ಸುಗಮ ಸಂಗೀತ ಕನ್ನಡದಲ್ಲಿ ಬಿಟ್ಟರೆ ಬೇರೆ ಯಾವ ಭಾಷೆಯಲ್ಲಿ ಇಲ್ಲ: ಕೆ.ವೆಂಕಟರಾಜು

ಗಡಿನಾಡ ಸುಗಮ ಸಂಗೀತೋತ್ಸವ ಸಮಾರೋಪ ಸಮಾರಂಭ

ಚಾಮರಾಜನಗರ : ಸುಗಮ ಸಂಗೀತ ಕನ್ನಡದಲ್ಲಿ ಬಿಟ್ಟರೆ ಬೇರೆ ಯಾವ ಭಾಷೆಯಲ್ಲೂ ಇಲ್ಲ ಎಂದು ಹಿರಿಯ ಸಾಹಿತಿ ಕೆ.ವೆಂಟಕರಾಜು ಹೇಳಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವರ ಸಿಂಚನ ಸಾಂಸ್ಕೃತಿಕ ಕಲಾ ಸಂಘ ಜ್ಯೋತಿಗೌಡನಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ಗಡಿನಾಡ ಸುಗಮ ಸಂಗೀತೋತ್ಸವ ಸಮಾರಂಭ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುಗಮ ಸಂಗೀತ ಭಾರತದ ಯಾವುದೇ ಬೇರೆ ರಾಜ್ಯಗಳಲ್ಲಿ ಇಲ್ಲ. ಯಾವ ರಾಜ್ಯದಲ್ಲಿಯೂ ಸುಗಮ ಸಂಗೀತ ಪದ್ಧತಿ ಇಲ್ಲ. ಅಥವಾ ಈ ಒಂದು ಪ್ರಕಾರ ಬೇರೆ ಯಾವ ಭಾಷೆಯಲ್ಲೂ ಇಲ್ಲ. ಕನ್ನಡದಲ್ಲಿ ಮಾತ್ರ ಇದೆ. ಮಹಾರಾಷ್ಟ್ರದಲ್ಲಿ ನಾಟ್ಯ ಸಂಗೀತ ಇದೆ. ಇಲ್ಲಿ ಮಾತ್ರ ನಮ್ಮ ಕವಿಗಳ ಹಾಡುಗಳನ್ನು ಜನಮಾನಸದತ್ತ ತೆಗೆದುಕೊಂಡು ಹೋಗಿರುವುದು ಸುಗಮ ಸಂಗೀತದ ಕಲಾವಿದರು ಎಂದರು.

ಸುಗಮ ಸಂಗೀತಕ್ಕೆ ಭದ್ರ ಅಡಿಪಾಯ ಹಾಕಿದವರು ಬಹಳಷ್ಟು ಜನರು ಇದ್ದಾರೆ. ಅದರಲ್ಲಿ ಬಹಳ ಪ್ರಮುಖರಾದವರು ಪಿ.ಕಾಳಿಲಿಂಗರಾಯರು, ಅವರು ಸುಗಮ ಸಂಗೀತ’ಕ್ಕೆ ಭದ್ರವಾದ ಅಡಿಪಾಯ ಹಾಕಿದರು. ಅವರಿಗೆ ಹಿಂದೂಸ್ತಾನಿ  ಸಂಗೀತ, ಕರ್ನಾಟಕ ಸಂಗೀತ, ಜಾನಪದ ಯಕ್ಷಗಾನದ ಸಂಗೀತ, ನಾಟಕದ ಸಂಗೀತ ಅವರಿಗೆ ಗೊತ್ತಿತ್ತು. ಇಷ್ಟು ಸಂಗೀತ ಗೊತ್ತಿದ್ದರು ಕೂಡ ಅವರು ತಮ್ಮ ಇಡೀ ಜೀವನವನ್ನು ಸುಗಮ ಸಂಗೀತಕ್ಕೆ ತೆರೆದುಕೊಂಡರು. ಅಲ್ಲಿ ಎಲ್ಲ ಅನುಭವ ಸುಗಮ ಸಂಗೀತಕ್ಕೆ ಅಳವಡಿಸಿದರು. ಚೆನ್ನಾಗಿ ಹಾಡಿದರು, ಸ್ವರ ಸಂಯೋಜನೆ ಮಾಡಿದರು ನಿಜ ಆದರೆ ಎಷ್ಟು ಕವಿಗಳ ಹಾಡುಗಳನ್ನು ಅವರು ಪತ್ತೆ ಮಾಡಿದರು ಎಂದರು.

ಗುರುವಂದನೆ: ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನಕುಮಾರ್, ಅಂತಾರಾಷ್ಟ್ರೀಯ ಗಾಯಕ ಸಿ.ಎಂ.ನರಸಿಂಹಮೂರ್ತಿ, ರಾಜ್ಯ ಮಟ್ಟದ ಜ್ಯೋತಿ ಭಾಫುಲೆ ಪ್ರಶಸ್ತಿ ಪುರಸ್ಕೃತ ನಂಜುಂಡಯ್ಯ, ಅಂತರಾಷ್ಟ್ರೀಯ ಕಲಾವಿದ ಡಾ.ಆರ್.ಸೋಮರಾಜು, ಸುಗಮ ಸಂಗೀತ ಗಾಯಕ ಲತಾಪುಟ್ಟಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಭಾರತ ಸೇವಾ ದಳ ಜಿಲ್ಲಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭಾ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ಎಂ.ಮಹೇಶ್ ಮಾತನಾಡಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಬಸವರಾಜು ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ರಾಧಿಕ ಗುಪ್ತ, ದೈಹಿಕ ಶಿಕ್ಷಕ ನಾರಾಯಣ, ಸ್ವರ ಸಿಂಚನ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಜೆ.ಬಿ.ಮಹೇಶ್, ಕಾರ್ಯದರ್ಶಿ ಬಿ.ರಾಜೇಶ್, ಗಾಯಕರಾದ ಅರುಣ್‌ ಕುಮಾರ್, ಕಲೆ ನಟರಾಜು, ಲತಾಪುಟ್ಟಸ್ವಾಮಿ, ಪ್ರಕೃತಿ, ಕುಮಾರ್‌ ಅಮ್ಮನಪುರ, ನಾಗಮ್ಮ, ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *