ಕನ್ನಡ ನೆಲ, ಜಲ, ಭಾಷೆ ಉಳಿಸುವಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ದೊಡ್ಡದು: ಶ್ರೀ ನಿಧಿಕುದರ್

ಚಾಮರಾಜನಗರ; ಕನ್ನಡ ನೆಲ, ಜಲ ಹಾಗೂ ಭಾಷೆಯ ರಕ್ಷಣೆಯಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ಬಹಳ ದೊಡ್ಡದಾಗಿದೆ ಎಂದು ಉದ್ಯಮಿ, ಯೂತ್ ಐಕಾನ್ ಶ್ರೀನಿಧಿಕುದರ್ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಚಾಮರಾಜನಗರ ತಾಲೂಕು ಘಟಕ ನೂತನ ಪ್ರಾರಂಭೋತ್ಸವ  ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗೋಕಾಕ್ ಚಳುವಳಿಯಂತಹ ಐತಿಹಾಸಿಕ ಹೋರಾಟಗಳಿಂದ ಹಿಡಿದು ಇಂದಿನವರೆಗೂ ಕನ್ನಡದ ಅಸ್ಮಿತೆ, ನಾಡಿನ ಹಿತ ಕಾಯುವಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕನ್ನಡದ ಬಳಕೆಯನ್ನ ಶಾಲೆ, ಕಚೇರಿ ಹಾಗೂ ಜನದಟ್ಟಣೆಯ ಪ್ರದೇಶಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಒತ್ತಾಯಿಸುವುದು.ಅನ್ಯಭಾಷೆಗಳ ಹೇರಿಕೆ ವಿರುದ್ಧ ಧ್ವನಿ ಎತ್ತುವುದು ಮತ್ತು ಕರ್ನಾಟಕದ ಹಿತಾಸಕ್ತಿ ಕಾಪಾಡುವಲ್ಲಿ ಕನ್ನಡ ಪರ ಸಂಘಟನೆಗಳು ಶ್ರಮಿಸುತ್ತಿವೆ. ಅದೇ ರೀತಿಯಲ್ಲಿ  ಇಂದು ಆರಂಭವಾಗಿರುವ ವಿಜಯಕರ್ನಾಟಕ ರಕ್ಷಣಾ ವೇದಿಕೆ ಚಾಮರಾಜನಗರ ತಾಲೂಕು ಘಟಕ ಮಾಡಲಿ, ಈ ಸಂಘಟನೆಯು ಯಶಸ್ಸಿನತ್ತ ಸಾಗಲಿ ಎಂದು ಆಶಿಸಿದರು.

ಎಸ್ ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬುಲೆಟ್ ಚಂದ್ರು ಮಾತನಾಡಿ. ಕನ್ನಡ ನೆಲ, ಜಲ, ಭಾಷೆ ಸಂರಕ್ಷಣೆಯಲ್ಲಿ  ವಿಜಯಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಅದೇ ಮಾದರಿಯಲ್ಲಿ ಜಿಲ್ಲಾ ಘಟಕ, ತಾಲೂಕು ಘಟಕಗಳು ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ  ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಬಿ.ಮಹೇಶ್ ಕುಮಾರ್ ಮಾತನಾಡಿ,
ಕನ್ನಡ ನೆಲ, ಜಲ, ಗಡಿ ವಿಚಾರ ಬಂದಾಗ ಹೋರಾಟ ಮಾಡಬೇಕು. ಕನ್ನಡವನ್ನು ಉಳಿಸಿ ಬೆಳಸಬೇಕು.. ನಮ್ಮ ಸಂಘಟನೆಯು ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ಶ್ರಮಿಸುತ್ತಿದೆ. ಸಂಘಟನೆಯ ಕಾರ್ಯಕರ್ತರು ಸರ್ಕಾರ ದಿಂದ ದೊರೆಯುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವಕೀಲ ರಾಜೇಂದ್ರ ಮಾತನಾಡಿ, ಗಡಿಜಿಲ್ಲೆಯಲ್ಲಿ ಕನ್ನಡ ಸಂಘಟನೆಗಳ ಅವಶ್ಯಕತೆ ಇದ್ದು, ಯಾವುದೇ ವಿಚಾರ ಬಂದಾಗ ನ್ಯಾಯಯುತವಾಗಿ ಹೋರಾಟ ಮಾಡಬೇಕು. ನಿಮ್ಮ ಬೆಂಬಲವಾಗಿ ನಾವಿರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವಸುಂದರ್, ರಾಜ್ಯ ಉಪಾಧ್ಯಕ್ಷರಾದ ದೇವರಾಜು,  ಜಿಲ್ಲಾ ಉಪಾಧ್ಯಕ್ಷ ಆನಂದ್,ಗೌರವಾಧ್ಯಕ್ಷ ಮಂಟೇಲಿಂಗಯ್ಯ, ಜಿಲ್ಲಾ ಸಂಚಾಲಕ ಮೂರ್ತಿ ,  ಉಪಾಧ್ಯಕ್ಷ ಅರುಣ್, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಪೂರ್ವಿ, ಚಾಮರಾಜನಗರ ತಾಲೂಕು ಅಧ್ಯಕ್ಷ  ಎಂ.ಕಿರಣ್ ರಾಜ್, ಹನೂರು ತಾಲೂಕು ಅಧ್ಯಕ್ಷ ಅಭಿಷೇಕ್, ಅರುಣ್, ಮಲ್ಲಿಕಾರ್ಜುನ,  ಎಂ.ಸಿ. ಮನೋಹರ್,  ಎನ್.ನವೀನ್ ಪ್ರಸಾದ್, ಪ್ರಕಾಶ್, ಸಂದೀಪ್ ಸಾಗರ್, ನವೀನ್ಇತರರು ಹಾಜರಿದ್ದರು.

Leave a Reply

Your email address will not be published. Required fields are marked *