- ಒಳಮೀಸಲಾತಿ ಪರಿಶಿಷ್ಟ ಜಾತಿಗಳಿಗೆ ಸಮಾನ ಹಂಚಿಕೆ : ಹೆಚ್.ಸಿ.ಮಹದೇವಪ್ಪಗೆ ಅಭಿನಂದನೆ
ಚಾಮರಾಜನಗರ: ಒಳಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಸಮಾನ ಹಂಚಿಕೆ ಮಾಡುವಲ್ಲಿ ಯಶ್ವಸಿಯಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ವತಿಯಿಂದ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು ಎಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಅಸಮಾನತೆ ಅನ್ಯಾಯಗಳನ್ನು ನಿವಾರಿಸಿ ಸರ್ವರಲ್ಲೂ ಸಮಾನತೆ ಸಾಧಿಸಲು ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿ ಎಂಬುದು ಪ್ರಾತಿನಿಧ್ಯ ಎಂದು ವ್ಯಾಖ್ಯಾನಿಸಿದ್ದರು. ಅದರಂತೆ ಮಹದೇವಪ್ಪ ಅವರು ಅಂಬೇಡ್ಕರ್ ಅವರ ಈ ತತ್ವದಂತೆ ಒಳ ಮೀಸಲಾತಿಯಲ್ಲೂ ಸರ್ವ ಪರಿಶಿಷ್ಟ ಜಾತಿಗಳ ಹಿತ ಕಾಯುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದರು.
ಎಸ್.ಸಿ101 ಜಾತಿಗಳು ಅಂಬೇಡ್ಕರರು ಕಲ್ಪಿಸಿದ ಮೀಸಲಾತಿಗೆ ಅರ್ಹರು. ಆದರೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ಸಾಧಕ ಬಾದಕಗಳನ್ನು ಸರಿದೂಗಿಸಿ ಎಡಗೈ-ಬಲಗೈ-ಅಲೆಮಾರಿ ಮತ್ತು ಇತರೆ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶವನ್ನು ಕಲ್ಪಿಸುವಲ್ಲಿ ಸರ್ಕಾರವು ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಇದರಲ್ಲಿ ಡಾ.ಮಹದೇವಪ್ಪ ಅವರ ಪಾತ್ರ ಮತ್ತು ಕೊಡುಗೆ ಮಹತ್ವದ್ದಾಗಿದೆ ಎಂದರು.
ಎಸ್.ಸಿ ಸಮುದಾಯಗಳ ಒಳ ಮೀಸಲಾತಿ ವಿಷಯ ಎದುರಾದಾಗ ಡಾ.ಹೆಚ್.ಸಿ.ಮಹದೇವಪ್ಪ ನಡೆದುಕೊಂಡ ನಡೆ, ವಿನಯ, ತಾಳ್ಮೆ, ಸಹನೆ ಮತ್ತು ಎಸ್.ಸಿ ಗಳ ವಿಷಯದಲ್ಲಿ ಅವರ ಬದ್ಧತೆ ಐತಿಹಾಸಿಕ ನಡೆಯಾಗಿದೆ. ಸರ್ಕಾರದಲ್ಲಿ ಸಚಿವರಾದವರಿಗೆ ಎಲ್ಲಾ ಪ್ರಜೆಗಳು ಸಮಾನರು ಹಾಗೆ ಎಲ್ಲಾ ಎಸ್.ಸಿ ಗಳಿಗೂ ಸಮಾನ ನ್ಯಾಯ ಕಲ್ಪಿಸಿಸುವ ಹೊಣೆಗಾರಿಕೆ-ಜವಾಬ್ದಾರಿಯನ್ನು ಡಾ.ಹೆಚ್.ಸಿ.ಮಹದೇವಪ್ಪ
‘ಸಮರ್ಥವಾಗಿ ನಿಭಾಯಿಸಿದ್ದಾರೆ ಅದಕ್ಕಾಗಿ ಅವರು ಅಭಿನಂದನಾರ್ಹರು ಎಂದರು.
ಈಗ ಜಾರಿಗೊಳಿಸಿರುವ ಒಳಮೀಸಲಾತಿ ಸೂತ್ರದಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. 1-2ಹುದ್ದೆಗಳಿದ್ದಾಗ ಎಸ್.ಸಿ ಸಾಮಾನ್ಯ ಎಂದು ಪರಿಗಣಿಸುವ ನಿಯಮ ರೂಪಿಸಲಾಗಿದೆ ಅಂದರೆ ಅದಕ್ಕೆ ಒಳಮೀಸಲಾತಿ ಅನ್ವಯಿಸುವುದಿಲ್ಲ.
ವಿಶೇಷವಾಗಿ ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗುಂಪುಗಳಿಗೆ ಇದ್ದ ಬಹುದೊಡ್ಡ ಆತಂಕ ರೋಸ್ಟರ್ ಬಿಂದು ಸಮಸ್ಯೆ. ಇದನ್ನು ಎಸ್.ಸಿ ಸಾಮಾನ್ಯ ಎಂಬುದಾಗಿ ಪರಿವರ್ತಿಸುವ ಮೂಲಕ ಬಗೆಹರಿಸುವಲ್ಲಿ ಡಾ.ಹೆಚ್.ಸಿ.ಮಹದೇವಪ್ಪ ಯಶಸ್ವಿಯಾಗಿದ್ದಾರೆ. ಆದರೆ ಅನಗತ್ಯವಾಗಿ ಎಡಗೈ-ಬಲಗೈ ಸಮುದಾಯ-ಮುಖಂಡರು ಡಾ.ಹೆಚ್.ಸಿ.ಮಹದೇವಪ್ಪ ರವರನ್ನು ಟೀಕೆಗೆ ಗುರಿಯಾಗಿಸುತ್ತಿದ್ದಿದ್ದು ವ್ಯರ್ಥ ಪ್ರಲಾಪ ಎಂದ ವಿಷಾಧಿಸುವಂತಾಯಿತು.
ಸಮಾಜ ಕಲ್ಯಾಣ ಸಚಿವರಿಗೂ ಸರ್ಕಾರಕ್ಕೂ ಸಾಮೂಹಿಕವಾದ ಮತ್ತು ಸಮುದಾಯಗಳ ಹಿತಾಸಕ್ತಿಯ ಹೊಣೆಗಾರಿಕೆ ಇದ್ದೇಇದೆ. ಇದನ್ನು ಯಾವುದೇ ಸಮುದಾಯಗಳು ಅರ್ಥೈಸಿಕೊಳ್ಳಬೇಕಾಗುತ್ತದೆ. ಸರ್ಕಾರ ಅಥವಾ
ಸಚಿವರು ಏಕ ಪಕ್ಷಿಯವಾಗಿ ಯಾವ ನಿರ್ಧಾರವನ್ನು ಮಾಡಲಾಗುವುದಿಲ್ಲವೆಂಬ ಪ್ರಜ್ಞೆ ಸಮುದಾಯಗಳಿಗೆ ಇರಬೇಕು. ಅದರಂತೆ ಡಾ.ಹೆಚ್.ಸಿ.ಮಹದೇವಪ್ಪ ನಡೆದುಕೊಂಡಿದ್ದಾರೆ ಹೊರತು ಅವರು ಯಾರೊಬ್ಬ ವಿರೋಧಿಗಳಲ್ಲ, ಪರಿಶಿಷ್ಟ ಜಾತಿಗಳ ಹಿತ ಕಾಯುವಲ್ಲಿ ಸೋತಿರುವುದಿಲ್ಲ. ಅವರ ಬದ್ಧತೆಯನ್ನು ಮೆಚ್ಚಲೇಬೇಕು ಎಂದರು.
ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಯಾಗಿ ಸಂವಿಧಾನದತ್ತ ಒಳ ಮೀಸಲಾತಿ ಜಾರಿಗೆ ಮತ್ತು
ಸಮುದಾಯಗಳ ಹಿತಕ್ಕೆ ಧಕ್ಕೆಯಾಗದಂತೆ ಡಾ.ಹೆಚ್.ಸಿ.ಮಹದೇವಪ್ಪ ನಡೆದು ಕೊಂಡಿದ್ದಾರೆ. ಇಂತಹ ನಿರ್ಣಾಯಕ ಐತಿಹಾಸಿಕ ತೀರ್ಮಾನಕ್ಕೆ ಕಾರಣರಾದ ಸಚಿವರನ್ನು ಗೌರವಪೂರ್ವಕವಾಗಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿ ಬಳಗ, ಚಾಮರಾಜನಗರ ಜಿಲ್ಲೆ ಅಭಿನಂದಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಪಿ.ಸಂಘಸೇನಾ, ಭಾಗ್ಯಮ್ಮ ಉಮ್ಮತ್ತೂರು, ರಾಜೇಂದ್ರ ಹೊನ್ನೂರು, ಕೆಂಪರಾಜು ಹೊಂಗನೂರು, ರಘವೀರ್, ಮರಿಸ್ವಾಮಿ ಚಾಟೀಪುರ ಹಾಜರಿದ್ದರು.