ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು: ವಕೀಲ ಪುಟ್ಟಸ್ವಾಮಿ

  • ರಾಮಸಮುದ್ರದಲ್ಲಿ ಅದ್ದೂರಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ

ಚಾಮರಾಜನಗರ: ನಗರದ 30ನೇ ವಾರ್ಡನ  ಚಿಕ್ಕಬೀದಿಯಲ್ಲಿ ಜೈ ಭೀಮ್ ಯುವಜನ ಸಂಘದ ವತಿಯಿಂದ  ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತೋತ್ಸವ ಪ್ರಯುಕ್ತ  ಅವರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಬೀದಿಯ ಡಾ. ಬಿ. ಆರ್ ಅಂಬೇಡ್ಕರ್ ಭವನ ಮುಂಭಾಗದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ  ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ದೊರೆತಿದೆ ಎಂದರು.
ಡಾ.ಬಿ.ಅರ್.ಅಂಬೇಡ್ಕರ್ ಅವರ ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ ದೇಶಕ್ಕೆ ಶ್ರೇಷ್ಠ ಸಂವಿಧಾನ ಬರೆದುಕೊಡುವ ಮೂಲಕ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.  ಅವರ ಶಿಕ್ಷಣ ಮಹತ್ವವನ್ನು ಸಾರಿದರು ಆಗಾಗಿ ಸಮುದಾಯ ಪ್ರತಿಯೊಬ್ಬರೂ ಶಿಕ್ಷಣ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಚಿಕ್ಕಬೀದಿಯಲ್ಲಿ  ಮರೆವಣಿಗೆ ಮಾಡಲಾಯಿತು. ಅಂಬೇಡ್ಕರ್ ಜಯಂತೋತ್ಸವ ಪ್ರಯುಕ್ತ ಬೀದಿಯನ್ನು ವಿದ್ಯುತ್ ದೀಪಗಳಿಂದ, ಹಸಿರುತೋರಣಗಳಿಂದ ಅಲಂಕರಿಸಲಾಗಿತು.  ಮೆರವಣಿಗೆ ಹಾದು ಹೋಗುವ ರಸ್ತೆಗಳಲ್ಲಿ ಬಣ್ಣಬಣ್ಣದ ಚಿತ್ತಾರಬಿಟ್ಟು ಸ್ವಾಗತಿಸಲಾಯಿತು.
ಮೆರವಣಿಗೆಯಲ್ಲಿ ನಗರಸಭಾ ಮಾಜಿ ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಮಾಜಿ ಸದಸ್ಯ ಬಸವರಾಜು, ಯಜಮಾನರಾದ ಪಾಪಣ್ಣ, ಮರಿಸ್ವಾಮಿ, ವೀರಭದ್ರ, ಪರಶಿವ, ಚೇತನ್ ಮಾಜಿ  ಯಜಮಾನ ಮಹಾದೇವಸ್ವಾಮಿ, ಜೈಭೀಮ್ ಯುವಜನ ಸಂಘದ ಅಧ್ಯಕ್ಷ ಆರ್.ನಾಗಣ್ಣ, ಉಪಾಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ ಮಹೇಶ್ ಕುಮಾರ್, ಪದಾಧಿಕಾರಿಗಳಾದ ಮಾಣಿಕ್ಯ, ಚೂರಿ, ಬೆಳ್ಳಿ, ರಮೇಶ್, ಸಿದ್ದರಾಜು, ಅಭಿ, ಆನಂದ್, ಆದರ್ಶ, ಪ್ರಸನ್ನ ಅಭಿ, ಪ್ರಜ್ವಲ್, ಆಟೋ ರಾಜು, ಲೋಕೇಶ್, ಸಿ.ಎಂ.ನಾಗರಾಜು ಮುಖಂಡರಾದ ನಾಗಬಸವಣ್ಣ, ಮಹದೇವಸ್ವಾಮಿ, ಸುರೇಶ್, ಎಂಸ್ಯಾಡ್ ಮಹದೇವಸ್ವಾಮಿ, ಎಂಸ್ಯಾಡ್ ಶಂಕರ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *