ಚಾಮರಾಜನಗರ : ತಮಿಳುನಾಡಿನ ಚೆನ್ನೈನ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಆ.16 ರಂದು ತಮಿಳುನಾಡಿನ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಕರಾಟೆ ಗಿನ್ನಿಸ್ ವಿಶ್ವ ದಾಖಲೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದಲೂ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಹಾಗೆಯೇ ಚಾಮರಾಜನಗರದ ಶೋಟೋಕಾನ್ ಸ್ಕೂಲ್ ಅಪ್ ಕರಾಟೆ ಶಾಲೆಯ ತರಬೇತುದಾರರಾದ ಫುರ್‌ಖಾನ್ ಪಾಷ ಅವರ ವಿದ್ಯಾರ್ಥಿಗಳಾದ ಸೈಯದ್ ತಾಹಿರ್, ಇಸ್ಮಾಯಿಲ್ ಷರೀಫ್, ಅಬ್ದುಲ್ ಕರೀಂ, ಶಾಹಿ ಉಮ್ಮೆ , ಸೈಯದ್ ಉಮರ್ , ಸೈಯದ್ ಆರೀಬ್ , ಮದೀಹಾ ಕೌಸರ್ , ಮೊಹಮ್ಮದ್ ಹೆಸಾನ್ , ಬಿ.ಕೆ.ಪ್ರಿಷಾ, ಫೈಜಾ ಬರೀರಾ ಅವರು ಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ನಗರದ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
