ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಿಕೋದ್ಯಮ ಪಾತ್ರ ದೊಡ್ಡದು : ಸಿ.ಪುಟ್ಟರಂಗಶೆಟ್ಟಿ

  • ಪತ್ರಕರ್ತ ಪ್ರಕಾಶ್ ಬೆಲ್ಲದ್ ಅವರಿಗೆ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ

ಚಾಮರಾಜನಗರ ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಿಕೋದ್ಯಮ ಪಾತ್ರ ಬಹಳ ದೊಡ್ಡದು, ಸಮಾಜ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೋದ್ಯಮ ಪ್ರಮುಖಪಾತ್ರ ವಹಿಸುತ್ತದೆ ಎಂದು ಎಂಎಸ್‌ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸೆಮಿನಾರ್ ಹಾಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕ ಸಹಯೋಗ ಜೆಎಸ್‌ಎಸ್‌ ಮಹಾವಿದ್ಯಾಪೀಠ ಮೈಸೂರು ವತಿಯಿಂದ ನಡೆದ ಶ್ರೀಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ. ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾರಂಗ ಸಮಾಜ ಎಚ್ಚರಿಸುವ ಕೆಲಸ ಮಾಡುತ್ತಿದೆ. ದಿಕ್ಕು ತಪ್ಪುವ ಸಮಾಜ ಜನಪ್ರತಿನಿಧಿಗಳನ್ನು ಎಚ್ಚರಿಸುವ, ಒಳ್ಳೆಯರನ್ನು ಬೆಳಕು ಚೆಲ್ಲುವ ಎರಡು ಕೆಲಸವನ್ನು ಪತ್ರಿಕಾ ರಂಗ ಮಾಡುತಿದೆ. ತಮ್ಮ ಲ್ಲಿ ಏನಾದರೂ ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಒಂದು ಅವಕಾಶ ಇರುತ್ತದೆ. ಜಿಲ್ಲೆ, ತಾಲೂಕು, ರಾಜ್ಯದಲ್ಲಿ ಪತ್ರಿಕಾರಂಗ ಬೆಳುಕು ಚೆಲ್ಲುವ ಕೆಸಲವನ್ನು ಪತ್ರಿಕಾ ರಂಗ ಮಾಡುತ್ತಿದೆ. ಅಂತಹ ಕೆಲಸ ಪ್ರಕಾಶ್ ಬೆಲ್ಲದ್ ಅವರು ಮಾಡಲಿ ಎಂದರು.

ಪ್ರಕಾಶ್ ಬೆಲ್ಲದ್ ನನಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಯಾವುದೇ ಕೆಲಸ ಆಗಲಿ ನಿಷ್ಠೆ, ಪ್ರಾಮಾಣಿಕವಾಗಿ ಮಾಡಿದರೆ ಫಲ ಸಿಕ್ಕಿಸಿಗುತ್ತದೆ. ಪ್ರಕಾಶ್ ಬೆಲ್ಲದ್ ಅವರಿಗೆ ಜೆಎಸ್‌ಎಸ್‌ ಮಹಾವಿದ್ಯಾಪೀಠ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿರುವುದು ತುಂಬಾ ಖುಷಿ ತಂದಿದೆ. ಅವರ ಪ್ರಾಮಾಣಿಕ ಸೇವೆಗೆ ಭಗವಂತ ಇನ್ನೂ ಹೆಚ್ಚಿನ ಪ್ರಶಸ್ತಿ ಲಭಿಸಲಿ, ಆರೋಗ್ಯ, ಆಯಸ್ಸು ಕರಣಿಸಲಿ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಶ್ರೀರೂಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಮ್ಮ ಜಿಲ್ಲೆಯ ಪತ್ರಕರ್ತರಿಗೆ ಜೆಎಸ್‌ಎಸ್ ಮಹಾವಿದ್ಯಾಪೀಠವು ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿರುವುದು ತುಂಬಾ ಸಂತಸವಾಗಿದೆ. ಜಿಲ್ಲೆಯು ತುಂಬಾ  ಅರಣ್ಯಪ್ರದೇಶವನ್ನು ಹೊಂದಿದೆ 160 ಗ್ರಾಮಗಳು ಹಾಡಿಗಳಲ್ಲಿದೆ. ಅಲ್ಲೆಲ್ಲ ನಮ್ಮ ಮಾಧ್ಯಮಮಿತ್ರರು ಹೋಗಿ ವರದಿ ಮಾಡುತ್ತಾರೆ. ಸಣ್ಣಪುಟ್ಟ ವಿಚಾರಗಳು ಜಿಲ್ಲಾಡಳಿತ ಗಮನಕ್ಕೆ ಬರುವುದಿಲ್ಲ ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿ ಅಂತಹ ಸ್ಥಳಗಳಿಗೆ  ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ. ಎಂದರು.
ಪತ್ರಿಕೆಗಳ ವರದಿಯಿಂದಲ್ಲೂ ಸಾಕಷ್ಟು ಸಮಸ್ಯೆ ಬಗೆಹರಿಯಲು ಕಾರಣವಾಗಿದೆ. ನಮ್ಮ ಜಿಲ್ಲೆಯ ಪೂರಕ ಶಕ್ತಿ ಆಗಿರುವ ಪತ್ರಕರ್ತರು ಯಾವುದೇ ಸುದ್ದಿಯನ್ನು. ಮಾಡುವಾಗ ಸತ್ಯಾಸತ್ಯತೆಯನ್ನು ನೋಡಿ ಮಾಡಬೇಕು. ಸುಳ್ಳು ಸುದ್ದಿಯಿಂದ ಸಮಾಜದಲ್ಲಿ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಪತ್ರಕರ್ತ ಪ್ರಕಾಶ್ ಬೆಲ್ಲದ್ ಮಾತನಾಡಿ, ನನ್ನ ಪತ್ರಿಕೋದ್ಯಮದ ಪ್ರಮಾಣಿಕ ಸೇವೆಯನ್ನು ಗುರುತಿಸಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಿರುವುದು. ತುಂಭಾ ಸಂಸತವಾಗಿದ್ದು, ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಎಂದರು.

ಮೈಸೂರಿನ ಹಿರಿಯ ಪತ್ರಕರ್ತರ ಸಿ.ಕೆ.ಮಹೇಂದ್ರ ಮಾತನಾಡಿ,  ಪ್ರಕಾಶ್ ಬೆಲ್ಲದ್ ಅವರು ಕಳೆದ 30 ವರ್ಷಗಳಿಂದಲೂ ಜಿಲ್ಲೆಯಲ್ಲಿ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ ಅವರಿಗೆ ಶ್ರೀಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಪ್ರಶಸ್ತಿಗೂ ಒಂದು‌ಮೌಲ್ಯ ದೊರೆಯಂತಾಗಿದೆ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠ ಮೈಸೂರು ಕಾರ್ಯದರ್ಶಿ 2 ಎಸ್.ಶಿವಕುಮಾರಸ್ವಾಮಿ ಮಾತನಾಡಿ, ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಸಂಭ, ಪ್ರಜಾಸತೆಯ ಕಾವಲುಗಾರ ಎನ್ನುತ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಷ್ಟೆ ಪತ್ರಿಕಾರಂಗವು. ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪತ್ರಿಕಾರಂಗವು ಸಾರ್ವಜನಿಕರಿಗೆ ನಿಖರವಾದ ತಕ್ಷಣದ ಮಾಹಿತಿ ನೀಡುವ ಮೂಲಕ ಜ್ಞಾನವನ್ನು  ಹರಡುವ ಕೆಲಸ ಮಾಡುತ್ತಿದೆ ಎಂದರು.
ಭಾರತದ ಪತ್ರಿಕೋದ್ಯಮವು ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಿದೆ. ಪತ್ರಿಕೆಗಳು.. ಮತ್ತು ಮಾಧ್ಯಮಗಳು ಜನರ ಅಲೋಚನೆಗಳ ಮೇಲೆ ಪ್ರಭಾವ ಬೀರುವ
ಕೆಲಸಗಳನ್ನು ಮಾಡುತಿವೆ. ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಮಾಧ್ಯಮವೂ ಪ್ರೇರಣೆ ನೀಡಿದೆ. ಜನರಿಗೆ ಶಿಕ್ಷಣ, ಜಾಗೃತಿ, ಮನರಂಜನೆ ನೀಡಿ ಪ್ರಜಾಪ್ರಭುತ್ವ ಬಲಪಡಿಸಲು ಪತ್ರಿಕೋದ್ಯಮ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪತ್ರಿಕೋದ್ಯಮಗಳನ್ನು ಪುರಸ್ಕರಿಸುವ ಸಲುವಾಗಿ ಶ್ರೀಶಿವರಾತ್ತೀಶ್ವರ ಮಾಧ್ಯಮ ಪ್ರಶಸ್ತಿ ಯನ್ನು ಸುತ್ತೂರು ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನವು 2011ರಲ್ಲಿ ಸ್ಥಾಪಿಸಲಾಯಿತು. ಒಂದು ಮೈಸೂರು ಜಿಲ್ಲೆಗೆ ಮತ್ತೊಂದು ಚಾಮರಾಜನಗರ ಜಿಲ್ಲೆಗೆ ಕೊಡಲ್ಪ ಮಾಡುತ್ತಾ ಬರಲಾಗಿದ್ದು, ಇದುವರಗೆ ಎರಡು ಜಿಲ್ಲೆಗಳಿಂದ 14 ಪತ್ರಕರ್ತರುಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ 2025ನೇ ಸಾಲಿನ ಪ್ರಶಸ್ತಿಯನ್ನು .. ಪತ್ರಕರ್ತರ ಪ್ರಕಾಶ್ ಬೆಲ್ಲದ್ ನೀಡಲಾಗಿದೆ ಎಂದರು.

ಚಾಮರಾಜನಗರ ಜಿಲ್ಲೆಗೆ ಪ್ರತಿವರ್ಷ ಪ್ರಶಸ್ತಿ ನೀಡಲು ಮನವಿ : ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 170ಕ್ಕೂ ಹೆಚ್ಚು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಪ್ರತಿವರ್ಷವೂ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡುವಂತೆ  ಮನವಿ ಮಾಡಿದರು ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಶಿವಕುಮಾರಸ್ವಾಮಿ ಅವರ ಮುಖಾಂತರ ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್,  ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *