ವಿದ್ಯಾರ್ಥಿಗಳು ಕ್ರೀಡಾ ಚಟುವಟಿಗಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು : ಕುಲಪತಿ ಪ್ರೊ ಎಂ.ಆರ್.ಗಂಗಾಧರ್

ಚಾಮರಾಜನಗರ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ ಎಂ ಆರ್ ಗಂಗಾಧರ್ ತಿಳಿಸಿದರು.
ನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಚಾಮರಾಜನಗರ ವಿಶ್ವವಿದ್ಯಾಲಯ ವಾರ್ಷಿಕ ವಾರ್ಷಿಕ ಕ್ರೀಡಾಕೂಟದಲ್ಲಿ ಚಾಲನೆ ನೀಡಿ ಮಾತನಾಡಿ ಭಾರತ ದೇಶ ವಿಶ್ವದಲ್ಲಿ ಕ್ರೀಡೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಇಂದು ಮೆಚ್ಚುಗೆ ವ್ಯಕ್ತಪಡಿಸಿದವರು
ಇತ್ತೀಚಿಗೆ ಮೈಸೂರು ಜಿಲ್ಲೆಯ ಟಿ ನರಸೀಪುರ ಕುರುಬೂರು ಕೊಕ್ಕೋ ಆಟದಲ್ಲಿ ಚೈತ್ರ ಭಾಗವಹಿಸಿ ವಿಶ್ವ ಕಪ್ ಗೆದ್ದಿದ್ದಾರೆ ಆದ್ದರಿಂದ ಯುವ ವಿದ್ಯಾರ್ಥಿಗಳು ನೀವು ಸಹ ವಿದ್ಯಾಭ್ಯಾಸರ ಜೊತೆಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ ಸ್ಪೂರ್ತಿ ಸಿಗಲಿದೆ ಎಂದು ಹೇಳಿದವರು.

ಭಾರತದಲ್ಲಿ ದೇಶ ಬಲಿಷ್ಠವಾಗಿದೆ. ಆದ್ದರಿಂದ ನವ್ಯ ಭಾರತ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಚಾಮರಾಜನಗರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲ ಸಚಿವ ಕೆಎಂ ಮಹಾದೇವನ್ ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮಾಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಇದರ ಜೊತೆ. ಸಮಯ ಪ್ರಜ್ಞೆ ಜ್ಞಾನಶಕ್ತಿ ಅತಿ ಮುಖ್ಯ ವಿದ್ಯಾರ್ಥಿಗಳ ಪ್ರತಿಭೆಗಳು ಹೊರ ಚೆಲ್ಲಲು ಇಂತಹ ಸೂಕ್ತ ಕ್ರೀಡೆ ಕೂಟಗಳಲ್ಲಿ ಕಾರ್ಯಕ್ರಮ ಭಾಗವಹಿಸುವ ಅಭಿರುಚಿ ಬೆಳೆಸಿಕೊಳ್ಳಬೇಕು.
ಗುರು ಹಿರಿಯರು ಹಾಗೂ ಪೋಷಕರ ಮಾರ್ಗದರ್ಶನದಲ್ಲಿ ಹೆಚ್ಚಾಗಿ ಶಿಕ್ಷಣ ಕಲಿತರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದರು.

ಚಾ ವಿ ವಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಜಿಲ್ಲೆ ರಾಜ್ಯ ಹೊರ ರಾಜ್ಯ ದೇಶ ವಿದೇಶಗಳಲ್ಲಿ ವಿಜ್ಞಾನಿಗಳು ಆಗೋ ಜೊತೆಗೆ. ಉನ್ನತ ಮಠದ ಅಧಿಕಾರಿಗಳಾಗಿ ಸೇವೆ ಮಾಡುತ್ತಿದ್ದಾರೆ ತಿಳಿಸಿದರು.

ಚಾ ವಿ ವಿ ಕ್ರೀಡಾಕೂಟದ ಆಯೋಜಕ ಪಾಧ್ಯಾಪಕ ಮಹೇಶ್ ನಾಯಕ್. ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯ ಅಧ್ಯಕ್ಷ ಜಿ ಬಂಗಾರು. ಕ್ರೀಡಾಪಟು ಕಾರ್ತಿಕ್ ನಾಯಕ್. ಚಾ ವಿವಿ ಎಲ್ಲಾ ವಿಭಾಗದ ಮುಖ್ಯಸ್ಥರು. ಪ್ರೊಫೆಸರ್ ಗಳು ದೈಹಿಕ ನಿರ್ದೇಶಕರು. ಕ್ರೀಡಾ ವಿದ್ಯಾರ್ಥಿಗಳು ಹಾಜರಿದ್ದರು

Leave a Reply

Your email address will not be published. Required fields are marked *