ಸಮಾನತೆ ಸಾರಿದ 21ನೇ ಶತಮಾನದ ಬಸವಣ್ಣ

  • ಬಡ ಮಕ್ಕಳಿಗೆ ಉಚಿತವಾಗಿ ಸಮ್ಮರ್ ಕ್ಯಾಂಪ್ ಆಯೋಜಿಸಿ ಯಶಸ್ವಿ
  • ಹಲವು ವೈಶಿಷ್ಠಕ್ಕೆ ಸಾಕ್ಷಿಯಾದ ಉಚಿತ ಬೇಸಿಗೆ ಶಿಬಿರ

ಮೈಸೂರು : ಅತ್ತ ಆಗಷ್ಟೆ ಶಾಲೆಗಳಲ್ಲಿ ಪರೀಕ್ಷೆ ಮುಗಿದು, ಬೇಸಿಗೆ ರಜೆ ನೀಡಲಾಗಿತ್ತು. ಮೊಬೈಲ್ ಮತ್ತು ಮೊಬೈಲ್ ಗೇಮ್‌ಗಳಿಗೆ ಅಡಿಕ್ಷನ್ ಆಗಿದ್ದ ಮಕ್ಕಳಿಗೆ ಈ ಸಮಯ ಹೇಳಿ ಮಾಡಿಸಿದ ರೀತಿಯಲ್ಲಿ ಇತ್ತು. ಇತ್ತ ವ್ಯಸನಮುಕ್ತ ಸಮಾಜ ನಿರ್ಮಾಣ ಕನಸ ಹೊತ್ತು ಮುಂದೆ ಸಾಗತ್ತಿದ್ದ ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ ಅವರಿಗೆ ಮಕ್ಕಳಲ್ಲಿನ ಮೊಬೈಲ್ ಅಡಿಕ್ಷನ್ ಕುರಿತು ಸಾಕಷ್ಟು ಕರೆಗಳು ಬರುತ್ತಿದ್ದವು. ಮಕ್ಕಳಿಗೆ ಮೊಬೈಲ್ ಅಡಿಕ್ಷನ್ ಬಿಡಿಸಲು ಏನಾದರೂ ಪರಿಹಾರ ಇದ್ದರೆ ಹೇಳಿ ಎಂದು ಹಲವರು ಅವರ ಬಳಿ ಸಲಹೆ ಕೇಳುತ್ತಿದ್ದರು. ಆ ಸಮಯಕ್ಕೆ ಬಸವಣ್ಣ ಅವರ ಚಿಂತನೆಗೆ ಬಂದಿದ್ದು ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸುವುದು. ಅದು ಉಚಿತವಾಗಿ.

ಹೌದು…
6 ವರ್ಷಗಳಲ್ಲಿ 56 ಉಚಿತ ಕುಡಿತ ಬಿಡಿಸುವ ಶಿಬಿರಗಳನ್ನು ಆಯೋಜಿಸಿದ್ದ ಬಸವಣ್ಣ, ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲು ನಿರ್ಧಾರವನ್ನು ಕೈಗೊಂಡೆ ಬಿಟ್ಟಿರು. ಅದರಂತೆ ಉಚಿತ ವಸತಿ ಸಹಿತ ಬೇಸಿಗೆ ಶಿಬಿರದ ದಿನಾಂಕವನ್ನೂ ಘೋಷಣೆ ಮಾಡಿಬಿಟ್ಟರು. ಘೋಷಣೆ ಮಾಡಿದ ದಿನದಿಂದಲೇ ನಿತ್ಯ 2 ಸಾವಿರ ಫೋನ್ ಕಾಲ್‌ಗಳು ಸಂಸ್ಥೆಗೆ ಬರುತ್ತಿತ್ತು. ನಮ್ಮ ಮಗನನ್ನು ಅಡ್ಮಿಷನ್ ಮಾಡಿಸಿಕೊಳ್ಳಿ ಎಂದು ಮುಗಿ ಬೀದ್ದರು. ಆದರೆ ಇರಾನ್, ಇಸ್ರೆಲ್, ಅಮೇರಿಕಾ ನಡುವಿನ ಯುದ್ಧದ ಕಾರ್ಮೋಡದಿಂದ ಕಮರ್ಷಿಯಲ್ ಸಿಲಿಂಡರ್‌ಗಳ ಅಭಾವ ಸೃಷ್ಠಿಯಾಯಿತು. ಸಿಲಿಂಡರ್ ಸಮಸ್ಯೆ ಮಿತಿ ಮೀರಿದಾಗ ಒಂದು ಹಂತಕ್ಕೆ ಶಿಬಿರವನ್ನು ನಡೆಸುವುದಾದರೂ ಹೇಗೆ ಎನ್ನುವ ಆತಂಕವೂ ಎದುರಾಯಿತು. ! ಸಿಲಿಂಡರ್ ಸಮಸ್ಯೆಯಿಂದ ಶಿಬಿರ ನಿಲ್ಲಬಾರದು, ಮಕ್ಕಳ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ನಿಶ್ಚಯ ಮಾಡಿದ ಬಸವಣ್ಣ ಅವರು, ಸೌದೆಹೊಲೆಯಲ್ಲಾದರೂ ಸರಿ ಅಡುಗೆ ಮಾಡಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಬೇಕೆಂದು ಗಟ್ಟಿ ನಿರ್ಧಾರ ಮಾಡಿದರು. ಅಂತಿಮವಾಗಿ ಬಸವಣ್ಣ ಅವರ ತಾಯಿ ಹೃದಯದ ಮೇಲೆ ನಂಬಿಕೆ ಇಟ್ಟ ಪಾಲಕರು ಅಂತಿಮವಾಗಿ 80 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವ ಮೂಲಕ ಅವರ ಮಡಿಲಿಗೆ ಹಾಕಿದರು.

ಏ. 12ಕ್ಕೆ ಪ್ರಾರಂಭವಾಯಿತು ಶಿಬಿರ : ಕೊನೆಗೂ ಏ. 12ಕ್ಕೆ ಶಿಬಿರ ಪ್ರಾರಂಭವಾಗಿಯೇ ಬಿಟ್ಟಿತು. ರಾಜ್ಯದ ನಾನಾ ಮೂಲೆಗಳಿಂದ ಬಂದಿದ್ದ ಮಕ್ಕಳು ಅಂದು ಒಂದು ತಿಂಗಳ ಶಿಬಿರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ದಾಖಲಾದರು. ಬಸವಮಾರ್ಗ ಆಶ್ರಮ ಶಾಖೆಯ ಅಚ್ಚುಕಟ್ಟಾದ ವ್ಯವಸ್ಥೆ, ವಾತಾವರಣಕ್ಕೆ ಮಕ್ಕಳು ಮತ್ತು ಪಾಲಕರು ಮನಸೋತು ಬಿಟ್ಟರು. ನಾನಾ ಊರುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮೊದಲ ದಿನ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು. ಸ್ನೇಹ ಬೆಳಸಿಕೊಂಡರು.

ಮು0ಜಾನೆಯಿ0ದಲೇ ಚಟುವಟಿಕೆ ಆರಂಭ, ಯೋಗಾಭ್ಯಾಸ : ಶಿಬಿರದ ವಿದ್ಯಾರ್ಥಿಗಳಿಗೆ ಮುಂಜಾನೆಯಿAದಲೇ ಚಟುವಟಿಕೆಗಳು ಪ್ರಾರಂಭವಾಗುತ್ತಿತ್ತು. ಬೆಳಗ್ಗೆ 5.30 ಗಂಟೆಗೆ ಏಳುತ್ತಿದ್ದ ವಿದ್ಯಾರ್ಥಿಗಳು ಸ್ವಚ್ಛಗೊಂಡು ಯೋಗ ತರಗತಿಗೆ ಹಾಜರಾಗುತ್ತಿದ್ದರು. 1.30 ಗಂಟೆಗೆಯ ಯೋಗಾಭ್ಯಾಸದ ಬಳಿಕ, ಶಿವನ ಪೂಜೆಗೆ ಮಾಡುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರು. ಬಳಿಕವೇ ಬಿಸಿನೀರು ಕುಡಿದು, ಪೌಷ್ಠಿಕವಾದ ಕಾಳುಗಳು ಮತ್ತು ಹಣ್ಣುಗಳನ್ನು ತಿನ್ನುತ್ತಿದ್ದರು. ಶಿಬಿರಾರ್ಥಿಗಳನ್ನು ಇದನ್ನು ತಿಂದು ಮುಗಿಸುವ ವೇಳೆಗೆ ಬಿಸಿ, ಬಿಸಿಯಾದ ತಿಂಡಿ ಸಿದ್ಧವಾಗುತ್ತಿತ್ತು. ನಿತ್ಯ ಒಂದಲ್ಲ ಒಂದು ಬಿಸಿ, ಬಿಸಿ, ರುಚಿ, ರುಚಿಯಾದ ಪೌಷ್ಠಿಕವಾದ ತಿಂಡಿಗಳನ್ನು ಮಕ್ಕಳು ಸೇವಿಸುತ್ತಿದ್ದರು. ತಿಂಡಿಯಾದ ಕೂಡಲೇ ಬಿಸಿ ಹಾಲು ಕುಡಿದು ತರಗತಿಗೆ ಸಿದ್ಧರಾಗುತ್ತಿದ್ದರು.

9.30ಕ್ಕೆ ತರಗತಿ ಪ್ರಾರಂಭ : ನಿತ್ಯ 9.30ಕ್ಕೆ ಪಠ್ಯ ತರಗತಿಗಳು ಪ್ರಾರಂಭವಾಗಿ ಬಿಡುತ್ತಿತ್ತು. ಶಿಕ್ಷಕರಾದ ಕುರಾನಿ, ಡಾ.ಭಟ್, ಡಾ.ಸುನೀಲ್, ಸುನಿತಾ ಅವರು ಮಕ್ಕಳಿಗೆ ಪಠ್ಯ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದರು. ಈ ಶಿಕ್ಷಕರು ಕನ್ನಡ, ಇಂಗ್ಲಿಷ್, ಹಿಂದಿ, ಗಣಿತವನ್ನು ಸರಳವಾಗಿ ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ತೆಗೆದುಕೊಳ್ಳುವ ಪರಿಗೆ ಸಿದ್ಧತೆ ಮಾಡುತ್ತಿದ್ದರ. ಈ ಮಾದರಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸಿತು. ನಿತ್ಯ ಮೊಬೈಲ್ ಅಡಿಕ್ಷನ್ ಅಪಾಯ ಹಾಗೂ ವ್ಯಕ್ತಿತ್ವ ವಿಕಸನದ ತರಗತಿಗಳು ಮಕ್ಕಳಿಗೆ ಅನುಕೂಲವಾಯಿತು. ಅದರ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಂಡರು.

11.20ಕ್ಕೆ ಸಿದ್ಧವಾಗುತ್ತಿತ್ತು ಹಣ್ಣು : ಪಠ್ಯ ಚಟುವಟಿಕೆಗಳು ಮುಗಿಯುತ್ತಿದ್ದಂತೆ 11.30ಕ್ಕೆ ನಿತ್ಯ ಹಣ್ಣುಗಳನ್ನು ನೀಡಲಾಗುತ್ತಿತ್ತು. ಪರಂಗಿ, ಪಪಾಯ, ಅನಾನಸ್, ಕಲ್ಲಂಗಡಿ, ಮಾವಿನ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಅನಿಮಿಯತವಾಗಿ ಮಕ್ಕಳಿಗೆ ನೀಡಲಾಗುತ್ತಿತ್ತು.

11.30ಕ್ಕೆ ಶುರುವಾಗಿ ಬಿಡುತ್ತಿತ್ತು ಪಠ್ಯೇತರ ಚಟುವಟಿಕೆ : ನಿತ್ಯ 11.30ಕ್ಕೆ ಪಠ್ಯೇತರ ಚಟುವಟಿಕೆಗಳು ಶುರುವಾಗಿ ಬಿಡುತ್ತಿತ್ತು. ಆರ್ಟ್ ಅಂಡ್ ಕ್ರಾಫ್ಟ್, ಚೆಸ್, ಕರಾಟೆ, ಯೋಗ, ಸಂಗೀತಾ, ನೃತ್ಯ ಹಾಗೂ ನಾಟಕ ತರಬೇತಿಗಳು ವಿಶೇಷ ವಿಭಿನ್ನವಾಗಿ ನಡೆಯುತ್ತಿತ್ತು. ವಿದ್ಯಾರ್ಥಿಗಳು ಈ ತರಗತಿಯಲ್ಲಿ ಉತ್ಸುಕವಾಗಿ ಭಾಗಿಯಾಗಿ ತಮ್ಮ ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪರಿಣಿತಿ ಸಾಧಿಸಿದರು. ರಜಾವನ್ನು ಮಜಾ ಮಾಡಿದರು.

ತರಗತಿ ಮುಗಿಯುತ್ತಿದ್ದಂತೆ ಊಟ ಸಿದ್ಧವಾಗಿತ್ತಿತ್ತು : ಮಕ್ಕಳು ಪಠ್ಯೇತರ ಚಟುವಟಿಕೆ ಮುಗಿಸುತ್ತಿದ್ದಂತೆ 12.45ಕ್ಕೆ ತಟ್ಟೆಯಲ್ಲಿ ಊಟ ಸಿದ್ಧವಾಗಿರುತ್ತಿತ್ತು. ನಿತ್ಯ ಮುದ್ದ, ಅನ್ನ, ಸಾಂಬಾರ್, ಪಲ್ಯ, ತರಕಾರಿ ಸಲಾಡ್ ನೀಡಲಾಗುತ್ತಿತ್ತು. ಶುಚಿ ಹಾಗೂ ರುಚಿಗೆ ಮನಸೋತ ಶಿಬಿರಾರ್ಥಿಗಳು ಬಾಯಿ ಚಪ್ಪರಿಸಿಕೊಂಡು ಊಟ ಮಾಡುತ್ತಿದ್ದರು.

ಊಟ ಮುಗಿಯುತ್ತಿದ್ದಂತೆ ಈಜು ತರಗತಿ : ನಿತ್ಯ ಊಟ ಮುಗಿಯುತ್ತಿದ್ದಂತೆ ಸ್ವಲ್ಪ ವಿರಾಮದ ನಂತರ ಈಜು ತರಗತಿಗಳು ಪ್ರಾರಂಭವಾಗುತ್ತಿತ್ತು. ಹೆಬ್ಬಾಳಿನಲ್ಲಿ ಇರುವ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಕ್ಕಳು ಈಜು ಅಭ್ಯಾಸ ಮಾಡುತ್ತಿದ್ದರು. ಅಲ್ಲಿಯ ಕೋಚ್ ಮಾರ್ಗದರ್ಶನದಲ್ಲಿ ಶಿಬಿರದ ಎಲ್ಲ ವಿದ್ಯಾರ್ಥಿಗಳು ಈಜನ್ನು ದಿನದಿಂದ ದಿನಕ್ಕೆ ಕರಗತ ಮಾಡಿಕೊಂಡು ಬಿಟ್ಟಿದ್ದರು.

ಈಜು ಮುಗಿಯುತ್ತಿದ್ದಂತೆ ಸ್ಯಾನ್ಸ್, ವಿಶ್ರಾಂತಿ, ಆಟ : ಈಜು ತರಗತಿ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಸ್ನಾö್ಯಕ್ಸ್ ನೀಡಲಾಗುತ್ತಿತ್ತು. ಮಸ್ಕ್ ಬನ್, ಚುರುಮುರಿ, ಪಾನಿಪುರಿ, ಗೋಬಿ ಮಂಚೂರಿ, ಇದರ ಜೊತೆ, ಜೊತೆಗೆ ಹಣ್ಣುಗಳನ್ನು ಅನ್ ಲಿಮಿಟೆಡ್ ಆಗಿ ತಿನ್ನುತ್ತಿದ್ದರು. ಬಾಯಿ ಚಪ್ಪರಿಸಿಕೊಂಡು ಶಿಬಿರಾರ್ಥಿಗಳು ಎಂಜಾಯ್ ಮಾಡುತ್ತಿದ್ದರು. 1 ಗಂಟೆ ವಿಶ್ರಾಂತಿ ಬಳಿಕ ಆಟೋಟದಲ್ಲಿ ಪಾಲ್ಗೊಳ್ಳುತ್ತಿದ್ದರು.

ಸಂಜೆ ಪೂಜೆಗೆ ಅಣಿ, ಆಟ, ರಂಗ ಗೀತೆಗಳಲ್ಲಿ ಭಾಗಿ, ಭರ್ಜರಿ ಬಾಡೂಟ : ಸ್ನಾö್ಯಕ್ಸ್, ವಿಶ್ರಾಂತಿ, ಆಟದ ಬಳಿಕ, ಕೈ, ಕಾಲು ತೊಳೆದು ಸ್ವಚ್ಛಗೊಳುತ್ತಿದ್ದ ವಿದ್ಯಾರ್ಥಿಗಳು ಶಿವನ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಸಾದ ಸೇವಿಸಿ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಲ್ಳುತ್ತಿದ್ದರು. ಶರತ್ ಮತ್ತು ಮಧು ತಂಡ ರಾತ್ರಿ 9.30ರ ವರೆಗೂ ಶಿಬಿರಾರ್ಥಿಗಳಿಗೆ ವಿವಿಧ ಕ್ರೀಡೆಗಳನ್ನು ಆಡಿಸುತ್ತಿದ್ದರು. ಗೆದ್ದವರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತಿತ್ತು. ಇದರ ಜತೆ, ಜತೆಗೆ ರಂಗ ಗೀತೆಗಳನ್ನು ಮಕ್ಕಳಿಗೆ ಕಲಿಸಲಾಗುತಿತ್ತು. ಇದರ ಮಧ್ಯದಲ್ಲೇ 8.30ಕ್ಕೆ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಬಿಸಿ ಮುದ್ದೆ, ಅನ್ನ, ಸಾಂಬರ್, ಸಲಾಡ್, ಪಲ್ಯ ನೀಡಲಾಗುತಿತ್ತು. ವಾರದಲ್ಲಿ ಎರಡರಿಂದ ಮೂರು ದಿನ ನಾನ್‌ವೆಜ್ ಊಟವನ್ನು ಆಯೋಜಿಸಲಾಗುತ್ತಿತ್ತು. ಊಟದ ಬಳಿಕ ಮಕ್ಕಳು ಹಾಲು ಕುಡಿದು ಮಲಗುತ್ತಿದ್ದರು.

ಬಸವಣ್ಣ ಅವರ ತಾಯಿ ಪ್ರೀತಿ : ಮಕ್ಕಳಿಗೆ ಶಿಬಿರದಲ್ಲಿ ಬಸವಣ್ಣ ಅವರ ತಾಯಿ ಪ್ರೀತಿ ಸಿಕ್ಕಿತು. ಮಕ್ಕಳ ನಿಷ್ಕಲ್ಮಶ ಪ್ರೀತಿಗೆ ಸೋತು ಹೋದ ಬಸವಣ್ಣ ಅವರು, ಸೂರ್ಯ ಹುಟ್ಟುವ ಮುನ್ನವೆ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹಾಜರಾಗಿಬಿಡುತ್ತಿದ್ದರು. ಮಕ್ಕಳ ಜೊತೆಗೆ ಬರೆಯುತ್ತಿದ್ದರು. ಅವರೊಂದಿಗೆ ಯೋಗಾಭ್ಯಾಸ ಮಾಡಿ ಮಕ್ಕಳಲ್ಲಿ ಉತ್ಸಾಹ ತುಂಬುತ್ತಿದ್ದರು. ಮಕ್ಕಳ ಜೊತೆ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಿ ಅವರಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸುತ್ತಿದ್ದರು. ಮಕ್ಕಳೊಂದಿಗೆ ಕೂತು ತಿಂಡಿ ಸೇವಿಸಿ ಸಮಾನತೆ ಸಾರಿದರು. ಅವರೊಂದಿಗೆ ಆಟೋಟದಲ್ಲಿ ಭಾಗಿಯಾಗಿ ಭಯ ನಿವಾರಿಸಿದರು. ಮಕ್ಕಳು ಕೇಳಿದ ಆಹಾರವನ್ನು ಕ್ಷಣಾರ್ಧದಲ್ಲಿ ಕಲ್ಪಿಸಿಕೊಟ್ಟು, ಮಕ್ಕಳಿಗೆ ಅಚ್ಚು, ಮೆಚ್ಚಾದರು. ಐಸ್ ಕ್ರೀಮ್, ಚಾಕ್ಲೆಟ್, ಮಕ್ಕಳು ಕೇಳಿದ ಸ್ಕಾö್ಯನ್ಸ್ಗಳನ್ನು ಮಾಡಿಸಿ ಮಕ್ಕಳ ಮನಗೆದ್ದರು. ಮಕ್ಕಳು ಆಸೆ ಪಡುವ ಆಹಾರವನ್ನು ಮಾಡಿಸಿ ಅವರ ಆಸೆ, ಬಯಕೆಗಳನ್ನು ಪೂರೈಸುತ್ತಿದ್ದರು. ಆರೋಗ್ಯ, ಸ್ಥಿತಿಗತಿಗಳನ್ನು ವಿಚಾರಿಸಿ, ಧೈರ್ಯ ತುಂಬುತ್ತಿದ್ದರು. ಒಟ್ಟಿನಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೆ ಮಕ್ಕಳ ಜೊತೆ ಮಕ್ಕಳಾಗಿ ಕಾಲ ಕಳೆಯುತ್ತಿದ್ದರು ಬಸವಣ್ಣ.

ಅಚ್ಚುಕಟ್ಟಾದ ಊಟದ ವ್ಯವಸ್ಥೆ : ಶಿಬಿರ ಮುಗಿಯುವ ವರೆಗೂ ಅಚ್ಚುಕಟ್ಟಾದ ಶುಚಿ, ರುಚಿಯಾದ ಊಟೋಪಚಾರಗಳು ನಡೆಯಿತು. ನಿತ್ಯ ಬೆಳಗ್ಗೆ ಬಗೆ ಬಗೆಯ ಕಾಳುಗಳು, ಸ್ವಾಧಿಷ್ಠ ಭರಿತ ತಿಂಡಿ, ಪೌಷ್ಠಿಕ ಆಹಾರ, ಬಾಯಿ ರುಚಿಗೆ ಸ್ನಾö್ಯಕ್ಸ್ಗಳು ಟೈಂ ಟೈಂಗೆ ಹಾಜರಾಗಿಬಿಡುತ್ತಿತ್ತು. ತರಕಾರಿ ಸಲಾಡ್, ಸೊಪ್ಪು, ತರಕಾರಿಯೊಂದಿಗೆ ವಾರದಲ್ಲಿ ಮೂರುದಿನ ನಾನ್‌ವೆಜ್ ಊಟಕ್ಕೆ ಮಕ್ಕಳು ಅಕ್ಷರಶಃ ಮನಸೋತು ಬಿಟ್ಟರು. ಸಿಲಿಂಡರ್ ಸಮಸ್ಯೆ ಇದ್ದರೂ ಸರಿಯಾದ ಸಮಯಕ್ಕೆ ಊಟ, ತಿಂಡಿ ಮಕ್ಕಳ ತಟ್ಟೆಯಲ್ಲಿ ಇರುತಿತ್ತು. ಅಷ್ಟು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು ಬಸವಣ್ಣ ಅವರು.

ಝೂ, ಜಿಆರ್‌ಎಸ್, ಕುಂತಿ ಬೆಟ್ಟ ಚಾರಣಕ್ಕೆ ಮನಸೋತ ಮಕ್ಕಳು : ಝೂ, ಜಿಆರ್‌ಎಸ್, ಕುಂತಿ ಬೆಟ್ಟ ಚಾರಣಕ್ಕೆ ಮಕ್ಕಳು ಮನಸೋತರು. ಮೊದಲನೆ ವಾರ ಮಕ್ಕಳಿಗೆ ಮೈಸೂರಿನ ಮೃಗಾಲಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ಪ್ರಾಣಿ, ಪಕ್ಷಿ, ವನ್ಯ ಸಂಕುಲಗಳನ್ನು ನೋಡಿದ ಮಕ್ಕಳು ಖುಷಿ ಪಟ್ಟರು. ನಾನಾ ದೇಶದ ಪ್ರಾಣಿಗಳನ್ನು ಕಂಡು ಪುಳಕಿತರಾದರು. ಪಕ್ಷಿಗಳ ಬಣ್ಣಕ್ಕೆ ಮನಸೋತರು. ಹಾಕುಗಳನ್ನು ಕಂಡು ಬೆಚ್ಚಿದರು. ಜಿರಾಫೆಯನ್ನು ಕಂಡು ಉಬ್ಬೇರಿಸಿದರು. ಆನೆ, ಸಿಂಹ, ಕರಡಿ, ಹುಲಿ, ಚಿರತೆಗಳನ್ನು ಕಂಡು ಉತ್ಸುಕರಾದರು.

ಎರಡನೇ ವಾರ ಕುಂತಿ ಬೆಟ್ಟಕ್ಕೆ ಚಾರಣ ತೆರಳಲಾಗಿತ್ತು. ಮೈಸೂರಿನಿಂದ ಬಸ್ಸಿನಲ್ಲಿ ಮುಂಜಾನೆಯೇ ಪ್ರಯಾಣ ಮಾಡಿದ ಮಕ್ಕಳು ಬೆಟ್ಟ, ಗುಡ್ಡ, ಕಲ್ಲು, ಬಂಡೆಗಳನ್ನು ಕಂಡು ಹೌಹಾರಿದರು. ಪ್ರಾರಂಭದಲ್ಲಿ ಚಾರಣ ಮಾಡಲು ಹೆದರಿದರು. ಬಸವಣ್ಣ ಅವರ ಧೈರ್ಯ, ಉತ್ಸಾಹ ಮಾತುಗಳು ಮಕ್ಕಳ ಮನಸ್ಸಿಗೆ ಸ್ಥೆöÊರ್ಯ ನೀಡಿತು. ಮಕ್ಕಳ ಜೊತೆಗೂಡಿ ತಾವು ಚಾರಣ ಮಾಡಿ ಅಂತಿಮವಾಗಿ ತುತ್ತ ತುದಿಯನ್ನು ಮುಟ್ಟಿದರು. ಆಗ ಮಕ್ಕಳಲ್ಲಿ ಭಯವೆಲ್ಲ ಹೊರಟು ಹೋಗಿ ಏನೋ ಒಂದು ಸಾಧಿಸಿದ ಛಾಯೆ ಮುಖದಲ್ಲಿ ರಾರಾಜಿಸಿತ್ತಿತ್ತು.

ಮೂರನೇ ವಾರ ಮಕ್ಕಳನ್ನು ಜಿಆರ್‌ಎಸ್‌ಗೆ ಕರೆದುಕೊಂಡು ಹೋಗಲಾಗಿತ್ತು. ಬೆಳಗ್ಗೆಯಿಂದ ರಾತ್ರಿಯ ವರೆಗೂ ಜಿಆರ್‌ಎಸ್‌ನಲ್ಲಿ ಕಾಲ ಕಳೆದ ಮಕ್ಕಳು ಡ್ರೆöÊ ಮತ್ತು ವೆಟ್ ಗೇಮ್‌ಗಳನ್ನು ಆಡಿದರು. ಕಾರಿನಲ್ಲಿ ಆಟವಾಡಿ ಡಿಕ್ಕಿ ಹೊಡೆದರು. ಉಯ್ಯಾಲೆಯಲ್ಲಿ ತೂಗಾಡಿದರು. ಭೂತದ ಬಂಗಲೆಯಲ್ಲಿ ನುಗ್ಗಿ ಭಯಗೊಳ್ಳದೆ ಹೊರಗೆ ಬಂದರು. ನೀರಿನಲ್ಲಿ ಆಟವಾಡಿ ರೋಮಾಂಚನಗೊAಡರು. ಸೆಲ್ಫಿ, ಫೋಟೊಶೂಟ್‌ಗಳನ್ನು ಮಾಡಿಸುತ್ತ ನಕ್ಕು ನಲಿದರು.

ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಿದ ಹುಳಿಕಲ್ ನಟರಾಜು : ಮಕ್ಕಳಲ್ಲಿ ಮೂಢನಂಬಿಕೆ ದೂರಮಾಡಿ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಖ್ಯಾತ ಪವಾಡ ಬಯಲು ತಜ್ಞರಾದ ಹುಳಿಕಲ್ ನಟರಾಜು ಅವರನ್ನು ಆಹ್ವಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಲವಾರು ವಿಚಾರಗಳ ಕುರಿತು ಹಳಿಕಲ್ ನಟರಾಜು ಅವರು ಮಕ್ಕಳ ಸಂದೇಹಗಳನ್ನು ಬಗೆಹರಿಸಿದರು. ತೆಂಗಿನಕಾಯಿಯಿAದ ಜಮೀನಿನಲ್ಲಿ ನೀರು ತೆಗೆಯುವುದು. ಅಕ್ಕಿಯ ಜೆಂಬಿನಲ್ಲಿ ಕತ್ತಿ ತೆಗೆಯುವುದು, ಬಿಂದಿಗೆಯಲ್ಲಿ ನೀರು ಬರುವುದು ಸೇರಿದಂತೆ ಹಲವಾರು ಪವಾಡಗಳನ್ನು ಮಕ್ಕಳ ಎದುರೆ ಬಯಲು ಮಾಡಿ ಮಕ್ಕಳಲ್ಲಿ ಪ್ರಜ್ಞೆ ಜಾಗೃತಿಗೊಳಿಸಿದರು.

ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ ಸ್ನೇಕ್ ಶ್ಯಾಂ : ಮಕ್ಕಳಲ್ಲಿ ಹಾವುಗಳ ಬಗ್ಗೆ ಇರುವ ತಪ್ಪು ಕಲ್ಪನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ನೇಕ್ ಶ್ಯಾಂ ಅವರನ್ನು ಆಹ್ವಾನಿಸಲಾಗಿತ್ತು. ಹಾವುಗಳ ಬಗ್ಗೆ ನಿರ‍್ಗಳವಾಗಿ ಮಾತನಾಡಿ, ಶಾಮ್ ಮಾಹಿತಿ ನೀಡಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸಾವದಿಂದ ಉತ್ತರಿಸಿ ಅವರಲ್ಲಿ ಇದ್ದ ತಪ್ಪ ಕಲ್ಪನೆಗಳನ್ನು ದೂರ ಮಾಡಿದರು. ಜಗತ್ತಿನಲ್ಲಿ ಎಷ್ಟು ಬಗೆಯ ಹಾವುಗಳಿದೆ. ಭಾರತದಲ್ಲಿ ಇರುವ ಹಾವುಗಳು ಎಷ್ಟು. ಯಾವ ಜಾತಿಯ ಹಾವುಗಳು ಕಚ್ಚುತ್ತವೆ, ಕಚ್ಚುವುದಿಲ್ಲ ಎಂಬುದರ ಕುರಿತು ಮಾಹಿತಿ ನೀಡಿದರು. ಅಲ್ಲದೆ ಹಾವು ಕಚ್ಚಿದ ಸಮಯದಲ್ಲಿ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದರ ಕುರಿತು ರಸವತ್ತಾಗಿ ಮಾಹಿತಿ ನೀಡಿದರು.

ಮೊಬೈಲ್ ಅಡಿಕ್ಷನ್ ಪ್ರಬಂಧ ಸ್ಪರ್ಧೆ,ಪ್ರಶಸ್ತಿ ನೀಡಿದ ಪ್ರತಾಪ್ ಸಿಂಹ : ಮೊಬೈಲ್ ಅಡಿಕ್ಷನ್ ಕುರಿತಾದ ಪ್ರಬಂಧ ಸ್ಪರ್ಧೆ ಮಕ್ಕಳಲ್ಲಿ ಅಕ್ಷರಶಃ ಜಾಗೃತಿ ಮೂಡಿಸಿತು. ಇಷ್ಟು ದಿನ ಮಕ್ಕಳು ಮೊಬೈಲ್ ಅಡಿಕ್ಷನ್ ಬಗ್ಗೆ ಎಷ್ಟೇ ಹೇಳಿದರೂ ಕಿಂಚಿತ್ತು ಕೇಳುತ್ತಿರಲಿಲ್ಲ. ಅವರ ಮಾತುಗಳು ಅವರ ಕಿವಿಗಳನ್ನು ತಾಗುತ್ತಿರಲಿಲ್ಲ. ಎಷ್ಟೆ, ಸಲಹೆ ಸೂಚನೆ, ಮಾರ್ಗದರ್ಶನಗಳು ಮಕ್ಕಳ ತಲೆಗೆ ಒಳಗೆ ಹೋಗುತ್ತಿರಲಿಲ್ಲ. ಇದನ್ನು ಮನಗಂಡ ಬಸವಣ್ಣ ಅವರು, ಮೊಬೈಲ್ ಅಡಿಕ್ಷನ್ ಬಗ್ಗೆ ಬೋಧನೆ ಮಾಡುವುದಕ್ಕಿಂತ ಅವರೆ ಈ ಬಗ್ಗೆ ಪ್ರಬಂಧ ಸ್ಪರ್ಧೆ ಬರೆದರೆ ಅವರಿಗೆ ವಾಸ್ತವ ಅರಿವಾಗುತ್ತದೆ ಎಂದು ಮನಗಂಡರು. ಅದರಂತೆ ಈ ವಿಷಯ ಕುರಿತಾಗಿ ಎರಡು ವಿಭಾಗದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿದರು. ಬಹುಮಾನವಾಗಿ ಬೆಲೆ ಬಾಳುವ ಗೇರ್ ಸೈಕಲ್, ಸ್ಮಾರ್ಟ್ ವಾಚ್‌ಗಳನ್ನು ಬಹುಮಾನವನ್ನಾಗಿ ಘೋಷಣೆ ಮಾಡಿದರು. ಬಹುಮಾನದ ಆಸೆಗೆ ಮಕ್ಕಳು ವಿಷಯ ಕುರಿತು ಚೆನ್ನಾಗಿ ಅಭ್ಯಾಸ ಮಾಡಿ, ಪ್ರಬಂಧ ಬರೆದರು. ಆ ಬಳಿಕವಷ್ಟೆ ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ಅರ್ಥವಾಗಿದ್ದು, ಮೊಬೈಲ್ ಎಷ್ಟು ಅಪಾಯಕಾರಿ ಎಂದು. ಇದರ ಬಗ್ಗೆ ವಿದ್ಯಾರ್ಥಿಗಳೆ ಸ್ವತಃ ಹೇಳಿಕೊಂಡು ಇನ್ನೆಂದು ಮೊಬೈಲ್‌ಗೆ ಅಡಿಕ್ಟ್ ಆಗುವುದಿಲ್ಲ ಎಂದು ಪ್ರಮಾಣ ಮಾಡಿದರು. ಎರಡು ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಬಹುಮಾನ ನೀಡಿದರು.

ಸ್ಟಾರ್ ಹೋಟಲ್‌ನಲ್ಲಿ ಬೊಂಬಾಟ್ ಭೋಜನ : ಶಿಬಿರಕ್ಕೆ ಬಹುತೇಕ ಮಕ್ಕಳು ಗ್ರಾಮಾಂತರ ಪ್ರದೇಶದಿಂದ ಬಂದಿದ್ದರು. ಅವರೆಂದು ಸ್ಟಾರ್ ಹೋಟೆಲ್ ಒಳಗೆ ಪ್ರವೇಶ ಮಾಡಿ, ಊಟ ಮಾಡಿದವರಲ್ಲ. ಆ ಮಕ್ಕಳು ಕೂಡ ಸ್ಟಾರ್ ಹೋಟಲ್‌ನಲ್ಲಿ ಊಟ ಮಾಡಬೇಕೆಂದು ಮನಗಂಡ ಬಸವಣ್ಣ ಅವರು ಎಲ್ಲ ಮಕ್ಕಳಿಗೂ ಸ್ಟಾರ್ ಹೋಟಲ್‌ನಲ್ಲಿ ಊಟದ ವ್ಯವಸ್ಥೆ ಮಾಡಿದ್ದರು. ಮಕ್ಕಳು ಬಗೆ, ಬಗೆಯ ಆಹಾರವನ್ನು ಸೇವಿಸಿ, ಅಲ್ಲಿನ ಅಂದ, ಚಂದಕ್ಕೆ ಮನಸೋತರು.

ನಿತ್ಯ ಒಂದಲ್ಲ ಒಂದು ಆಟ, ಗೆದ್ದವರಿಗೆ ಬಹುಮಾನ : ನಿತ್ಯ ಮಕ್ಕಳಿಗೆ ಒಂದಲ್ಲ ಒಂದು ಆಟವನ್ನು ಆಡಿಸಲಾಗುತ್ತಿತ್ತು. ಮಧು ಮತ್ತು ಸತೀಶ್ ಅವರ ತಂಡ ಬಗೆ, ಬಗೆಯಾಗಿ ಆಟವಾಡಿಸಿದರು. ಗೆದ್ದವರಿಗೆ ಬಸವಣ್ಣ ಅವರು ನಗದು ಬಹುಮಾನ ನೀಡಿದರು. ಬಹುಮಾನದ ಆಸೆಗೆ ಮಕ್ಕಳು ಎಲ್ಲ ಕ್ರೀಡೆಗಳಲ್ಲೂ ಭಾಗವಿಸಿದರು. ಉತ್ಸುಕವಾಗಿ ಆಟವಾಡಿದರು. ಇತರೆ ವಿದ್ಯಾರ್ಥಿಗಳಿಗೂ ಸಹಕಾರ ನೀಡಿದರು. ಬುಹುಮಾನಗಳನ್ನು ಗೆದ್ದು ಶಿಬಿರಾರ್ಥಿಗಳು ಖುಷಿ ಪಟ್ಟರು.

ಕಾರ್ಯಕ್ರಮಕ್ಕೆ ಗಣ್ಯರ ಭೇಟಿ : ಬಸವಣ್ಣ ಅವರ ಸೇವೆಗೆ ಮೆಚ್ಚಿ ಅವರ ಗೆಳೆಯರ ಬಳಗವೇ ಸಮ್ಮರ್ ಕ್ಯಾಂಪ್‌ಗೆ ಆಗಮಿಸಿತ್ತು. ಅಚ್ಚುಕಟ್ಟಾದ ವ್ಯವಸ್ಥೆ ಕಂಡು ಬಸವಣ್ಣ ಅವರನ್ನು ಮೆಚ್ಚಿದರು. ಹಾಡಿ ಹೊಗಳಿದರು.

ತಮ್ಮ ಕೈಲಾದ ಸಹಾಯ, ಸಹಕಾರವನ್ನು ಬಸವಣ್ಣ ಅವರಿಗೆ ನೀಡಿ, ಬೆನ್ನು ತಟ್ಟಿದರು. ಒಟ್ಟಿನಲ್ಲಿ ಹೇಳಬೇಕು ಎಂದರೆ ರಾಜ್ಯದಲ್ಲೇ ಎಲ್ಲೂ ಮಕ್ಕಳಿಗೆ ಮಾಡಿರದ ಬೇಸಿಗೆ ಶಿಬಿರವನ್ನು ಉಚಿತವಾಗಿ ಮಾಡಿ, ಮಕ್ಕಳ, ಪಾಲಕರ ಮನಸ್ಸು ಗೆದ್ದರು ಬಸವಣ್ಣ. ಸಮಾನತೆಯ ಸಾರಿದರು. ಈ ಬಸವಣ್ಣ……

Leave a Reply

Your email address will not be published. Required fields are marked *