ಡಾ.ಎ.ಬಿ.ನಂಜಪ್ಪಅವರ ಎರಡನೇ ವರ್ಷದ ಸ್ಮರಣಾರ್ಥ : ಆಲೂರಿನಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ಯಶಸ್ವಿ

  • 250 ಮಂದಿ ತಪಾಸಣೆ, ಅಗತ್ಯಯುಳ್ಳವರಿಗೆ ಉಚಿತ ಔಷಧಿ ವಿತರಣೆ
    ಚಾಮರಾಜನಗರ: ತಾಲೂಕಿನ  ಆಲೂರಿನಲ್ಲಿ ಡಾ.ಎ.ಬಿ.ನಂಜಪ್ಪಅವರ ಎರಡನೇ ವರ್ಷ ದ
    ಸ್ಮರಣಾರ್ಥ : ಆಲೂರಿನಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ನಡೆಯಿತು. ತಾಲೂಕಿನ ಆಲೂರಿನ ಬಸವ ಮಂದಿರದಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು,  ಭಾರತೀಯ ವೈದ್ಯಕೀಯ ಸಂಘ, ರೋಟರಿ ಸಂಸ್ಥೆ,  ಚಾಮರಾಜನಗರ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘ,ವೀರಶೈವ ಲಿಂಗಾಯತ ಸಮಾಜ  ಆಲೂರು. ಇವರ ಸಹಯೋಗದಲ್ಲಿ ಡಾ. ಎ.ಬಿ. ನಂಜಪ್ಪ ಅವರ ಎರಡನೇ ವರ್ಷ ದ ಸ್ಮರಣಾರ್ಥ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 250 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಗತ್ಯಯುಳ್ಳವರಿಗೆ ಉಚಿತ ಔಷಧಿ ವಿತರಿಸಲಾಯಿತು.
    ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷೆ ಡಾ.ಡಿ.ಶೀಲಾಕುಮಾರಿ ಡಾ.ಎ.ಬಿ.ನಂಜಪ್ಪ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾತನಾಡಿ, ನನ್ನ ಪೂಜ್ಯ ಪತಿಯವರಾದ ಎ.ಬಿ. ನಂಜಪ್ಪ ಅವರ ಎರಡನೇ ವರ್ಷ ದ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಶಿಬಿರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗುವುದು ಎಂದರು.
    ಶಿಬಿರದಲ್ಲಿ ಎ.ಎನ್.ಬಿನೇಶ್, ಡಾ.ಬಸವರಾಜೇಂದ್ರ,  ಡಾ.ಅಭಿಷೇಕ್, ಡಾ.ಶ್ವೇತಬಸವರಾಜೇಂದ್ರ, ಡಾ.ಶಿವಶಂಕರ್, ಡಾ.ಪ್ರದೀಪ್, ಡಾ.ಅಸಯ್ ಕುಮಾರ್ ಜೈನ್,  ಡಾ.ಸಹನಾ, ಡಾ.ಚಂದನ್, ರೋಟರಿ ಅಧ್ಯಕ್ಷ ಚಂದ್ರಶೇಖರ್,  ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಎ.ಆರ್.ಚಂದ್ರಪ್ಪ, ಕಾರ್ಯದರ್ಶಿ ನಂದೀಶ್,  ಗೌಡಿಕೆ ಶಿವಪ್ಪ, ಬಿರ್ಲಾ ನಾಗರಾಜು, ಎ.ಜೆ.ಸಚಿನ್ ಹಾಜರಿದ್ದರು.

Leave a Reply

Your email address will not be published. Required fields are marked *