ಐದು ಎಕರೆ ಭೂಮಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಉಪ್ಪಾರ ಮುಖಂಡರ ಮನವಿ

ಚಾಮರಾಜನಗರ: ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಯ್ಯನ ಸರಗೂರು ಮಠ ನಿರ್ಮಿಸಿ ಉಪ್ಪಾರ ಸಮುದಾಯ ಹಾಗೂ ಎಣ್ಣೆ ಮಜ್ಜನ ಸೇವಾಕರ್ತರಿಗೆ ಅನ್ನ ಸಂತರ್ಪಣೆ ಮಾಡಲು ಶ್ರೀ ಕ್ಷೇತ್ರದಲ್ಲಿ 5 ಎಕರೆ ಭೂಮಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಸಮುದಾಯದ ಮುಖಂಡರಿ0ದ ಮನವಿ ಸಲ್ಲಿಸಲಾಯಿತು.
ಶ್ರೀ ಮಹದೇಶ್ವರ ಸ್ವಾಮಿಯ ಎಣ್ಣೆ ಮಜ್ಜನ ಸೇವಾಕರ್ತರಾದ ಶ್ರೀ ಸಿದ್ದಪ್ಪಸ್ವಾಮಿ ಅವರ ನೇತೃತ್ವದಲ್ಲಿ ಉಪ್ಪಾರ ಮುಖಂಡರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ಶ್ರೀ ಮಹದೇಶ್ವರ ಬೆಟ್ಟದಲ್ಲಿ ಎಣ್ಣೆ ಮಜ್ಜನ ಸೇವಾ ಕರ್ತರಿಗೆ ಹಾಗೂ ಉಪ್ಪಾರ ಜನಾಂಗದವರಿಗೆ ಅಯ್ಯನ ಸರಗೂರು ಮಠ ನಿರ್ಮಿಸಿ ಅನ್ನ ಸಂತರ್ಪಣೆ ಮಾಡಲು ಶ್ರೀ ಕ್ಷೇತ್ರದಲ್ಲಿ 5 ಎಕರೆ ಭೂಮಿ ಮಂಜೂರು ಮಾಡಲು ಮನವಿ ಮಾಡಿಕೊಂಡರು.
ರಾಮವ್ವ ಮೂಗಪ್ಪ ಭಾವಚಿತ್ರಗಳನ್ನು ಅಳವಡಿಸುವಂತೆ ಮನವಿ: ದೀಪದ ಗಿರಿಯಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಎಣ್ಣೆ ಮಜ್ಜನ ಮಾಡಿದ ಶ್ರೀ ರಾಮವ್ವ ಮೂಗಪ್ಪ ರವರ ಭಾವಚಿತ್ರಗಳನ್ನು ಅಳವಡಿಸುವ ಮೂಲಕ ಉಪ್ಪಾರ ಸಮುದಾಯದ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸಲು ಸಹಾಯ ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗಡಿ ಯಜಮಾನರಾದ ಜಯಸ್ವಾಮಿ, ಮುಖಂಡರಾದ ಕಾವೇರಿಪುರದ ಮಹದೇವಶೆಟ್ಟಿ, ನಂಜನಗೂಡಿನ ಗೋವಿಂದಶೆಟ್ಟಿ, ಮಹದೇವಸ್ವಾಮಿ, ಬಂಗಾರಶೆಟ್ಟಿ, ಉಪ್ಪಾರ ಯುವ ಮುಖಂಡ ಸಿ.ಎಸ್.ನಾಗರಾಜ್, ಹರೀಶ್, ಪ್ರದೀಪ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *