ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಒಣಗಿದ ಗರಿಹಿಡಿದು ಕರ್ನಾಟಕ ಸೇನಾಪಡೆಯ ಕಾರ್ಯಕರ್ತರ ಅಕ್ರೋಶ

ಇನ್ನು ಒಂದು ವಾರದೊಳಗೆ ಕೆರೆಗಳಿಗೆ ನೀರು ತುಂಬಿಸದ್ದಿದ್ದರೆ ಚಾಮರಾಜನಗರ ಬಂದ್ : ಶ್ರೀನಿವಾಸಗೌಡ ಎಚ್ಚರಿಕೆ

ಚಾಮರಾಜನಗರ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆ  ಕಾರ್ಯಕರ್ತರು ಒಣಗಿದ ಗರಿ ಹಿಡಿದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಜಿಲ್ಲೆಯ ಕೆರೆಗಳಲ್ಲಿ ಒಣಗಿ ಹೋಗಿದ್ದು, ಅಂತರ್ಜಲ ಕುಸಿದಿದ್ದು,  ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಜಿಲ್ಲೆಯ ಕೆರೆಗಳಿಗೆ ಖಾಲಿಯಾಗಿದ್ದು, ನೀರಿನ ಮೂಲ ಬತ್ತಿಹೋಗಿದೆ. ಆದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯವಾಗಿದ್ದು, ಕೂಡಲೇ ಕೆರೆಗಳಿಗೆ ನೀರು ತುಂಬಿಸಬೇಕು ಇಲ್ಲದಿದ್ದರೆ ಚಾಮರಾಜನಗರ ಬಂದ್ ಮಾಡುವುದಾಗಿ ಶ್ರೀನಿವಾಸಗೌಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶ್ರೀನಿಧಿಕುದರ್, ಕಂಡಕ್ಟರ್
ಚಾ.ಸಿ.ಸೋಮನಾಯಕ,ನಿಜಧ್ವನಿಗೋವಿಂದರಾಜು,ಪಣ್ಯದಹುಂಡಿ ರಾಜು, ಹೊಮ್ಮ ಲೋಕೇಶ್, ಚಾ.ಸಿ.ಸಿದ್ದರಾಜು, ಆಟೋ ಲಿಂಗರಾಜು, ಶಿವಣ್ಣ ಹೊಸೂರು, ಸುರೇಶ್ ಗೌಡ, ರಾಚಪ್ಪ, ತಾಂಡವಮೂರ್ತಿ, ವೀರಭದ್ರ, ಜಗದೀಶ್ ನಾಗರಾಜು, ಮುತ್ತಿಗೆ ಗೋವಿಂದರಾಜು, ಶ್ರೀಕಾಂತ್ ಅರಸ್, ಸಂಪತ್, ಅಮಚವಾಡಿ ಶಿವು, ಸಾಗಡೆ ಕುಮಾರ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *