ಹುಲಿದಾಳಿಯಿಂದ ಮೃತಪಟ್ಟ ಬಡಗಲಪುರ ರೈತ ಬಸವಣ್ಣ ನಿವಾಸಕ್ಕೆ ಎಂಎಲ್ಸಿ ಡಾ.ಡಿ.ತಿಮ್ಮಯ್ಯ ಭೇಟಿ

ಚಾಮರಾಜನಗರ: ಹುಲಿದಾಳಿಯಿಂದ ಮೃತಪಟ್ಟ ರೈತ ತಾಲೂಕಿನ ಬಡಗಲಪುರದ ಬಸವಣ್ಣ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಭೇಟಿ ನೀಡಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ ಧನಸಹಾಯ ಮಾಡಿದರು.

ನಂತರ ಮಾತನಾಡಿ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ  ದಲಿತ ಸಮುದಾಯದ  ರೈತ ಬಸವಣ್ಣ ಅವರ ಮೇಲೆ ಹುಲಿ ದಾಳಿ ನಡೆಸಿ ತಿಂದು ಹಾಕಿರುವುದು ಒಂದು ದುರಂತವೇ ಸರಿ. ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವರೊಡನೆ ಮಾತನಾಡಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ ತಿಳಿಸಿದರು.

ಹುಲಿದಾಳಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವುದು ಕಷ್ಟ ವಾಗಿದೆ. ಅರಣ್ಯ ಅಧಿಕಾರಿಗಳು ಹುಲಿ ಸೆರೆಹಿಡಿಯಬೇಕು. ಇಂತಹ ಘಟನೆ .ಮರುಕಲಿಸದಂತೆ  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಶಿವಮೂರ್ತಿ, ಹರವೆ ನಾಗೇಶ್, ಪ್ರಕಾಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *