ಸಂವಿಧಾನದ ಪ್ರಭಾವದಿಂದ ಅಭಿವೃದ್ಧಿ ಪಥದತ್ತ ಭಾರತ ದೇಶ : ಮಂಜುನಾಥ ಪ್ರಸನ್ನ

ಚಾಮರಾಜನಗರ: ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಭಾವದಿಂದ ಭಾರತದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ನಿವೃತ್ತ ಡಿಡಿಪಿಯು ಮಂಜುನಾಥ ಪ್ರಸನ್ನ ತಿಳಿಸಿದರು.
ತಾಲ್ಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಂಸ್ಕøತಿ ಇಲಾಖೆ, ಬೆಂಗಳೂರು, ಜಿಲ್ಲಾ ಜನಹಿತಾಶಕ್ತಿ ಹೋರಾಟ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಜ್ಞಾನಿಯಾದ ಅಂಬೇಡ್ಕರ್ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿಗಳನ್ನು ಪಡೆದು ಅಧ್ಯಯನಶೀಲರಾಗಿ ಹಾಗೂ ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನದ ಅಂಶಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಸರಿಹೊಂದುವ ಉತ್ತಮ ಸಂವಿಧಾನವನ್ನು ರಚಿಸಿ ಸರ್ವರು ಸಮಭಾವದಿಂದ ಅಭಿವೃದ್ಧಿಯ ಕಡೆಗೆ ಸಾಗಲು ಅವಕಾಶ ನೀಡಿದ್ದಾರೆ ಎಂದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಸಮಾಜಸೇವಕ ಹೊನ್ನಹಳ್ಳಿ ವೃಷಭೇಂದ್ರಪ್ಪ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿ ಶ್ರೇಷ್ಠವಾದದ್ದು. ಭಾರತದ ಭಾμÉ ಧರ್ಮ, ಸಂಸ್ಕೃತಿ, ಪರಂಪರೆ ವಿವಿಧತೆಯಲ್ಲಿ ಏಕತೆಯ ಭಾವವನ್ನು ಮೂಡಿಸಿ ರೂಪಿಸಿದ ಮಹಾ ಸಂವಿಧಾನ ಎಂದರು.
ಇತಿಹಾಸ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತವನ್ನು ಬ್ರಿಟಿಷರು ಆಳ್ವಿಕೆ ನಡೆಸಿದ ಸಂದರ್ಭದಲ್ಲಿಯೇ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ದಿಕ್ಕಿನಲ್ಲಿ ಹಲವಾರು ಕಾನೂನುಗಳನ್ನು ರೂಪಿಸುತ್ತಾ ಅಂತಿಮವಾಗಿ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು.
ಮೀಸಲಾತಿ, ಮಹಿಳಾ ಸಬಲೀಕರಣ, ಕಾರ್ಮಿಕರ ಏಳಿಗೆ,ದೇಶ ವಿದೇಶಗಳ ಸೌಹಾರ್ದತೆ, ಭಾರತದ ಸಮಗ್ರ ಭಾವೈಕ್ಯತೆ, ಸಂಸ್ಕೃತಿ ಪರಂಪರೆಗಳ ಸರ್ವ ದೃಷ್ಟಿಕೋನದ ಮೂಲಕ ರೂಪಿಸಿದ ಸಂವಿಧಾನ ಭಾರತದ ಪ್ರಗತಿಗೆ ಪೂರಕವಾದ ಸಂವಿಧಾನವಾಗಿದೆ ಎಂದರು.
ಜನ ಹಿತಾಸಕ್ತಿ ಹೋರಾಟ ವೇದಿಕೆ ಅಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿಧಾನದ ಬಗ್ಗೆ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲಿಉಪನ್ಯಾಸಕರಾದ ಶಿವರಾಮ್, ಬಸವಣ್ಣ, ್ಲ ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಕಾಡಹಳ್ಳಿ ನಾಗರಾಜು, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *