ಎಂಸಿಎಸ್ ಪಬ್ಲಿಕ್  ಶಾಲೆಗೆ ಶೇ . 100 ರಷ್ಟು ಫಲಿತಾಂಶ

  • ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ಶೇ.100 ರಷ್ಟು ಫಲಿತಾಂಶ.

ಚಾಮರಾಜನಗರ: 2025-26ನೇ ಸಾಲಿನ ಸಿಬಿಎಸ್ ಇ 10ನೇ ತರಗತಿಯಲ್ಲಿ ನಗರದ ಸೋಮವಾರಪೇಟೆಯ ಎಂ.ಸಿ.ಎಸ್. ಪಬ್ಲಿಕ್ ಶಾಲೆಯು ಶೇ 100 ರಷ್ಟು
ಫಲಿತಾಂಶ ಪಡೆದಿದ್ದು, ಕಳೆದ 14 ವರ್ಷಗಳಿಂದಲೂ ಶೇ.100 ರಷ್ಟು ಫಲಿತಾಂಶವನ್ನು ಪಡೆಯುತ್ತಾ ಬಂದಿದೆ. ಈ ವರ್ಷವೂ ಶಾಲೆಯ 21 ಮಕ್ಕಳು ಪರೀಕ್ಷೆ ಬರೆದಿದ್ದು, 7 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, 11 ಮಕ್ಕಳು ಅತ್ಯುನ್ನತ ದರ್ಜೆಯಲ್ಲಿ, 3 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿ ಮಿಂಚಿತಾ ಕೆ.ಜೆ. ಶೇ.93 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ತೇರ್ಗಡೆ ಹೊಂದಿರುವ ಎಲ್ಲ ಮಕ್ಕಳಿಗೂ ಸಂಸ್ಥೆಯ ಪದಾಧಿಕಾರಿಗಳು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *