- ಅಂತಾರಾಷ್ಟ್ರೀಯ ಮಟ್ಟದ ಗಿನ್ನಿಸ್ ರೆಕಾರ್ಡ್ ನಾನ್ ಸ್ಟಾಪ್ 50 ಮಿನಿಟ್ಸ್ ಸ್ಕೇಟಿಂಗ್ ಸ್ಪರ್ಧೆ
ಚಾಮರಾಜನಗರ: ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಿನ್ನಿಸ್ ರೆಕಾರ್ಡ್ ನಾನ್ ಸ್ಟಾಪ್ 50 ಮಿನಿಟ್ಸ್ ಸ್ಕೇಟಿಂಗ್ ಸ್ಪರ್ಧೆ ನಡೆಯಿತು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್, ಹೈದರಾಬಾದ್ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಔರಂಗಬಾದ್ ವತಿಯಿಂದ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗ್ರಿನ್ನಿಸ್ ರೆಕಾರ್ಡ್ ನಾನ್ ಸ್ಟಾಪ್ 50 మినిಟ್ಸ್ ಸ್ಕೇಟಿಂಗ್ ಸ್ಪರ್ಧೆ ಬಹಳ ಯಶಸ್ವಿಯಾಗಿ ನಡೆಯಿತು.
ಕ್ರೀಡಾ ಸಮಿತಿ ಸದಸ್ಯ ವಿ.ಶ್ರೀನಿವಾಸಪ್ರಸಾದ್ ಚಾಲನೆ ನೀಡಿ ಮಾತನಾಡಿ. ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್, ಹೈದರಾಬಾದ್ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಔರಂಗಬಾದ್ ನಿಂದ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಒಂದು ಗಿನ್ನಿಸ್ ರೆಕಾರ್ಡ್ ನಾನ್ ಸ್ಟಾಪ್ 50 ಮಿನಿಟ್ಸ್ ಸ್ಕೇಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದು ಬಹಳ ಸಂತೋಷ ಆಗುತ್ತಿದೆ. ನಮ್ಮ ಜಿಲ್ಲೆಯ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗುರುತಿಸಿ ಸಾಧನೆ ಮಾಡಲು ಒಂದು ವೇದಿಕೆ ಇದಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಸ್ಕೇಟಿಂಗ್ ಮಕ್ಕಳು ರಾಜ್ಯ ಅಂತರ್ ರಾಜ್ಯ ಮಟ್ಟದಲ್ಲಿ ಸಾಕಷ್ಟು ಕೂಡ ಪ್ರಥಮ ಸ್ಥಾನ ದ್ವಿತೀಯ ಸ್ಥಾನ, ತೃತೀಯ ಸ್ಥಾನ ಪಡೆದು ಅದ್ವಿತೀಯ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಗಿನ್ನಿಸ್ ದಾಖಲೆ ಸ್ಪರ್ಧೆಯಲ್ಲಿ,ಜಿಲ್ಲೆಯ 32 ಮಕ್ಕಳು ಭಾಗವಹಿಸಿರುವುದು ತುಂಬಾ ಖುಷಿ ತಂದಿದೆ ಮಕ್ಕಳು ಇದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಜಿಲ್ಲೆಯ ಮಕ್ಕಳ ಸಾಮಾರ್ಥ್ಯ, ಶಕ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಕೆಲಸಕ್ಕೆ ಒಂದು ವೇದಿಕೆಯನ್ನು ಔರಂಗಬಾದ್‌ನಲ್ಲಿ ರುವ ಅಸೋಸಿಯೇಷನ್ ಜಿಲ್ಲೆಗೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು. ಮಂಗಳೂರು, ಇಡೀ ರಾಜ್ಯಾದ್ಯಂತ ವಿಶ್ವದಾಖಲೆಗೆ ಮಕ್ಕಳು ಸಜ್ಜಾಗಿದ್ದಾರೆ. ಈ ಗಿನ್ನಿಸ್ ರೆಕಾರ್ಡ್‌ಗೆ ಜಿಲ್ಲೆಗೆ ಮಕ್ಕಳಿಗೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಸ್ಕೇಟಿಂಗ್ ಕೋಚ್ ಫುರ್ಖಾನ್ ಪಾಷ, ರೆಹನ್, ಅನ್ಸರ್ ಖಾನ್, ಸೈಯದ್ ಆರೀಫ್,
ಇರ್ಫಾನ್ ಅಹಮದ್ ಶರೀಫ್, ಮೊಹಮ್ಮದ್ ಅಲಿ, ಎಸ್.ಅಭಿಷೇಕ್. ಮಹಮ್ಮದ್ ಮುಜಾಮಿಲ್ ಪಾಷ ಹಾಜರಿದ್ದರು.
