಯ ಜಗದೀಶ್ ಅವರು ಉಪಸ್ಥಿತರಿದ್ದರು.
ನಂತರ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ, 3, 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳು ಕಿರು ನಾಟಕ ಹಾಗೂ ಶಿಕ್ಷಕರ ನೃತ್ಯ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *