ಸಾಲಿಗ್ರಾಮದಲ್ಲಿ ಡಾ.ಅಖಿಲೇಶ್ ಎಂ.ಗೌಡ ಅವರ 31ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ಪ್ರತಿಯೊಬ್ಬರಿಗೂ ಹುಟ್ಟು ಆಕಸ್ಮಿಕ, ಸಾವು ಖಚಿತವಾದದು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಅವರು ಸಾಲಿಗ್ರಾಮ ಪಟ್ಟಣದಲ್ಲಿ ಡಾ.ಅಖಿಲೇಶ್ ಎಂ.ಗೌಡ ಅವರ 31ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರ್ವರೂ ತಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಬೇರೆಯವರ ನೋವುಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಡಾ.ಅಖಿಲೇಶ್ ಎಂ.ಗೌಡ ಅವರ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಮಾಡಿ ಅದರ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ಎಲ್ಲರೂ ಸೇರಿ ಮಾಡೋಣ ಎಂದರು.

ಪಟ್ಟಣದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಪಕ್ಕದ ಜಾಗವನ್ನು ಸ್ವಚ್ಛತೆ ಮಾಡಿಸಿ ಸೋಲಾರ್ ದೀಪವನ್ನು ಅಳವಡಿಸಿ ಸಾರ್ವಜನಿಕರಿಗೆ ಹಾಗೂ ಭಕ್ತರುಗಳಿಗೆ ಅನುಕೂಲವಾಗುವಂತೆ ಕೇಂದ್ರ ಸಚಿವ
ಎಚ್.ಡಿ.ಕುಮಾರಸ್ವಾಮಿ ಅವರ ಅನುದಾನದಲ್ಲಿ ಸುಮಾರು 20 ಲಕ್ಷ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವೈದ್ಯಕೀಯ ಪದವಿಗೆ ಉಚಿತ ಪ್ರವೇಶಾತಿ ಪಡೆದ ಮಾನ್ಸಿ ಪಿ.ಶೆಟ್ಟಿ, ಡಿಂಪಲ್ ಕೆ.ಗೌಡ, ಮನೋಜ್ ಕೆ.ಗೌಡ, ಅವಿನಾಶ್, ಎಸ್.ಆರ್.ಯಮುನ, ಮೋಕ್ಷಿತಗೌಡ, ಪಶು ವೈದ್ಯಕೀಯ ಪದವಿಗೆ ಉಚಿತ ಪ್ರವೇಶಾತಿ ಪಡೆದ ಕೆ.ಶಾಲಿನಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಎನ್.ಪಿ.ನಿತ್ಯಶ್ರೀ, ಬಿ.ಎಸ್.ಮಾನ್ಯ, ಕೀರ್ತನ, ಸಹನ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಯಶಶ್ರೀ ಜೈನ್ ಅವರುಗಳಿಗೆ ಪ್ರೋತ್ಸಾಹ ಧನದೊಂದಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಮೂಳೆ ತಜ್ಞ ವೈದ್ಯ ಡಾ.ಸಾ.ರಾ.ಧನುಷ್ ಹಾಗೂ ಇನ್ನಿತರ ತಜ್ಞ ವೈದ್ಯರುಗಳ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆಯನ್ನು ನಡೆಸಿ ಉಚಿತ ಕನ್ನಡಕಗಳನ್ನು ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಾ.ರಾ.ಸ್ನೇಹ ಬಳಗದ ವತಿಯಿಂದ
ಡಾ.ಅಖಿಲೇಶ್ ಎಂ.ಗೌಡ ಅವರ ನೆನಪಿಗಾಗಿ ಮುಕ್ತಿ ರಥವನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮೈಸೂರಿನ ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಡಾ.ಅಖಿಲೇಶ್ ಎಂ.ಗೌಡ ಅವರ ತಂದೆ ಎಂ.ಡಿ.ಮಂಜುನಾಥ್, ತಾಯಿ ರೇಣುಕಾ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಕಸಾಪ ಅಧ್ಯಕ್ಷ
ಎಸ್.ಕೆ.ಮಧುಚಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ನಿವೃತ್ತ ಉಪನ್ಯಾಸಕ ಎಸ್.ಆರ್.ರಾಮೇಗೌಡ, ಜಿ.ಪಂ. ಮಾಜಿ ಸದಸ್ಯ ಎಂ.ಟಿ.ಕುಮಾರ್, ಮುಖಂಡರಾದ ಅನಿತಾ ಸಾ.ರಾ.ಮಹೇಶ್, ಸುನಿತಾ ಸಾ.ರಾ.ನಂದೀಶ್, ಗೋವಿಂದೇಗೌಡ, ಎಸ್.ಪಿ.ಆನಂದ,
ಎಸ್.ಆರ್.ರವೀಶ್, ಸಾ.ರಾ.ಗುರುಪ್ರಸಾದ್, ಅಪ್ಪುಶ್ರೀನಿವಾಸ್, ಪೂರ್ಣಚಂದ್ರಗೌಡ, ಮಟನ್ ಮಹದೇವ್, ದಡದಹಳ್ಳಿನಟರಾಜ್, ಸಿ.ಬಿ.ಲೋಕೇಶ್, ಕಗ್ಗೆರೆಕುಚೇಲ, ಹೆಚ್.ಎನ್.ರಮೇಶ್, ಎಸ್.ಆರ್.ದಿನೇಶ್, ಎಲ್.ಐ.ಸಿ. ನಿಂಗಪ್ಪ, ಸುಧಾರೇವಣ್ಣ,
ಎಸ್.ಆರ್.ಪ್ರಕಾಶ್, ಲಾಲು ಸಾಹೇಬ್, ಪಾಪಣ್ಣ,
ಎಸ್.ಆರ್.ನಾಗೇಶ್,
ಎಸ್.ಬಿ.ಅಶೋಕ್,
ಸಾ.ರಾ.ಸತೀಶ್, ರಘು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *