ಮಗ್ಗೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಡಗರ ಸಂಭ್ರಮದ ಸ್ವತಂತ್ರ್ಯ ದಿನಾಚರಣೆ.
ಹೆಚ್ ಡಿ ಕೋಟೆ: ತಾಲೂಕಿನ ಮಗ್ಗೆ ಗ್ರಾಮದಲ್ಲಿ 80ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಸಡಗರ ಸಂಭ್ರಮದಿಂದ ನಡೆಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ರೇವಣ್ಣ ಮತ್ತು ಸುಂದರ್ ನೆರವೇರಿಸಿದರು.
ಧ್ವಜಾರೋಹಣದ ನಂತರ ಶಾಲೆಗಳ ಹಲವು ತರಗತಿಗಳ ಮಕ್ಕಳು ವರ್ಣರಂಜಿತ ಸಮವಸ್ತ್ರದೊಂದಿಗೆ ಪೆರೇಡ್ ಮೂಲಕ ಗಣ್ಯರಿಗೆ ಗೌರವ ಸಲ್ಲಿಸಿದರು. ಎನ್ಎಸ್ಎಸ್ ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಇದೇ ವೇದಿಕೆಯಲ್ಲಿ 2025- 26ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಗ್ಗೇ ಗ್ರಾಮದ ರಿತನ್ಯ ಮತ್ತು ನಿಕಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹೆಚ್ ಡಿ ಕೋಟೆ ತಾಲೂಕಿನ ಮಗ್ಗೆ ಗ್ರಾಮದ ವೈ ಪಿ ನಾಗರಾಜ್ (ಪಾಪಣ್ಣ), ರತ್ನಮ್ಮ ಮತ್ತು ಮಕ್ಕಳಾದ ನಾಗೇಂದ್ರ, ಪುನೀತ್ ಪ್ರತಿಭಾ ಪುರಸ್ಕಾರ ಆಯೋಜನೆ ಮಾಡಿ, ಅಭಿನಂದನೆ ಸಲ್ಲಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರೇವಣ್ಣ , ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಂದರ ರವರು ಮಾತನಾಡು ನಮ್ಮ ರಾಷ್ಟ್ರ ನಾಯಕರನ್ನು ಸದಾಸ್ಮರಿಸಬೇಕು ಎಂದು ಕರೆ ನೀಡಿದರು.
ಇವರ ಜೊತೆಗೆ ಮಗ್ಗೆ ಮತ್ತು ಕೆಆರ್ ಪುರ
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಶ್ರೀ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಆರ್ ಶಿವಣ್ಣ ಅವರುಗಳ ಶಾಲೆಯ ಸಹ ಶಿಕ್ಷಕರುಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಜೊತೆಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರುಗಳು, ಊರಿನ ಗುಡಿಗೌಡರು, ವಿವಿಧ ಜನಾಂಗದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
