ರಾಜ್ಯ ಒಕ್ಕಲಿಗರ ಸಂಘದಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ನಿರ್ದೇಶಕ ಸ್ಥಾನ ನೀಡಲು ರಾಜ್ಯಾಧ್ಯಕ್ಷರಿಗೆ ಮನವಿ

ಚಾಮರಾಜನಗರ: ರಾಜ್ಯ ಒಕ್ಕಲಿಗರ ಸಂಘದಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ನಿರ್ದೇಶಕ ಸ್ಥಾನ ನೀಡಬೇಕೆಂದು  ಸಂಘದ ರಾಜ್ಯಾಧ್ಯಕ್ಷ ಎಲ್.ಶ್ರೀನಿವಾಸ ಅವರಿಗೆ
ಬೆಂಗಳೂರಿನಲ್ಲಿ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಸಂಸ್ಥೆಗಳ ಮುಖಂಡರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
    ಗಡಿ ಜಿಲ್ಲೆಯಾದ. ಚಾಮರಾಜನಗರ ಜಿಲ್ಲೆಯು ಈ ಹಿಂದೆ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿತ್ತು, ಚಾಮರಾಜನಗರ ಜಿಲ್ಲೆಯ ರಾಜ್ಯ ಒಕ್ಕಲಿಗರ ಸಂಘದ ಸದಸ್ಯರಾದ ನಾವು ಮೈಸೂರು ಜಿಲ್ಲೆಯ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರುಗಳಿಗೆ ಮತವನ್ನು ಹಾಕಿಕೊಂಡು ಬಂದಿರುತ್ತೇವೆ. ಈಗ ನಮ್ಮ ಚಾಮರಾಜನಗರ ಜಿಲ್ಲೆಯಾಗಿ ಸುಮಾರು 30 ವರ್ಷ ಕಳೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಾವಿರಾರು ಮತದಾರರು ರಾಜ್ಯ ಒಕ್ಕಲಿಗರ ಸದಸ್ಯತ್ವವನ್ನು ಪಡೆದಿದ್ದಾರೆ. ಈ ಭಾಗದಲ್ಲಿ ನಮ್ಮ ಸಮುದಾಯದ ಬಹಳಷ್ಟು ಕೆಲಸ ಕಾರ್ಯಗಳು ಆಗಬೇಕಾಗಿರುವುದರಿಂದ ನಮ್ಮ ಜಿಲ್ಲೆಗೆ ಪ್ರತ್ಯೇಕ ನಿರ್ದೇಶಕ ಸ್ಥಾನದ ಅವಶ್ಯಕತೆ ಇದೆ.ನೂತನವಾಗಿ ರಚನೆಯಾದ ಜಿಲ್ಲೆಗಳಿಗೆ ರಾಜ್ಯ ಒಕ್ಕಲಿಗರ ಸಂಘದಲ್ಲಿ ನಿರ್ದೇಶಕ ಸ್ಥಾನಮಾನವನ್ನು ನೀಡಿರುವ ರೀತಿಯಲ್ಲಿ ನಮ್ಮ ಚಾಮರಾಜನಗರ ಜಿಲ್ಲೆಗೂ ಸಹ ನಿರ್ದೇಶಕ ಸ್ಥಾನವನ್ನು ನೀಡಬೇಕು.ಮುಂದೆ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ನಮ್ಮ ಜಿಲ್ಲೆಗೆ ನಿರ್ದೇಶಕ ಸ್ಥಾನವನ್ನು ನೀಡಬೇಕೆಂದು ಸಂಘದ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ್ ಗೌಡ, ಕರಿಯನಕಟ್ಟೆ ಚಿನ್ನಮುತ್ತು
ಪಣ್ಯದಹುಂಡಿ ರಾಜು, ಮಹೇಶ್ ಗೌಡ, , ಟೌನ್ ಸಂಘದ ಅಧ್ಯಕ್ಷ ಮಹೇಶ್, ದೊಡ್ಡರಪೇಟೆ ನಾಗೇಂದ್ರ ಅರುಣ್ ಕುಮಾರ್ ಗೌಡ, ಹೊಮ್ಮ ಲೋಕೇಶ್ ಹಾಜರಿದ್ದರು

Leave a Reply

Your email address will not be published. Required fields are marked *