- ಕಡ್ಲೆಪುರಿ, ಹೂ, ಅರಿಶಿನ, ಕುಂಕುಮ ಎರಚಿ ಸೇನಾಪಡೆ ಕಾರ್ಯಕರ್ತರ ಆಕ್ರೋಶ
ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕ ರಾಜ್ಯದ ಪಾಲಿಗೆ ಸತ್ತುಹೋಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಕಡ್ಲೆಪುರಿ, ಹೂ, ಅರಿಶಿನ, ಕುಂಕುಮ ಎರಚಿ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕ ರಾಜ್ಯದ ಪಾಲಿ ಸತ್ತು ಹೋಗಿದೆ ಎಂಬ ಪೋಸ್ಟರ್ ಹಿಡಿದು ಕಡ್ಲೆಪುರಿ, ಹೂ, ಅರಿಶಿನ, ಕುಂಕುಮ ಎರಚಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶ ನೀಡಿರುವುದನ್ನು ಖಂಡಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕ ರಾಜ್ಯದ ಪಾಲಿಗೆ ಸತ್ತು ಹೋಗಿದೆ ಎಂದು ಆರೋಪಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ಸತ್ತು ಹೋಗಿದೆ ಎಂಬ ಪೋಸ್ಟರ್ ಹಿಡಿದು ಕಡ್ಲೆಪುರಿ, ಹೂ, ಅರಿಶಿನ, ಕುಂಕುಮ ಎರಚಿ ಹೋರಾಟ ಮಾಡಿದ್ದೇವೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಒಂದು ದಿನ ಬಂದು ನೋಡಲಿಲ್ಲ ಜಲಾಶಯಗಳನ್ನು ಪರಿಶೀಲನೆ ಮಾಡಿಲ್ಲ. ರಾಜ್ಯದ 24 ಜಿಲ್ಲೆಗಳಲ್ಲಿ ಬರವಿದ್ದು, ಜನ ಜಾನುವಾರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ನಮಗೆ ಕುಡಿಯಲು ನೀರಿಲ್ಲ ಎಂದ ಮೇಲೆ ತಮಿಳುನಾಡಿಗೆ ಹೇಗೆ ನೀರು ಕೊಡುವುದು ಎಂದು ಖಾರವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕಾವಲುಪಡೆ ಪರಶಿವಮೂರ್ತಿ, ಕಿರಣ್ ಕುಮಾರ್, ವರದರಾಜು, ನಾರಾಯಣ್, ನಿಜಧ್ವನಿಗೋವಿಂದರಾಜು, ಕಾರ್ ಮಹದೇವನಾಯಕ, ಕಂಡಕ್ಟರ್ ಚಾ.ಸಿ.ಸೋಮನಾಯಕ, ಪಣ್ಯದಹುಂಡಿ ರಾಜು, ನಂಜುಂಡಸ್ವಾಮಿ, ಸುರೇಶ್ ಗೌಡ, ಸುಬ್ಬಯ್ಯ, ಮಹೇಶ್ ಗೌಡ, ರಾಜಪ್ಪ, ಶಿವು, ಸತೀಶ್, ನಾಗಪ್ಪ ಹೊನ್ನಹಳ್ಳಿ, ಜಗದೀಶ್, ಆಟೋ ಲಿಂಗರಾಜು, ಸೋಮವಾರಪೇಟೆ ಮಂಜು, ರಮೇಶ್ ಇತರರು ಭಾಗವಹಿಸಿದ್ದರು.
