ಗುಂಡ್ಲುಪೇಟೆ ಶಾಸಕ ಹೆಚ್.ಎಂ.ಗಣೇಶ್‌ಪ್ರಸಾದ್‌, ಪೊಲೀಸರ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಚಾಮರಾಜನಗರ : ಗುಂಡ್ಲುಪೇಟೆಯಲ್ಲಿ ಶಾಸಕ ಹೆಚ್.ಎಂ.ಗಣೇಶ್‌ಪ್ರಸಾದ್ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿದ್ದು, ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೂರ್ಯಕುಮಾರ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಹೆಚ್.ಎಂ.ಗಣೇಶ್‌ ಪ್ರಸಾದ್ ಹಾಗೂ ಗುಂಡ್ಲುಪೇಟೆ ಪೋಲಿಸರ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ಮಾತನಾಡಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಟಿಪ್ಪರ್ ಹಾವಾಳಿ ಹೆಚ್ಚಾಗಿದ್ದು, ಅದರಿಂದ ಸಾರ್ವಜನಿಕರಿಗೆ ತುಂಭಾ ಅನಾನುಕೂಲವಾಗುತ್ತಿದೆ. ಅನೇಕ ಅಪಘಾತಗಳು ಸಂಭವಿಸಿ ಅನೇಕ ಜೀವ ಕಳೆದುಕೊಂಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನು ಅನಾವಶ್ಯಕ ಶಾಸಕರ ಅಣತಿಯಂತೆ ಪೊಲೀಸ್ ಇಲಾಖೆ ದೂರು ದಾಖಲು ಮಾಡುವ ಮುಖಾಂತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಅತ್ಯಂತ ಖಂಡನೀಯವಾದದ್ದು ಎಂದರು.
ಗುಂಡ್ಲುಪೇಟೆಯಲ್ಲಿ ಯಾವುದೇ ರೀತಿಯ ಹೋರಾಟ ಮಾಡಲು ಸ್ವಾತಂತ್ರ್ಯ ಇಲ್ಲ.. ಎಂಬುವಂತಹ ವಾತಾವರಣ ಸೃಷ್ಠಿಯಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ದಮನ ಮಾಡುವಂತ ಕೆಲಸ ಮಾಡುತ್ತಿದ್ದಾರೆ ಇದು ನಿಲ್ಲಬೇಕು ಇಲ್ಲದಿದ್ದರೆ ಶಾಸಕರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೂರ್ಯಕುಮಾ‌ರ್ ಮಾತನಾಡಿ, ಶಾಸಕ ಗಣೇಶ್ ಪ್ರಸಾದ್ ಅವರ ಅಣತಿಯಂತೆ ಗುಂಡ್ಲು ಪೇಟೆ ಪೋಲಿಸರು ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರನ್ನು ಗುರಿಯಾಗಿಸುತ್ತಿರುವುದು ಅತ್ಯಂತ ಖಂಡನೀಯವಾದದ್ದು ಎಂದರು.
ಪ್ರತಿಭಟನೆ ಎಂಬುವುದು ಭಾರತದ ರಕ್ತದಲ್ಲಿ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಪಡೆದಿದ್ದು ಹೋರಾಟದಿಂದಲ್ಲೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ.. ಬಂದಿರುವುದು ಇಂತಹ ಅನೇಕ ಹೋರಾಟಗಳಿಂದಲ್ಲೇ. ಆದರೆ ಇಂದು ಹೋರಾಟ ಮಾಡುವವರ ಮೇಲೆ ಕೇಸ್ ಹಾಕುವುದು ಪ್ರತಿಭಟನೆಗಳನ್ನು ಹತಿಕ್ಕುವುದು ಮುಂದೆ ಯಾರು ನಮ್ಮ ಸರ್ಕಾರದ ವಿರುದ್ಧ ಮಾತನಾಡಬಾರದು ಎಂಬ ದುರಾಲೋಚನೆಯಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ಪ್ರಕರಣ ದಾಖಲು ಮಾಡುವುದು ಸರಿಯಲ್ಲ ಎಂದರು.

ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಭಗೀರಥ,   ಶಿವರಾಜ್, ನಟರಾಜು, ಕೂಸಣ್ಣ, ಹೊಂಗನೂರು
ಮಹದೇವಸ್ವಾಮಿ, ಮೂಡಹಳ್ಲಿ ಮೂರ್ತಿ, ಮನೋಜ್ ಪಟೇಲ್, ಮರಿಯಾಲ ಮಹೇಶ್, ಕಿಲಗೆರೆಶಶಿ, ಪ್ರವೀಣ್ ನಾಯಕ, ಕುಮಾರ್, ಮಧು, ಸೋಮುವಾರಪೇಟೆ ಗುರುಪ್ರಸಾದ್, ವೀರೇಂದ್ರ, ವೇಣುಗೋಪಾಲ,  ಕಾಡಹಳ್ಲಿ ಕುಮಾರ್,  ಭೋಗಾಪುರ ಕುಮಾರ್, ಮಣಿನಾಯಕ,  ಅಶ್ವಿನ್, ಮಂಜು, ಇತರರು ಭಾಗವಹಿಸಿದ್ದರು..

Leave a Reply

Your email address will not be published. Required fields are marked *