- ದಿವಂಗತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ
- ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ, 268 ಮಂದಿ ತಪಾಸಣೆ
- ವರ್ತಕರ ಭವನದಿಂದ ರಾಮಸಮುದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿರವರಗೆ ರಸ್ತೆಯ 2 ಬದಿಗಳಲ್ಲಿ 65 ಗಿಡಗಳ ನೆಡುವ ಕಾರ್ಯಕ್ರಮ.
ಚಾಮರಾಜನಗರ: ಆರ್. ಧ್ರುವನಾರಾಯಣ ಅವರು ದೇಶಕಂಡ ಅತ್ಯಂತ ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದರು ಎಂದು ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಗುಣಗಾನ ಮಾಡಿದರು.
ನಗರದ ರೋಟರಿ ಭವನದಲ್ಲಿ ಧ್ರುವನಾರಾಯಣ್ ಅಭಿಮಾನಿಗಳ ಬಳಗ, ರೋಟರಿ ಸಂಸ್ಥೆ ವತಿಯಿಂದ ನಡೆದ ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣರವರ 65ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಹಾಗೂ 65 ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ, ಪುಷ್ಷಾರ್ಚನೆ ಮಾಡಿ ಮಾತನಾಡಿದರು.
ಧ್ರುವನಾರಾಯಣ್ ಅವರು ಅಜಾತಶತ್ರು ರಾಜಕಾರಣಿಯಾಗಿದ್ದರು. ಎರಡು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ, ಶಾಸಕರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಪಕ್ಷಾತೀತವಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದರು.
ಧ್ರುವನಾರಾಯಣ್ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಗಾಗಿ ಶ್ರಮಿಸಿದರು. ಅವರು ಮಾಡಿರುವ ಜನಪರ ಕಾರ್ಯಗಳು ಜೀವಂತವಾಗಿವೆ. ಅವರು ನಮಗೆ ಆದರ್ಶವಾಗಿದ್ದು,ಅವರ ಪಕ್ಷ ಸಂಘಟನೆ, ಶಿಸ್ತು ಪ್ರತಿಯೊಬ್ಬರಿಗೂ ಮಾದರಿ, ಅವರ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಸ್ಮರಣೀಯವಾಗಿದೆ ಎಂದರು.
ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌರ್ನರ್ ಡಾ.
ನಾಗಾರ್ಜುನ ಮಾತನಾಡಿ, ಧ್ರುವನಾರಾಯಣ್ ಅವರೊಬ್ಬ ದೂರದೃಷ್ಠಿ ರಾಜಕಾರಣಿಯಾಗಿದ್ದು, ಮೊದಲ ಬಾರಿ ಸಿಎಸ್‌ಆರ್ ಅನುದಾನದಲ್ಲಿ 2.2. ಕೋಟಿ ಬಿಡುಗಡೆ ಮಾಡಿ ಎಲ್ಲ ಶಾಲೆಗಳಲ್ಲೂ ಶೌಚಾಲಯ ನಿರ್ಮಿಸಿಕೊಡುವ ಕೆಲಸ ಮಾಡಿದರು. ಅವರ ಹುಟ್ಟುಹಬ್ಬದಲ್ಲಿ ಅವರ ಅಭಿಮಾನಿ ಬಳಗ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.
ಧ್ರುವನಾರಾಯಣ ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಧ್ರುವನಾರಾಯಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳ ಬಳಗದಿಂದ ಕಳೆದ 18 ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬರಲಾಗಿದ್ದು ಅದೇ ರೀತಿ ಇಂದು ಕೂಡ ಆರೋಗ್ಯ ತಪಾಸಣಾ ಶಿಬಿರ, ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ನಗರದ ವರ್ತಕರ ಭವನದಿಂದ ರಾಮಸಮುದ್ರದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಯವರಗೆ ರಸ್ತೆ, 2 ಬದಿಯಲ್ಲೂ 65 ಗಿಡ ನಡೆಯುವ ಕಾರ್ಯಕ್ರಮ. ಅಲ್ಲದೆ ರೋಟರಿ ಸಂಸ್ಥೆ ನಡೆಸುತ್ತಿರುವ ಡಯಾಲಿಸಸ್ ಕೇಂದ್ರಕ್ಕೆ ಧ್ರುವನಾರಾಯಣ್ ನೆನಪಿನಲ್ಲಿ ಒಂದು ದಿನದ ವೆಚ್ಚವನ್ನು ನೀಡಲಾಗಿದೆ ಎಂದರು.
ಧ್ರುವನಾರಾಯಣ್ ರವರ ಅಭಿಮಾನಿಗಳ ಬಳಗ, ರೋಟರಿ ಸಂಸ್ಥೆ, ಈಶ್ವರಿ ಟ್ರಸ್ಟ್ ವತಿಯಿಂದ ವರ್ತಕರ ಭವನದಿಂದ ರಾಮಸಮುದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿರವರಗೆ ರಸ್ತೆಯ 2 ಬದಿಗಳಲ್ಲಿ 65 ಗಿಡಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರೋಟರಿ ಸಂಸ್ಥೆ ನಡೆಸುತ್ತಿರುವ ಡಯಾಲಿಸಸ್ ಕೇಂದ್ರಕ್ಕೆ ಧ್ರುವನಾರಾಯಣ್ ನೆನಪಿನಲ್ಲಿ ಒಂದು ದಿನದ ವೆಚ್ಚವನ್ನು ನೀಡಲಾಯಿತು, ಅನೀಮಿಯಾ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣೆ ಮಾಡಲಾಯಿತು.268 ಮಂದಿ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಆರ್. ಧ್ರುವನಾರಾಯಣ ಅಭಿಮಾನಿ ಬಳಗ ಅಧ್ಯಕ್ಷ ಕಾಗಲವಾಡಿ ಚಂದ್ರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿ.ಪಂ.ಮಾಜಿ ಸದಸ್ಯ ಸದಾಶಿವಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ,ಮಾಜಿ ಪದ್ಮಪುರಷೋತ್ತಮ, ಬಿ.ಕೆ.ರವಿಕುಮಾರ್, ಪರಿಸರ ಪ್ರೇಮಿ ವೆಂಕಟೇಶ್, ಹೊಮ್ಮದ ನಾಗನಾಯಕ, ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ಡಾ.ನಾಗಾರ್ಜುನ, ತಾ.ಪಂ.ಮಾಜಿ ಸದಸ್ಯ ಪ್ರಕಾಶ್, ಕುಮಾರ್ ನಾಯಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು ಚೂಡಾ ಮಾಜಿ ಅಧ್ಯಕ್ಷ, ಸುಹೇಲ್ ,
ಮಹದೇವಯ್ಯ, ನಲ್ಲೂರು ಮಹಾದೇವಸ್ವಾಮಿ,
, ಜಿ.ರಾಚಪ್ಪ ಮಹಾದೇವಸ್ವಾಮಿ, ಮಹದೇವಶೆಟ್ಟಿ, ಎಪಿಎಂಸಿ ಸದಸ್ಯರಾದ ಆಲೂರು ಪ್ರದೀಪ್, ಸೋಮೇಶ್, ಮೋಹನ್ ನಗು, ಅಕ್ಷಯ್,ನಾಗೇಂದ್ರ, ಪುರುಷೋತ್ತಮ, ಶಿವಸ್ವಾಮಿ, ಬ್ಯಾಡಮೂಡ್ಲು ನಾಗರಾಜು, ಮರಿಸ್ವಾಮಿ, ಸೋಮಣ್ಣ, ಇತರರು ಹಾಜರಿದ್ದರು.