ಶಿವಮೊಗ್ಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ

ಶಿವಮೊಗ್ಗ : ಶಿವಮೊಗ್ಗದ ಹಲ್ಕೊಳಾದ 100 ಅಡಿ ರಸ್ತೆಯಲ್ಲಿರುವ ಬಾಲ ನ್ಯಾಯ ಮಂಡಳಿಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಡಾನ್ ಬಾಸ್ಕೊ ಪುನರ್ವಸತಿ ಕೇಂದ್ರ ಭದ್ರಾವತಿ ತಾಲೂಕು ಇವರ ಸಂಯುಕ್ತಶ್ರಯದಲ್ಲಿ `ದತ್ತು ಮಾರ್ಗ ಸೂಚಿ ೨೦೨೨ ಪೋಷಕತ್ವ ಯೋಜನೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಇತರೆ ಕಾಯ್ದೆಗಳ ಕುರಿತು’ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ವಹಿಸಿದ್ದರು.

ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುನಾಥ ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ರೇಖಾ ಜಿ ಎಂ., ಶಿವಮೊಗ್ಗ ಶ್ರೀ ಫಾದರ್ ವರ್ಗೀಸ್ ಪಲ್ಲಿ ಪುರಂ ನಿರ್ದೇಶಕರು ಭಾಸ್ಕೋ ಬೆಂಗಳೂರು ಫಾದರ್ ಕ್ರಿಸ್ತ ರಾಜ್ ನಿರ್ದೇಶಕರು ಡಾನ್ ಬಾಸ್ಕೋ ಭದ್ರಾವತಿ ಇವರು ವಹಿಸಿದ್ದರು

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ತಾಜುದ್ದೀನ್ ಖಾನ್ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇವರು ದತ್ತು ಹಾಗೂ ಪೋಷಕತ್ವ ಯೋಜನೆಯ ಬಗ್ಗೆ ಉಪನ್ಯಾಸವನ್ನು ನೀಡಿದರು.

ಹಾಗೆಯೇ ರಕ್ಷಣಾಧಿಕಾರಿಗಳ ಅಸಾಂಸ್ಥಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಇವರು ದತ್ತು ಮಾರ್ಗಸೂಚಿ ೨೦೨೨ ದತ್ತು ಪ್ರಕ್ರಿಯೆ ಆಧಿಕೃತವಾಗಿ ಮಕ್ಕಳನ್ನು ಪಡೆದಲ್ಲಿ ಆಗುವಂತಹ ಶಿಕ್ಷೆ ಹಾಗೂ ದಂಡ ಕುರಿತು ಮಾಹಿತಿ ನೀಡಿದರು ಮತ್ತು ಶ್ರೀ ಶಿವಮಲ್ಲು ರಾಜ್ಯ ಯೋಜನಾ ಸಂಯೋಜಕರು ಭಾಸ್ಕೋ ಬೆಂಗಳೂರು ಇವರು ಪೋಷಕತ್ವ ಯೋಜನೆಯ ಕುರಿತು ಮಾಹಿತಿ ನೀಡಿದರು.

ಮತ್ತು ಶ್ರೀಮತಿ ಗಾಯತ್ರಿ ಡಿ. ಎಸ್ ರಕ್ಷಣಾಧಿಕಾರಿ (ಸಾಂಸ್ಥಿಕ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಹಾಗೂ ಶ್ರೀ ರಂಗನಾಥ್ ಸೋಶಿಯಲ್ ಮೊಬೈಲೈಜರ್ ಡಾನ್ ಬಾಸ್ಕೋ ಸಂಸ್ಥೆ ಭದ್ರಾವತಿ, ಇವರು ಉಪಸ್ಥಿತಿ ವಹಿಸಿದ್ದರು.

ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಭರತ್ ಎಸ್‌ಎಂ ರಕ್ಷಣಾಧಿಕಾರಿಗಳು ಅಸಾಂಸ್ಥಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಇವರು ನೆರವೇರಿಸಿದರು ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಪ್ರಮೋದ್ ಆಪ್ತ ಸಮಾಲೋಚಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಇವರು ನೆರವೇರಿಸಿದರು ಹಾಗೆಯೇ ಕಾರ್ಯಕ್ರಮದ ವಂದನಾರ್ಪಣೆಯನ್ನು ರಮೇಶ್ ಕ್ಷೇತ್ರ ಕಾರ್ಯಕರ್ತರು ಎಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಇವರ ನೆರವೇರಿಸಿದರು.

ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ನರ್ಸ್ಗಳು ಜಿಲ್ಲೆಯ ಮಕ್ಕಳ ವಿಶೇಷ ಪೊಲೀಸ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ವಸಹಾಯದ ಸಂಘದ ಪ್ರತಿನಿಧಿಗಳು ಹಾಗೂ ಪೋಷಕತ್ವ ಯೋಜನೆಯ ಪೋಷಕರು ಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *