ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಜಿಲ್ಲಾ ಬಾಬು ಜಗಜೀವನ್ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ

ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೆ .ಎಚ್ .ಮುನಿಯಪ್ಪ ಅವರನ್ನು ಬೆಂಗಳೂರಿನಲ್ಲಿ ಚಾಮರಾಜನಗರ ಜಿಲ್ಲಾ ಬಾಬು ಜಗಜೀವನ್ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸಿದರು.

ಶೀಘ್ರದಲ್ಲೇ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬಾಬು ಜಗಜೀವನ್ ರಾಮ್ ಭವನದ ಕಾಮಗಾರಿಯನ್ನು ಮುಗಿಸಿಕೊಡಬೇಕು.
ಜಿಲ್ಲಾಡಳಿತ ಮುಂಭಾಗ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಪುತ್ಥಳಿ ನಿರ್ಮಾಣ ಮಾಡಿಕೊಡಬೇಕು ಸಚಿವರಲ್ಲಿ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಾಬು ಜಗಜೀವನ ರಾಮ್ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್ .ಹೆಚ್. ನಾಗರಾಜು, ಗೌರವ ಸಲಹೆಗಾರ ಅರಕಲವಾಡಿ ಜವರಯ್ಯ,ಗುತ್ತಿಗೆದಾರ ಕಾಗಲವಾಡಿ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಎಂ ಶಿವಕುಮಾರ್ ,ಸಹಕಾರ್ಯ ದರ್ಶಿ ಶಿವಕುಮಾರ್ ರಾಮಸಮುದ್ರ, ಜಿಲ್ಲಾ ಉಪಾಧ್ಯಕ್ಷರಾದ ಮೂಡಹಳ್ಳಿ ಮೂರ್ತಿ, ಚೆನ್ನಬಸವಯ್ಯ, ಬಿ.ಸಿ ಸುರೇಶ್, ಮುಖಂಡರಾದ ಆರ್. ಎನ್ .ಶಿವಣ್ಣ, ರಾಮಸಮುದ್ರ ಸುಂದರ, ಮೂಡಳ್ಳಿಶಂಕರ್, ಮಾಡಳ್ಳಿಮಹದೇವ ಇತರರು ಹಾಜರಿದ್ದರು

Leave a Reply

Your email address will not be published. Required fields are marked *