ಸಂತೇಮರಹಳ್ಳಿ ಮಹದೇಶ್ವರ ದೇವಸ್ಥಾನದಲ್ಲಿ ಜನಜಾತ್ರೆ

ಚಾಮರಾಜನಗರ. ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಸಂತೇಮರಹಳ್ಳಿಯ ಶ್ರೀಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷಪೂಜೆ, ಅನ್ನಸಂತರ್ಪಣೆ ಅದ್ದೂರಿಯಾಗಿ ನಡೆಯಿತು.

ಭೀಮನ ಅಮಾವಾಸ್ಯೆಯ ಅಂಗವಾಗಿ ದೇವಸ್ಥಾನದಲ್ಲಿ ಬುಧವಾರದಿಂದಲೇ ಪೂಜಾ ಕೈಂಕಾರ್ಯ ಆರಂಭವಾಗಿದ್ದು, ಇಂದು ಬೆಳಿಗ್ಗೆ  ದೇವರಿಗೆ ಅಭಿಷೇಕ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಲ್ಲನಮೂಲೆ ಮಠದ ಶ್ರೀಗಳು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಮಠಾಧೀಶರು ಭಾಗವಹಿಸಿದ್ದರು.  ಸಹಸ್ರಾರು ಭಕ್ತರು ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು. ಜನಜಂಗುಳಿ ನೆರೆದಿತ್ತು. ಪೊಲೀಸ್ ಬಂದೋಬಸ್ ನಿಯೋಜಿಸಲಾಗಿತು.

ಆರ್ಚಕ ವಾಗೀಶ್ಆರಾಧ್ಯ ಮಾತನಾಡಿ. ಮೊದಲನೆಯದು ಮಾದಪ್ಪನ ಬೆಟ್ಟವಾದರೆ ಎರಡನೆಯದು ಮಹದೇಶ್ವರ ಕ್ಷೇತ್ರ ಸಂತೇಮರಹಳ್ಳಿ ಮಹದೇಶ್ವರ ದೇವಾಲಯವಾಗಿದ್ದು, ಭೀಮನ ಅಮಾವಾಸ್ಯೆ ಪ್ರಯುಕ ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಶೇಷಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಇಷ್ಟಾರ್ಥ ಈಡೇರಿಸುವ ಮಹದೇಶ್ವರ: ವಿಶ್ವ ರೈತ ಸಂಘ ಸದಸ್ಯರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪಾರಂಪಾರಿಕ ನಾಟಿ ವೈದ್ಯ ಎಚ್.ಸಿ.ಮಹೇಶ್ ಕುಮಾರ್ ಮಾತನಾಡಿ, ಇಡೀ ರಾಜ್ಯದಲ್ಲಿ ಎರಡನೆಯ ಮಹದೇಶ್ವರ ಸಂತೇಮರಹಳ್ಳಿ ಮಹದೇಶ್ವರ ಭಕ್ತರ ಇಷ್ಮಾರ್ಥ ಈಡೇರಿಸುವ ಭಗವಂತ, ಸಂತಾನಭಾಗ್ಯ, ವರಗೆ ವಧು ಕರುಣಿಸೋ ವಧುಗೆ ವರ ಕರುಣಿಸೋ ಜೊತೆಗೆ ಹಲವಾರು ಸಂಕಷ್ಟ ನಿವಾರಿಸುವ ಮಹದೇಶ್ವರ ಎಂದರೆ ಅದು ಸಂತೇಮರಹಳ್ಳಿ ಮಹದೇಶ್ವರು. ಇಲ್ಲಿ ಪ್ರಸಾದ ಸ್ವೀಕರಿಸಿ ಹೋದರೆ ಭಾಗ್ಯ ಸಿಗುವುದು ಖಚಿತ. ಆಗಾಗಿ ಈ ದೇವಾಲಯಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತದೆ ಎಂದರು.

Leave a Reply

Your email address will not be published. Required fields are marked *