ಅಶೋಕಪುರಂ ಗ್ರಂಥಾಲಯದಲ್ಲಿ ವಿಶ್ವಪುಸ್ತಕ ದಿನಾಚರಣೆ

ಮೈಸೂರಿನ ಅಶೋಕಪುರಂ ಗ್ರಂಥಾಲಯದಲ್ಲಿ ಈಚೆಗೆ ವಿಶ್ವಪುಸ್ತಕ ದಿನಾಚರಣೆಯನ್ನು ಆಚರಿಸಲಾಯಿತು. ಪದವೀಧರರ ಸಂಘದ ಮಾಜಿ ಅಧ್ಯಕ್ಷರಾದ ಶಿವನಾಗು ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕು. ರೀಟಾ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಗರದ ಹಿಂದೂಸ್ಥಾನ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪರಮೇಶ ಕೆ. ಉತ್ತನಹಳ್ಳಿ ಅವರು ಪುಸ್ತಕದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ರಾಜಶೇಖರ್ ಮತ್ತು ಶಿವಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಾಲಯದ ಸಿಬ್ಬಂದಿಯವರಾದ ಪಿ. ಜಯಮ್ಮ ಅವರು ಸ್ವಾಗತಿಸಿದರು. ಚಂದನ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ಶಿಕ್ಷಕರಾದ ಅಭಿರಾಜ್ ಅವರು ವಂದನಾರ್ಪಣೆ ಮಾಡುವುದರ ಮೂಲಕ ಮುಕ್ತಾಯವಾಯಿತು.

Leave a Reply

Your email address will not be published. Required fields are marked *