ಸಂಸದ ಸುನೀಲ್ ಬೋಸ್ ಹುಟ್ಟುಹಬ್ಬ:  ಅಹಿಂದ ಸಂಘಟನೆಯಿಂದ ಚಾಮರಾಜೇಶ್ವರನಿಗೆ ವಿಶೇಷ ಪೂಜೆ

 ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್ ಅವರ ಹುಟ್ಟುಹಬ್ಬದ ಅಂಗವಾಗಿ ಅಹಿಂದ ಸಂಘಟನೆ ವತಿಯಿಂದ. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲಾಯಿತು.

 ಅಹಿಂದ ಸಂಘಟನೆ ಯುವ ಘಟಕದ ರಾಜ್ಯಾಧ್ಯಕ್ಷ ಹಳೇಪುರ ಎಂ.ಮಹೇಶ್ ಅವರ ನೇತೃತ್ವದಲ್ಲಿ
 ದೇವಸ್ಥಾನದಲ್ಲಿ ಸುನೀಲ್ ಬೋಸ್ ಹೆಸರಿನಲ್ಲಿ ಆರ್ಚನೆ, ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಹಿಂದ ಸಂಘಟನೆ ಯುವ ಘಟಕದ ರಾಜ್ಯಾಧ್ಯಕ್ಷ ಹಳೇಪುರ ಎಂ.ಮಹೇಶ್ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್ ಅವರ ಹುಟ್ಟುಹಬ್ಬದ ಅಂಗವಾಗಿ ಅಹಿಂದ ಸಂಘಟನೆ ವತಿಯಿಂದನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಲಾಗಿದೆ.ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು.ಕ್ಷೇತ್ರದ ವ್ಯಾಪ್ತಿಯ ಹಾಡಿಗಳಿಗೆ ಭೂಗತ ಕೇಬಲ್ಮೂ ಲಕ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆಯ ಕುರಿತು ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯನ್ನು ರಾಷ್ಟ್ರೀಯ ಅರಿಶಿನ ಮಂಡಳಿ ವ್ಯಾಪ್ತಿಗೆ ಸೇರಿಸುವ ಅಗತ್ಯತೆಯನ್ನು ಮನವರಿಕೆ ಮಾಡಲು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಮಂಜೂರಾಗಿದ್ದರೂ ಆರಂಭವಾಗದಿದ್ದ ಚಾಮರಾಜನಗರ ಸರ್ಕಾರಿ ಕಾನೂನು ಕಾಲೇಜಿಗೆ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ದಿಂದ ಅನುಮೋದನೆ ಕೊಡಿಸಿ, ತರಗತಿಗಳು ಪ್ರಾರಂಭವಾಗುವಂತೆ ಮಾಡಿದ್ದಾರೆ . ಕ್ಷೇತ್ರವನ್ನು ಮಾದರಿ ಮಾಡಲು ಯೋಜನೆಗಳ ಹಾಕಿಕೊಂಡಿದ್ದಾರೆ.ಅವರಿಗೆ ಭಗವಂತ  ಹೆಚ್ವಿನ ಆರೋಗ್ಯ, ಆಯಸ್ಸು , ಹೆಚ್ಚಿನ ಅಧಿಕಾರಿ ಕರುಣಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ  ಅಹಿಂದ ಸಂಘಟನೆಯ  ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ನಾಗೇಶ್ ಚಿಜಲ, ಶ್ರೀನಿವಾಸ ಗಣಿಗನೂರು, ಪುನೀತ್ ಕುಮಾರ್, ಮಹಾದೇವಸ್ವಾಮಿ, ಮಧುರೇಚಂಬಳ್ಳಿ, ಸಿದ್ದುಕೋಟಂಬಳ್ಳಿ ,ಆನಂತ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *