ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನ
ಚಾಮರಾಜನಗರ : ನಶಿಸಿ ಹೋಗುತ್ತಿರುವ ಹಿಂದಿನ ತಲೆಮಾರಿನ ಕಲೆ, ಸಂಸ್ಕೃತಿ
ರಂಗಭೂಮಿ ಉಳಿಸಿ-ಬೆಳೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ಮಾಡುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು ಹೇಳಿದರು.
ನಗರದ ವರನಟ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಚೇತನ ಕಲಾವಾಹಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಹೊಂಡರಬಾಳು ದಿವಗಂತ ಎನ್.ಲಿಂಗರಾಜೇ ಅರಸ್ ಅವರಿಂದ ವಿರಚಿತವಾದ ದಕ್ಷಯಜ್ಞ ಅಥವಾ ಭೃಗುಮುನಿ ಗರ್ವಭಂಗ ಎಂಬ ಸುಂದರ ಶಿವಭಕ್ತಿಯುತವಾದ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಕಲಾವಿದದರನ್ನು ಕಲೆ, ಸಂಸ್ಕೃತಿ, ಸಾಹಿತ್ಯ ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 2025-26ನೇ ಸಾಲಿನಲ್ಲಿ ಕೂಡ ಸಾಕಷ್ಟು ಕಲಾವಿದರಿಗೆ ತಂಡ ನಿರ್ವಹಣೆ ವೈಯುಕ್ತಿಕವಾಗಿ ಪ್ರಯೋಜನ ನೀಡುತ್ತಾ ಬಂದಿದ್ದು, ಕಲಾವಿದರಿಗೂ ಸಹಾಯಧನ ನೀಡಲಾಗಿದೆ ಎಂದರು.
ಕಲಾವಿದರಿಗೆ ಪ್ರತಿ ತಿಂಗಳು 2500 ರೂ.ಮಾಸಾಶನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 170 ಮಂದಿ ಕಲಾವಿದರಿಗೆ 2025- 26ನೇ ಸಾಲಿನಲ್ಲಿ ನೀಡಲಾಗುತ್ತಿದೆ. ವಾದ್ಯ ಪರಿಕರ
ಖರೀದಿಗಾಗಿ ಸಹಾಯಧನ ನೀಡಲಾಗಿದೆ. ಅದೇ ಚಿತ್ರಕಲಾ ಕಲಾವಿದರಿಗೂ ಸಹಾಯ ಮಾಡಿದೆ ಎಂದರು.
ಎಲ್ಲಾ ಗ್ರಾಮಗಳಲ್ಲೂ ಕಲೆ, ಸಂಸ್ಕೃತಿ, ನಾಟಕ ನಶಿಸಿಹೋಗುತ್ತಿರುವ ಸಂದರ್ಭದಲ್ಲಿ…ಅವುಗಳನ್ನು ಪ್ರೋತ್ಸಾಹಿಸಲಾಗುತ್ತದೆ.ಯುವಪೀಳಿಗೆಗೆ ನಾಟಕ ಬಹಳ ಅತ್ಯಾಮೂಲ್ಯವಾಗಿದೆ ಸಿನಿಮಾ, ಟಿವಿ, ಮೊಬೈಲ್ ಗೀಳಿನಿಂದ ದೂರವಿರಬೇಕು.
ರಂಗಸನ್ಮಾನ:ಕಾವುದವಾಡಿ ಗೌಡಿಕೆ ಬೀರೇಗೌಡ್ರು, ಉಪನ್ಯಾಸಕ ಆರ್.ಮೂರ್ತಿ, ರಂಗಭೂಮಿ ಕಲಾವಿದ ಕುಮಾರ್ ಗೋಣಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚೇತನ ಕಲಾವಾಹಿನಿ ಸಂಸ್ಥೆಯ ಅಧ್ಯಕ್ಷ ಜಿ.ರಾಜಪ್ಪ, ಯಜಮಾನ ಬಿ.ನಾಗರಾಜು, ಡಿ.ಪಿ.ರಾಜು, ಡಾ.ಪಂಡಿತ್ ರಾಜಶೇಖರ್, ವಕೀಲ ಮಂಜು, ಡ್ರಾಮಾ ಮಾಸ್ಟರ್ ಆರ್.ಶಿವಣ್ಣ, ಸಿದ್ದಪ್ಪ ಭೋಗಯ್ಯನಹುಂಡಿ, ಗೋವಿಂದರಾಜು, ಸುರೇಶ್ ಅರಳೀಪುರ, ಮಹದೇವಸ್ವಾಮಿ, ಪಿ.ನಿಂಗಯ್ಯ, ದೊರೆಸ್ವಾಮಿ, ರಾಮಣ್ಣ, ರಾಜೇಶ್, ದುಂಡಮಾದಯ್ಯ, ಸಿದ್ದರಾಜು ವಿ.ದಶಪಾಲ್ ತಬಲ, ವಿಶ್ವ ಕ್ಯಾಷಿಯೋ, ಅರ್ಜುನ್ ತಾಳವಾದ್ಯ ಇತರರು ಭಾಗವಹಿಸಿದ್ದರು.