ಚಾಮರಾಜನಗರ: ತಾಲೂಕಿನ ಇರಸವಾಡಿ ಗ್ರಾಮ ಪಂಚಾಯತಿಯಲ್ಲಿ ಶ್ರೀ ರಾಜಋಷಿ ಭಗೀರಥ ಮಹರ್ಷಿ ಅವರಿಗೆ ಅವಮಾನ ಮಾಡಿರುವ
ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಪಡಿಸಬೇಕು ಎಂದು ಒತ್ತಾಯಿಸಿ ಗ್ರಾಮದ ಉಪ್ಪಾರ ಬೀದಿಯ ಯಜಮಾನರು, ಸಮುದಾಯದವರು ಜಿ.ಪಂ.ಮಾಜಿ ಉಪಾಧ್ಯಕ್ಷ ಯೋಗೇಶ್, ತಾ.ಪಂ.ಮಾಜಿ ಸದಸ್ಯ ನಾಗರಾಜು ಅವರ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಶೃತಿ ಅವರ ಮುಖಾಂತರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್ ಅವರಿಗೆ ಮನವಿ ಸಲ್ಲಿಸಿದರು.
ಇರಸವಾಡಿ ಗ್ರಾಮದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಏ.೨೩ ರಂದು ರಾಜಋಷಿ ಶ್ರೀ ಭಗೀರಥ ಮಹರ್ಷಿರವರ ಜನ್ಮ ದಿನಾಂಕದಂದು ನಮ್ಮ ಊರಿನ ಪಂಚಾಯಿತಿ ಸದಸ್ಯರುಗಳಿಗೆ ಮತ್ತು ಊರಿನ ಮುಖಂಡರುಗಳಿಗೆ ಭಗೀರಥ ಆಚರಣೆ ನಡೆಸಲು ಸುತ್ತೋಲೆ ಹೊರಡಿಸಿ, ನಂತರ ೧೧.೩೦ ಗಂಟೆಯಾದರೂ ಪಂಚಾಯಿತಿಗೆ ಜವಾನರೊಬ್ಬರನ್ನು ಬಿಟ್ಟು ಯಾವ ಸಿಬ್ಬಂದಿಯೂ ಸಹ ಬಂದಿರಲಿಲ್ಲ. ನಂತರ ಪಂಚಾಯಿತಿ ಸದಸ್ಯರುಗಳು ಹಾಗೂ ಮುಖಂಡರುಗಳು ೧೧.೩೦ ರವರೆಗೂ ಪಂಚಾಯಿತಿ ಬಾಗಿಲಲ್ಲಿ ಕಾಯ್ದು ಕುಳಿತು ಮನೆಗೆ ಹೋದನಂತರ ೧೨.೦೦ ಗಂಟೆಗೆ ಬಂದಿದ್ದಾರೆ. ಆಗ ಊರಿನ ಮುಖಂಡರು ಹೋಗಿ ಮಾತನಾಡಿಸಿದಾಗ ಭಗೀರಥ ಮಹರ್ಷಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳವರು ಕಠಿಣ ತಪಸ್ಸಿನ ಮೂಲಕ ಧರೆಗೆ ನೀರನ್ನು ತಂದಕೊಟ್ಟ ಮಹಾಪುರುಷರ ಶ್ರೀ ಭಗೀರಥ ಮಹರ್ಷಿಗೆ ಮಾಡಿದಂತ ಅವಮಾನವಾಗಿದೆ. ಆದುದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಗೆ ಗ್ರಾಮದ ಉಪ್ಪಾರ ಜನಾಂಗದವರು ಮುತ್ತಿಗೆ ಹಾಕಿ ನಿರಂತರ ಧರಣಿ ನಡೆಸಬೇಕಾಗುತ್ತದೆ ಎಂದು ಜಿ.ಪಂ.ಸಿಇಓ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಜಿ.ಪಂ.ಮಾಜಿ ಸದಸ್ಯ ಯೋಗೇಶ್, ತಾ.ಪಂ.ಮಾಜಿ ಸದಸ್ಯ ವೈ.ಕೆ.ನಾಗರಾಜು, ಇರಸವಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾದೇಶ್, ಮಾಜಿ ಉಪಾಧ್ಯಕ್ಷ ಮಹದೇವಶೆಟ್ಟಿ,
ಸದಸ್ಯ ರಂಗಸ್ವಾಮಿ, ಸುರೇಶ್, ಯಜಮಾನರಾದ ರಂಗಶೆಟ್ಟಿ, ಕೃಷ್ಣಶೆಟ್ಟಿ, ಶ್ರೀಭಗೀರಥ ಯುವಕರ ಸಂಘದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.