ಯಶವಂತಪುರ: ಇಲ್ಲಿನ ಫೋರ್ಟಿಸ್ ಆಸ್ಪತ್ರೆಯು ಸಮುದಾಯದ ಆರೋಗ್ಯ ಮತ್ತು ಫಿಟ್ನೆಸ್ ಉತ್ತೇಜಿಸುವ ಉದ್ದೇಶದಿಂದ ‘ಫೋರ್ಟಿಸ್ ಕ್ರಿಕೆಟ್ ಲೀಗ್’ ಆಯೋಜಿಸಿದೆ. ಈ ಉಪಕ್ರಮದ ಪ್ರೀ-ಲಾಂಚ್ ಕಾರ್ಯಕ್ರಮದಲ್ಲಿ ಉದ್ಯಮಿ ದಿನೇಶ್ ಕುಂಬ್ಳೆ ಅತಿಥಿಗಳಾಗಿ ಭಾಗವಹಿಸಿದ್ದರು. ಆರೋಗ್ಯಕರ ಜೀವನಶೈಲಿ ಮತ್ತು ರೋಗ ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲು ಒಟ್ಟು 11 ಆರ್‌ಡಬ್ಲ್ಯೂಎಗಳು ಈ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿವೆ.