ಆಲೂರು ಹೊಮ್ಮದಲ್ಲಿ ರಾಮೋತ್ಸವ ಸಂಭ್ರಮ

ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀರಾಮದೇವರ ಮೆರವಣಿಗೆ, ಜೈಶ್ರೀರಾಮ್, ಜೈ ವಾಲ್ಮೀಕಿ ಘೋಷಣೆ ಕೂಗಿ ಸಂಭ್ರಮಿಸಿದ ಭಕ್ತರು.
ಚಾಮರಾಜನಗರ: ತಾಲೂಕಿನ ಆಲೂರು ಹೊಮ್ಮಗ್ರಾಮದಲ್ಲಿ ನಾಯಕ ಸಮುದಾಯದ ವತಿಯಿಂದ ರಾಮೋತ್ಸವವನ್ನು ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಶ್ರೀಪಟ್ಟಾಭಿರಾಮ ಮಂದಿರದಲ್ಲಿ ರಾಮೋತ್ಸವ ಅಂಗವಾಗಿ ಮಧ್ಯಾಹ್ನ ಹೋಮ, ಶ್ರೀರಾಮ ದೇವರಿಗೆ ವಿಶೇಷಪೂಜೆ ಸಲ್ಲಿಸಲಾಯಿತು.
ರಾತ್ರಿ ರಾಮ ದೇವರಿಗೆ ಪೂಜೆ ಸಲ್ಲಿಸಿ ಹೂವಿನ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀರಾಮದೇಭಾವಚಿತ್ರವಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ  ಭಕ್ತರು ಜೈ ಶ್ರೀರಾಮ್, ಜೈವಾಲ್ಮೀಕಿ ಘೋಷಣೆ ಕೂಗಿ ಸಂಭ್ರಮಿಸಿದರು. ಮೆರವಣಿಗೆ ಹಾದು ಹೋಗುವ ರಸ್ತೆ ಮೇಲೆ ಬಣ್ಣಬಣ್ಣದ ಚಿತ್ತಾರ ಬಿಟ್ಟು ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಗೂಳೀಪುರ ಗ್ರಾಮದ ನಾಯಕ ಜನಾಂಗದವರು,, ಹೊಮ್ಮ ನಾಯಕ ಜನಾಂಗದವರು, ಗ್ರಾಮಸ್ಥರು, ನಂಟರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *