- ಮೂಡಲಮೋಳೆಯಲ್ಲಿ ಶ್ರೀಭಗೀರಥ ಮಹರ್ಷಿ ಪುತ್ಥಳಿ ಅನಾವರಣ
ಚಾಮರಾಜನಗರ : ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಉಪ್ಪಾರ ಸಮುದಾಯವನ್ನು ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ರಾಜ್ಯ ಸರ್ಕಾರವನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದ ಚಿನ್ಮೂಲದ್ರಿ ಶಿಲಪುರಿ ಉಪ್ಪಾರ ಮಹಾಸಂಸ್ಥಾನದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿಸ್ವಾಮೀಜಿ ಆಗ್ರಹಿಸಿದರು.
ತಾಲೂಕಿನ ಮೂಡಲಮೋಳೆ ಗ್ರಾಮದಲ್ಲಿ ಶ್ರೀಗಣಪತಿ ದೇವಸ್ಥಾನ ಉದ್ಘಾಟನೆ ಹಾಗೂ ಅಂಕಪ್ರತಿಷ್ಠಾಪನೆ ಮತ್ತು ಶ್ರೀ ಭಗೀರಥ ಮಹರ್ಷಿ ಪುತ್ಥಳಿ ಅನಾವರಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಶ್ರೀಮಹರ್ಷಿ ಭಗೀರಥ ಪುತ್ಥಳಿ ಅನಾವರಣಗೊಳಿಸಿ ನಂತರ ನಡೆದ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಹೊಂದಿರುವ ಉಪ್ಪಾರ ಸಮುದಾಯ ಇಡೀ ದೇಶದಲ್ಲಿ ಸುಮಾರು 10 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂದು ಹೇಳುತ್ತಾರೆ. ಬಹುದೊಡ್ಡ ಸಂಖ್ಯೆಯಲ್ಲಿರುವ ನಮ್ಮ ಸಮುದಾಯವು ಎಲ್ಲ ಕಡೆ ಒಂದುಗೂಡಬೇಕು. ಸಮಾಜದ ಅಭಿವೃದ್ಧಿ ಕಡೆ ಚಿಂತನೆ ಮಾಡಬೇಕಿದೆ ಎಂದರು.
ಸಚಿವರಾದ ಪುಟ್ಟರಂಗಶೆಟ್ಟಿ ಅವರಿಗೆ ಸಮಾಜದ ಪ್ರಗತಿಗಾಗಿ ಅವರಿಗೆ ಹೇಳಲಾಗಿದೆ. ಅವರನ್ನು ನಾಲ್ಕು ಬಾರಿ ಆಯ್ಕೆಮಾಡಿ ಉಪ್ಪಾರ ಸಮುದಾಯಕ್ಕೆ ಗೌರವ ತಂದುಕೊಟ್ಟಿದ್ದೀರಿ. ಅವರು ಈ ಭಾಗ, ನಾಡಿನ ಅಭಿವೃದ್ಧಿ ಮಾಡಲಿ, ಉಪ್ಪಾರ ಸಮಾಜವನ್ನು ಮೀಸಲಾತಿ. ಪಟ್ಟಿಗೆ ಸೇರಿಸಬೇಕು ಎಂಬುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಸುಮರು 3.5 ವರ್ಷಗಳಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳಿಗೆ, ಮಾಜಿ ಮುಖ್ಯಮಂತ್ರಿಗಳಲ್ಲಿ ಅನೇಕ ಬಾರಿ ಒತ್ತಡ ಮಾಡಿದ್ದೇವೆ. ಅವರು ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳುತಿದ್ದಾರೆ. ಅದನ್ನು ಅದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ನಮ್ಮ ಸಮಾಜವನ್ನು ಮೀಸಲಾತಿಪಟ್ಟಿಗೆ ಸೇರಿಸಿ. ಈ ಸಮಾಜ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಭಗೀರಥರು ಮನುಕುಲವನ್ನೇ ಉದ್ಧಾರ ಮಾಡಿದರು : ಚಾಮರಾಜನಗರ ಜಿಲ್ಲೆಯ ಮೂಡಲಮೋಳೆ ಗ್ರಾಮದಲ್ಲಿ ಶ್ರೀಭಗೀರಥ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಒಂದು ಇತಿಹಾಸ ನಿರ್ಮಾಣ ಮಾಡಿದ್ದೀರಿ. ಇದು ತುಂಬಾ ಸಂತಸವಾಗಿದೆ. ನಾವೆಲ್ಲರೂ ಸೂರ್ಯವಂಶ ಕ್ಷತ್ರಿಯರು, ಇಡೀ ಭಾರತಖಂಡದಲ್ಲಿ ಶ್ರೇಷ್ಠವಾದ ಪರಂಪರೆ ಇದೆ. ಭಗೀರಥ ಮಹರ್ಷಿಗಳು ಮಹಾನ್ ಚಕ್ರವರ್ತಿಯಾಗಿದ್ದರು. ಅವರು ಪೂರ್ವಜರ ಆತ್ಮಕ್ಕೆ ಶಾಂತಿಯ ತರುವ ಸಲುವಾಗಿ ನೂರಾರು ವರ್ಷಕಾಲ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದರು. ಸಕಲಜೀವಿರಾಶಿಗಳಿಗೂ ಜೀವಕಳೆ ತಂದು ಮನುಕುಲವನ್ನೇ ಉದ್ಧಾರ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಅಯ್ಯನ ಸರಗೂರು ಮಠದ ಶ್ರೀ ಮಹಾದೇವಸ್ವಾಮಿಜೀಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಶ್, ಮುಖಂಡರಾದ ಕೂಡ್ಲೂರು ಹನುಮಂತಶೆಟ್ಟಿ, ಮರಿಸ್ವಾಮಿ ರಾಜ್ಯ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ
ರಾಮಚಂದ್ರ, ತಾಲೂಕು ಕೆಡಿಪಿ ಸದಸ್ಯ ಶ್ರೀನಿವಾಸ, ಬಾಗಳಿ ರೇವಣ್ಣ ಮಾದೇಶ್ ಉಪ್ಪಾರ, ಯಜಮಾನರಾದ ಮಹದೇವಶೆಟ್ಟಿ, ನಂಜುಂಡಶೆಟ್ಟಿ, ನಂಜಪ್ಪ, ಮಹದೇವಶೆಟ್ಟಿ, ಗ್ರಾ.ಪಂ.ಮಾಜಿ ಸದಸ್ಯ ಎಂ.ಕೆ.ಚಂದ್ರು, ಮುಖಂಡರಾದ ಮಯೂರ, ಮಹದೇವ, ಮಂಟೇಸ್ವಾಮಿ, ಕುಮಚಹಳ್ಳಿ ಮಹೇಶ್, ಕುಮಾರಸ್ವಾಮಿ, ರವಿ ತಗಡೂರು, ಎಂ.ಸಿ.ಮಹೇಶ್, ಮಹೇಶ್ ಗಟ್ಟಿ, ಕೆಂಪರಾಜು, ಶಿವು ಅಂಗಡಿ ಗ್ರಾಮಸ್ಥರು ಭಾಗವಹಿಸಿದ್ದರು.
