- ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷ ಕಣ್ಣೂರು ವಿ ಗೋವಿಂದಾಚಾರಿ ಅಭಿಪ್ರಾಯ

ಮೈಸೂರಿನ ಹೃದಯ ಭಾಗದಲ್ಲಿರುವ ಶಿವರಾಂಪೇಟೆ ರಸ್ತೆಯ ಹಿಂದೆ ಇರುವ ಶ್ರೀ ಗಣಪತಿ ದೇವಸ್ಥಾನದ ಧ್ಯಾನಮಂದಿರದಲ್ಲಿ ಕಳೆದ ಶನಿವಾರ ಸರ್ವ ಸದಸ್ಯರ ಸಭೆ ಯಶಸ್ವಿಯಾಗಿ ನಡೆಯಿತು. ಈ ಸಭೆಗೆ 25ಕ್ಕೂ ಹೆಚ್ಚು ಸದಸ್ಯರು ಹಾಜರಾಗಿದ್ದರು. ಆಕಾಶವಾಣಿಯ ಸಮುದ್ಯತಾ ಕೇಳುಗ ಬಳಗದ ಉದ್ದೇಶ, ಮುಂದಿನ ವಾರ್ಷಿಕ ಕಾರ್ಯಕ್ರಮದ ಬಗ್ಗೆ, ಜೊತೆಗೆ ಸಂಘದ ಸದಸ್ಯರ ಚಟುವಟಿಕೆ ಇತ್ಯಾದಿ ವಿಷಯಗಳನ್ನ ಪ್ರಸ್ತಾಪ ಮಾಡಲಾಯಿತು.

ಇತ್ತೀಚಿಗೆ ತಾನೇ ನಮ್ಮನ್ನಗಲಿದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್ ಜಾನಕಿ ಅಮ್ಮನವರಿಗೆ ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನ ಅರ್ಪಿಸಿದ ನಂತರ ಕಾರ್ಯಕ್ರಮಕ್ಕೆ ಬಳಗದ ಹಿರಿಯ ಸದಸ್ಯರಾದ ಎಂ ಆರ್ ಶ್ರೀಕಂಠನ್ ರವರು ಪ್ರಾರ್ಥನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಸಭೆಗೆ ಬಂದವರನ್ನೆಲ್ಲಾ ರಮೇಶ್ ಪಿ ರಂಗಸಮುದ್ರ ಆತ್ಮೀಯವಾಗಿ ಸ್ವಾಗತಿಸಿದರು. ಅನೇಕ ಅಭಿಪ್ರಾಯವನ್ನ ಸಂಘದ ಬೆಳವಣಿಗೆಯ ನಿಟ್ಟಿನಲ್ಲಿ ಹಂಚಿಕೊಂಡರು. ಅದನ್ನೆಲ್ಲ ನಾವು ಕಾರ್ಯಗತ ಗೊಳಿಸಿದಾಗಲೇ ಒಂದು ಸಂಘ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ಈ ಸಭೆಯ ನಡುವೆ ಬಳಗದ ಸದಸ್ಯರಲ್ಲಿ ಒಬ್ಬರಾದ “ಮಿಕ್ಕೆರೆ ಶಿವಣ್ಣ” ದಂಪತಿಗಳನ್ನು ಸನ್ಮಾನಿಸಲಾಯಿತು.
ಅವರ ಸಾವಯವ ಕೃಷಿ, ಎರೆಹುಳು ಗೊಬ್ಬರ, ಸುಸ್ಥಿರ ಕೃಷಿ ಸಾಧನೆಗಾಗಿ ಇತ್ತೀಚಿಗೆ ತಾನೇ ರಾಷ್ಟ್ರಪ್ರಶಸ್ತಿ ಯನ್ನು ರಾಷ್ಟ್ರಪತಿಯವರಿಂದ ಸ್ವೀಕರಿಸಿದ್ದಾರೆ.
ನಂತರ ಹಾಜರಿದ್ದ ಪ್ರತಿ ಸದಸ್ಯರೂ ತಮ್ಮ ಅಭಿಪ್ರಾಯ, ಸಲಹೆ ಸೂಚನೆ ನೀಡಿದರು.
ಕಾರ್ಯದರ್ಶಿ ರಾಜೇಶ್ವರಿ ರವರು ಮಾತನಾಡಿ ಪ್ರಾರಂಭದಿಂದಲೂ ಕೂಡ ಸಂಘ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದೇ ರೀತಿ ಇನ್ನು ಮುಂದಿನ ದಿನಗಳಲ್ಲಿಯೂ ಕೂಡ ಸಕ್ರಿಯವಾಗಿ ಸರ್ವ ಸದಸ್ಯರು ಭಾಗವಹಿಸಲು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಣ್ಣೂರು ವಿ ಗೋವಿಂದಾಚಾರಿ ರವರು ಮಾತನಾಡಿ ಸಂಘದ ಬೆಳವಣಿಗೆಗೆ ಸದಸ್ಯರ ಭಾಗವಹಿಸುವಿಕೆ ಮುಖ್ಯ. ಆಕಾಶವಾಣಿಯ ಕಾರ್ಯಕ್ರಮಗಳು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರಿಗೂ ಮಾಹಿತಿದಾಯಕವಾಗಿರುತ್ತವೆ. ಆಕಾಶವಾಣಿಯ ಕಾರ್ಯಕ್ರಮಗಳನ್ನು ಸತತವಾಗಿ ಕೇಳಿದ್ದರಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಒಂದು ಬಳಗವನ್ನು ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ತ್ರೈ ಮಾಸಿಕ ಸಭೆ ಹಾಗೂ ವಾರ್ಷಿಕ ಕಾರ್ಯಕ್ರಮವನ್ನು ಮಾಡುತ್ತಿರುವುದರಿಂದ ಹೊಸದಾಗಿ ಸದಸ್ಯರ ಸೇರ್ಪಡೆಯ ಬಗ್ಗೆ ಕ್ರಮವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹೊಸದಾದ ಕಾರ್ಯಕಾರಿ ಮಂಡಳಿಯನ್ನ ಆಯ್ಕೆ ಮಾಡಲಾಯಿತು.
ಸುಧಾರಾಜ್ ಗೌರವಾಧ್ಯಕ್ಷರು, ಕಣ್ಣೂರು ವಿ ಗೋವಿಂದಾಚಾರಿ ಅಧ್ಯಕ್ಷರು, ಟಿ ಎನ್ ರಾಜೇಶ್ವರಿ ಕಾರ್ಯದರ್ಶಿ, ಹೆಚ್ ಎನ್ ವಿಶ್ವನಾಥ್ ಖಜಾಂಚಿ ಬೂಕನಕೆರೆ ವಿಜೇಂದ್ರ, ಉಪಾಧ್ಯಕ್ಷರು, , ಕಾಳಿಹುಂಡಿ ಶಿವಕುಮಾರ್ ಸಹ ಕಾರ್ಯದರ್ಶಿ, ಜಿ ಪಿ ಶ್ರೀನಿವಾಸ್ ಗೊಬ್ಬರಗಾಲ ಸಂಚಾಲಕರು. ಇನ್ನು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ವೀಣಾ ಶ್ರೀಕಾಂತ್, ಚಂದ್ರಕಲಾ, ರಮೇಶ್ ಪಿ ರಂಗಸಮುದ್ರ, ಪಾಲಹಳ್ಳಿ ರೇಡಿಯೋ ರಮೇಶ್, ಎಂ ನಾಗರತ್ನ ನಟೇಶ್, ಸುಕನ್ಯಾ, ಪ್ರಭಾ ವಿಜಯ್ ಕುಮಾರ್, ಕುದೇರು ಎಸ್ ಪರಶಿವಮೂರ್ತಿ, ಅಂಗಡಿ ಜಯರಾಮ್, ಶ್ರೀಕಂಠ ಮೂರ್ತಿ, ಮಿಕ್ಕೆರೆ ಶಿವಣ್ಣ. ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ವೀಣಾ ಶ್ರೀಕಾಂತ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
