ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಹುಟ್ಟುಹಬ್ಬ : ಆಶ್ರಮಕ್ಕೆ ಅಕ್ಕಿ,ಆಹಾರ ಪದಾರ್ಥ ವಿತರಣೆ.

ಚಾಮರಾಜನಗರ: ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಘಟಕದ ವತಿಯಿಂದ ನಗರದ ನಂಜನಗೂಡು ರಸ್ತೆಯಲ್ಲಿರುವ ಶ್ರೀಅನುಲಕ್ಷ್ಮೀ ಸೇವಾ ಆಶ್ರಮದಲ್ಲಿ ಕೇಕ್ ಕತ್ತರಿಸಿ ಹಂಚುವ ಮೂಲಕ ಆಚರಿಸಲಾಯಿತು. ಆಶ್ರಮಕ್ಕೆ ಅಕ್ಕಿ, ಆಹಾರ ಪದಾರ್ಥಗಳನ್ನು ವಿಕರಿಸಲಾಯಿತು.
   ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಹಂಚಿಕೆ ಮಾಡಲಾಯಿತು.
   ಈ ಸಂದರ್ಭದಲ್ಲಿ ಆರ್.ಪಿ.ನಂಜುಂಡಸ್ವಾಮಿ ಮಾತನಾಡಿ, ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ಶ್ರೀಆನುಲಕ್ಷ್ಮೀ ಸೇವಾ ಆಶ್ರಮದಲ್ಲಿ ಕೇಕ್ ಕತ್ತರಿಸಿ ಹಂಚುವ ಮೂಲಕ ಆಚರಿಸಿ, ಆಶ್ರಮಕ್ಕೆ ಅಕ್ಕಿ, ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಆಚರಣೆ ಮಾಡಲಾಯಿತು ಎಂದರು.
   ವೇದಿಕೆಯ ಜಿಲ್ಲಾ ಘಟಕ, ತಾಲೂಕು ಘಟಕಗಳು ರಚನೆಯಾಗಿದ್ದು, ಪದಾಧಿಕಾರಿಗಳ ಹುಟ್ಟಹಬ್ಬಕ್ಕೆ ಈ ಆಶ್ರಮಕ್ಕೆ ಬೇಕಾದ ಸಹಕಾರ ಕೊಡುತ್ತೇವೆ. ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಯೂತ್ ಐಕಾನ್ ಆಗಿದ್ದಾರೆ. ಸಂಘಟನೆಗಳು ಎರಡು
ರೀತಿಯಲ್ಲಿ ಕಾರ್ಯಾಚರಣೆ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ನಾಡಿನಲ್ಲಿ ಜಲ ಸಂಸ್ಕೃತಿಗೆ ಕನ್ನಡಕ್ಕೆ ವ್ಯತ್ಯಾಸವಾದರೆ ಪ್ರತಿಭಟಿಸುವುದು ಒಂದು ಕಡೆಯಾದರೆ. ಇನ್ನೊಂದು ಕಡೆ ಈ ದೇಶದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ.ಸ್ಥಳೀಯ ಸಂಸ್ಥೆಗಳು ವ್ಯತ್ಯಾಸ ಮಾಡಿದಾಗ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ’ ಎಂದು ತಿಳಿಸಿಕೊಟ್ಟಿದ್ದಾರೆ. ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಆಶಿಸಿದರು.
ಫೌಂಡೇಶನ್ ಶ್ರೀಅನುಲಕ್ಷ್ಮೀ ಸೇವಾ ಆಶ್ರಮದ ಮಹದೇವು, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ನಾಗರಾಜು ಜ್ಯೋತಿಗೌಡನಪುರ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಹರದನಹಳ್ಳಿ, ಸಹ ಕಾರ್ಯದರ್ಶಿ ಮಹದೇವಸ್ವಾಮಿ, ಇರಸವಾಡಿ, ತಾಲೂಕು ಅಧ್ಯಕ್ಷ ರಘು, ಕಾರ್ಯಾಧ್ಯಕ್ಷ ಭರತ್, ಉಪಾಧ್ಯಕ್ಷ ನಂಜುಂಡಸ್ವಾಮಿ ಶಿವಪುರ, ಹಿರಿಯ ಮುಖಂಡ ಪಿ.ಜಯರಾಂ, ಚಂದ್ರಶೇಖರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *