- ಅಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ
- ಕೆರೆಗಳಿಗೆ ನೀರು ತುಂಬಿಸುವ ತನಕ ಅಹೋರಾತ್ರಿ ಧರಣಿ ಕೈ ಬಿಡಲ್ಲ ರೈತರು.
ಚಾಮರಾಜನಗರ : ಮೂರನೆಯ ಹಂತದ ಕೆರಗಳಿಗೆ ಕಳೆದ ಮೂರು ವರ್ಷಗಳಿಂದಲ್ಲೂ ನೀರು ತುಂಬಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಮೂರನೆಯ ಹಂತದ ಅಚ್ಚಕಟ್ಟು ಗ್ರಾಮದ ರೈತರು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್‌ಹೌಸ್ ಮುಂಭಾಗದಲ್ಲಿ ನಡೆಸುತ್ತಿರುವ
ಅಹೋರಾತ್ರಿ ಧರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀ ರೂಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಮೂರನೇ ಹಂತದ ಕೆರೆಗಳಿಗೆ ನೀರು ಭರವಸೆ ನೀಡಿದರು. ವಾರದೊಳಗೆ ನೀರಾವರಿ ನಿಗಮದ ಮುಖ್ಯ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಸಭೆ ಕರೆಯಲಾಗುವುದು. ನೀವೆಲ್ಲರೂ ಸಭೆ ಬನ್ನಿ ಸಮಸ್ಯೆಗಳ ಬಗ್ಗೆ ಚರ್ಚಿ ಪರಿಹರಿಸೋಣ ಎಂದರು.
ಬಿಜೆಪಿ ಬೆಂಬಲ: ಅಹೋರಾತ್ರಿಧರಣಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ನಟರಾಜು ಇತರರು ಭಾಗವಹಿಸಿ ಬೆಂಬಲ ಸೂಚಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಮನೋಜ್ ಪಟೇಲ್ ಮಾತನಾಡಿ, ಹುತ್ತೂರು ಪಂಪ್ ಹೌಸ್ ನಿಂದ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ಹುತ್ತೂರು ಪಂಪ್ ಹೌಸ್ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ ಸೂಚಿಸಿಸಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಮೂರನೇ ಹಂತ ಕೆರೆಗಳಿಗೆ ನೀರು ಹರಿಸದೆ ನಾಲ್ಕನೆಯ ಹಂತದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ. ಇದು ಎಷ್ಟರ ಮಟ್ಟಿಗೆ ಹರಿ ಎಂದು ಪ್ರಶ್ನಿಸಿದರು. ಇದು ಸ್ಥಳೀಯ ಶಾಸಕರಿಗೆ ಇಚ್ಛೆ ಇಲ್ಲವೋ ಅಥವಾ ಗುಂಡ್ಲುಪೇಟೆ ಶಾಸಕರ ಪ್ರಭಾವ ಹೆಚ್ಚಾಗುತ್ತಿದಿಯೋ ಗೊತ್ತಿಲ್ಲ. ಕಾನೂನು ಪ್ರಕಾರ 1ನೇ ಹಂತ, 2ನೇ ಹಂತ, 3ನೇ ಹಂತ ಪ್ರಕಾರವೇ ಕರೆಗಳಿಗೆ ನೀರು ತುಂಬಿಸಲಿ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿ, ಹುತ್ತೂರು ಪಂಪ್‌ಹೌಸ್‌ನಿಂದ ಕೇವಲ ಮೂರನೇ ಹಂತದಲ್ಲಿ ಒಂದೇ ಒಂದು ಬಾರಿ ನೀರು ತುಂಬಿಸುವ ಕೆಲಸ ಮಾಡಿದರೆ ಅದನ್ನು ಬಿಟ್ಟರೆ ನೀರು ತುಂಬಿಸಿಲ್ಲ. ಒಂದುನೇ ಹಂತ, ಎರಡನೇ ಹಂತ, ಮೂರನೆಯ ಹಂತ ಬಿಟ್ಟು ಸ್ವಾರ್ಥ, ರಾಜಕಾರಣದಿಂದ 4ನೇ ಹಂತಕ್ಕೆ ನೀರು ಬಿಟ್ಟಿರುವುದು ರೈತ ಅಹೋರಾತ್ರಿ ಹೋರಾಟಕ್ಕೆ ಕಾರಣವಾಗಿದೆ. ಬರಗಾಲ ಕಾರಣದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಸಂದರ್ಭದಲ್ಲಿ 900, 100 ಅಡಿಗೆ ಅಂತರ್ಜಲ ಕುಸಿದಿದೆ. ಇದೇ ರೀತಿ ಆದರೆ ಜನ, ಜಾನುವಾರುಗಳು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ನೀರು ಬಿಡುವ ಭರವಸೆ ನೀಡಿದ್ದಾರೆ. ಅವರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ ಎಂದರು.
ಕ್ಷೇತ್ರದ ಶಾಸಕರು ಮಂತ್ರಿಗಿರಿಗಾಗಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಭಾಗದಲ್ಲಿ ರೈತರು ನೀರು ಇಲ್ಲದೆ… ತುಂಬಾ ತೊಂದರೆಯಲ್ಲಿದ್ದಾರೆ, ರೈತರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾವು… ದಯಾಮಾಡಿ ನಿಮಗೆ ವೋಟ್ ಹಾಕಿದ ತಪ್ಪಿಗಾಗಿ ಕೆರೆಗಳಿಗೆ ನೀರು ತುಂಬಿಸಿ ರೈತರ ಹಿತಕಾಪಾಡುವಂತೆ ಮನವಿ ಮಾಡಿದರು.
ರೈತ ಮೋಹನ್ ರಾಜ್ ಮಾತನಾಡಿ, ಆಲಂಬೂರು ಏತ ಕುಡಿಯುವ ನೀರು ಯೋಜನೆಯಲ್ಲಿ ಮೂರನೆ ಹಂತದ ಕೊನೆಯ ಕೆರೆ ಅಮಚವಾಡಿ ಕೆರೆ. ಅಮಚವಾಡಿ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದ್ದು, 8-10 ಸಾವಿರ ಜಾನುವಾರುಗಳಿವೆ. ಮೂರನೇಯ ಹಂತ ಅಚ್ಚಕಟ್ಟು ಪ್ರದೇಶದಲ್ಲಿ ಹುಮಾರು 40 ಸಾವಿರ ಜನಸಂಖ್ಯೆ ಇದ್ದು ಸುಮಾರು 25 ಸಾವಿರ ಜಾನುವಾರು ಇದೆ. ಪ್ರತಿವರ್ಷವೂ ಅಧಿಕಾರಿಗಳು ಜನಪ್ರತಿನಿಧಿಗಳ ಒತ ಡಕ್ಕೆ ಮಣಿದು ಯಾವುದನ್ನು ಪರಿಪೂರ್ಣ ಮಾಡಿದೆ 1ನೇ ಹಂತ ಅಥವಾ 3ನೇ ಹಂತಕ್ಕೆ ವಾಪನ್ ನೀರು ಬಿಡುವ ಕೆಲಸ ಮಾಡುತಿದ್ದಾರೆ. ಇದು ದಯಮಾಡಿ ಯಾವ ಕಾರಣಕ್ಕೂ ಆಗಬಾರದು. ಜಿಲ್ಲಾಡಳಿತ ಆಲಂಬೂರಿಯಿಂದ ಯಾವುದೇ ಅಡತಡೆ ಇಲ್ಲದೆ ಹುತ್ತೂರು ಪಂಪ್‌ಹೌನ್‌ಗೆ ನೀರು ಶೇಖರಣೆ ಮಾಡಿ ಅಮಚವಾಡಿ ಕೆರೆ ತುಂಬಿಸಬೇಕು. ಎಣ್ಣೆಹೊಳೆ ಕೆರೆಭರ್ತಿ ಮಾಡಿ ಕೋಡಿ ಹರಿಸಬೇಕು. ಕೆರೆಗಳಿಗೆ ನೀರು ತುಂಬಿಸುವಲ್ಲಿ ವಿಫಲರಾಗಿರುವ ಅಧಿಕಾರಗಳನ್ನು ವರ್ಗಾವಣೆ ಮಾಡಿ ಸಮರ್ಥ, ಜಬಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ನೀರು ಬಿಡುವ ತನಕ ಅಹೋರಾತ್ರಿ ಮುಂದುವರಿಯುತ್ತದೆ : ನಮ್ಮ ಕೆರೆಗಳಿಗೆ ನೀರು ತುಂಬಿಸುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ.