ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಯು.ಎಂ.ಪ್ರಭುಸ್ವಾಮಿ

  • ಉಡಿಗಾಲ ಸರ್ಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ


ಚಾಮರಾಜನಗರ: ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮುಖಂಡ ಯು.ಎಂ.ಪ್ರಭುಸ್ವಾಮಿ ಹೇಳಿದರು.


ತಾಲೂಕಿನ ಉಡಿಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 80ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಹೋರಾಟವನ್ನು ಮಾಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಮೌಲ್ಯಗಳನ್ನು ರೂಡಿಸಿಕೊಂಡು ದೇಶದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಸಲಹೆ ನೀಡಿದರು.
ಶಾಲಾಭಿ ವೃದ್ಧಿ ಸಮಿತಿ ಅಧ್ಯಕ್ಷ ದೇವಣ್ಣ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಂಜುಂಡಸ್ವಮಿ, ಗುತ್ತಿಗೆದಾರ ಸಿದ್ದರಾಜು, ಎಸ್‌ಡಿಎಂಸಿ ಸದಸ್ಯರಾದ ಸ್ವಾಮಿ, ಮಾದೇಶ್, ಪ್ರಕಾಶ್, ಗುರುಸ್ವಾಮಿ, ಬಸವರಾಜು, ಮಹದೇವನಾಯಕ, ಮಾಲಾ, ಶಶಿಕಲಾ, ಮಹದೇವಮ್ಮ, ಶೋಭ, ಕುಮಾರ್. ಮಂಜುನಾಥ್, ಮುಖ್ಯಶಿಕ್ಷಕ ಎಂ.ಡಿ.ಮಹದೇವಯ್ಯ, ಶಿಕ್ಷಕರಾದ ಪ್ರಸಾದ್, ಚನ್ನಬಸವಣ್ಣ, ವೀಣಾ, ರಾಜೇಶ್ವರಿ ಪದ್ಮಾವತಿ, ವಿಜಯಲಕ್ಷ್ಮೀ ವೀಣಾ, ಪ್ರಿಯದರ್ಶಿನಿ, ಭಾಗ್ಯ, ಸಿಂಧು, ನಂಜುಂಡಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *