ಡಾ.ಜಿ.ಪರಮೇಶ್ವರ ಸಿಎಂ ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಂಜಿನ ಮೆರವಣಿಗೆ

ಜಿ. ಪರಮೇಶ್ವರ ಅವರನ್ನು ಸಿಎಂ ಮಾಡುವ ಮೂಲಕ ಕಾಂಗ್ರೆಸ್ ಶಾಪವಿಮೋಚನೆ ಆಗಲಿ :
ವೆಂಕಟರಮಣಸ್ವಾಮಿ ಪಾಪು.
  ಚಾಮರಾಜನಗರ:  ಸಚಿವರಾದ  ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿ   ದಲಿತ ಸಂಘಟನೆ ಗಳ ಒಕ್ಕೂಟದಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
     ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಅವರ ನೇತೃತ್ವದಲ್ಲಿ
ನಗರದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯ ಹೆಬ್ಬಾಗಿಲುನಿಂದ ಭುವನೇಶ್ವರಿ ವೃತ್ತದ ವರಗೆ  ಪಂಜಿನ ಮೆರವಣಿಗೆ ನಡೆಸಿದರು.
   ನೇತೃತ್ವ ವಹಿಸಿದ್ದ ವೆಂಕಟರಮಣಸ್ವಾಮಿ ಮಾತನಾಡಿ, ಕಳೆದ 80 ವರ್ಷಗಳಿಂದ ದಲಿತರು ಕಾಂಗ್ರೆಸ್ ಗೆ ಮತ ಹಾಕಿಕೊಂಡು ಬಂದಿದ್ದಾರೆ.  ಕಳೆದ 8 ವರ್ಷಗಳ ಹಿಂದೆ ಪರಮೇಶ್ವರ ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶ ಇತ್ತು. ಪಕ್ಷದವರೇ ಅವರನ್ನು ಸೋಲಿಸಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು. ಅ ಶಾಪದಿಂದ ವಿಮೋಚನೆಯಾಗಬೇಕಾದರೆ ಕಾಂಗ್ರೆಸ್ ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಯಾಗಿ ಮಾಡಬೇಕು ಎಂದು ಒತ್ತಾಯಿಸಿದರು.
   ಮೆರವಣಿಗೆಯಲ್ಲಿ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರಬಣದ ಜಿಲ್ಲಾ ಸಂಚಾಲಕ
ಸಿ.ಎಂ.ಶಿವಣ್ಣ, ಸುರೇಶ್ ರಾಮಸಮುದ್ರ, ಪ್ರಕಾಶ್, ರಂಗಸ್ವಾಮಿ, ಸಿದ್ದರಾಜು, ಆಟೋ ಉಮೇಶ್, ಗೌರಿಶಂಕರ, ತಮ್ಮಯ್ಯ, ಪರಶಿವು, ಮಲ್ಲು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *