ಉಮ್ಮತ್ತೂರು ಇಂದುಶೇಖರ್ ಅವರಿಗೆ ಇಂಟರ್ ನ್ಯಾಷನಲ್ ಜಸ್ಟಿಸ್ ಅವಾರ್ಡ್ ಪ್ರದಾನ

ಚಾಮರಾಜನಗರ : ರಾಯಚೂರು ಬೆಳಕು ಸಂಸ್ಥೆ ಕೊಡಲ್ಪಡುವ  ಇಂಟರ್ ನ್ಯಾಷನಲ್ ಜಸ್ಟಿಸ್ ಅವಾರ್ಡ್ ಅನ್ನು ಇಂದು ಬಳ್ಳಾರಿಯಲ್ಲಿ  ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರಿಗೆ ನೀಡಿ ಗೌರವಿಸಲಾಯಿತು
ಬಳ್ಳಾರಿಯ ಜೋಳದ ರಾಶಿ ಸಿದ್ದನಗೌಡ ರಂಗ ಮಂದಿರದಲ್ಲಿ ನಡೆದ ಗಡಿನಾಡು ಸಮ್ಮೇಳನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ  ಪುರಸ್ಕೃತರಾದ ಡಾ. ಅಮರೇಶ್ ನುಗುಡೋಣಿ ಉಮ್ಮತ್ತೂರು ಇಂದುಶೇಖರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ವಕೀಲರ ಸಂಘದಲ್ಲಿ ನಾಲ್ಕು ಬಾರಿ ಅಧ್ಯಕ್ಷರಾಗಿ ನೂರಾರು ಕಾನೂನು ಅರಿವು ಕಾರ್ಯಕ್ರಮಗಳನ್ನು ನೀಡಿರುವ ಹಾಗೂ ವಕೀಲ ವೃತ್ತಿಯಲ್ಲಿನ ಸೇವೆ ಗುರುತಿಸಿ ಈ ಅವಾರ್ಡ್ ನೀಡಲಾಯಿತು.
ಸಮ್ಮೇಳನದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡಿ,ಡಾ. ಮಲ್ಲಿಕಾರ್ಜುನ ಹೀರೇಮಠ್,ಸಾಹಿತಿ ಡಾ. ಮುನಿರಾಜು, ಡಾ. ಎಸ್. ಎಸ್. ಪಾಟೀಲ್ ಬೆಳಕು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ,ಬಳ್ಳಾರಿ ಪತ್ರಕರ್ತರ ಅಧ್ಯಕ್ಷ ಎನ್.ವೀರಭದ್ರಗೌಡ,ಡಾ. ವಿಷ್ಣು ಎಂ. ಶಿಂದೆ, ಜನಪದ ಗಾಯಕ ಜ. ಸುರೇಶ್ ನಾಗ್ ಹಾಜರಿದ್ದರು.

Leave a Reply

Your email address will not be published. Required fields are marked *