ರವಿ ಹಂಜ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ  ಪ್ರತಿಭಟನೆ

  • ಲೇಖಕ  ರವಿಹಂಜ್ ಗಡಿಪಾರಿಗೆ ಶ್ರೀನಿವಾಸಗೌಡ ಆಗ್ರಹ

ಚಾಮರಾಜನಗರ:  ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವದ ಕುರಿತು ಅವಹೇಳನಕಾರಿಯಾದ ಕೃತಿ ಹೊರತಂದ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಆಗ್ರಹಿಸಿ  ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ  ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಭುವನೇಶ್ವರಿ ವೃತ್ತದಲ್ಲಿ ರಸ್ತೆತಡೆ ನಡೆಸಿ ರವಿಹಂಜ್ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕರು, ವಚನಕಾರರು ಮತ್ತು ಮಾನವತಾವಾದಿಗಳು ಜಾತಿ, ಮತ ಮತ್ತು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದರು. ಅವರ ಬಗ್ಗೆ ಅವಹೇಳನಕಾರಿಯಾಗಿ ಬಸವ ಮಂಟಪ ಪುಸ್ತಕ ಬರೆದಿರುವ ಲೇಖಕ ರವಿಹಂಜ್ ಅವರನ್ನು  ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ರಾಚಪ್ಪ, ಆಟೋ ಲಿಂಗರಾಜು, ಶ್ರೀಕಾಂತ್ ಅರಸ್, ತಮಿಳು ಸಂಘದ ಜಗದೀಶ್, ಚೆನ್ನಪ್ಪಪುರ ಸಂಪತ್, ಅಂಗಡಿ ರಾಜೇಂದ್ರ, ಮುತ್ತುರಾಜು, ವೀರಭದ್ರ, ತಾಂಡವಮೂರ್ತಿ, ನಂಜುಂಡ, ನಾಗೇಂದ್ರಗೌಡ, ಚಾ.ಸಿ.ಸಿದ್ದರಾಜು ಇತರರು.

Leave a Reply

Your email address will not be published. Required fields are marked *