ಚಾಮರಾಜನಗರ: ಮಕ್ಕಳಲ್ಲಿರುವ ಸೂಪ್ತಪ್ರತಿಭೆಯನ್ನು ಗುರುತಿಸಿ ಹೊರತರಲು ಬೇಸಿಗೆ ಶಿಬಿರಗಳು ಪೂರಕವಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷೆ ಮಹದೇವಸ್ವಾಮಿ ಹೇಳಿದರು.
ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಚೇರಿಯಲ್ಲಿ ಪವನ್‌ಸೇವಾ ಟ್ರಸ್ಟ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಲ್‌ಜಿಯಿಂದ 8ನೇ ತರಗತಿ ಮಕ್ಕಳಿಗಾಗಿ 7 ದಿನಗಳ ಕಾಲ ಹಮ್ಮಿಕೊಂಡಿರುವ ಚಿತ್ರಕಲಾ ಬೇಸಿಗೆ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಪಠ್ಯದಷ್ಟೆ, ಪಠ್ಯೇತರ ಚಟುವಟಿಕೆಗಳಿಗೆ, ಮಕ್ಕಳ ಕಲಿಕೆಗೆ ಸರ್ಕಾರ ಬಹಳಷ್ಟು ಒತ್ತು ನೀಡಿದೆ. ಪುಸ್ತಕ ಓದುವುದಷ್ಟೆ
ಓದು ಅಲ್ಲ. ಪುಸ್ತಕ ಓದುವ ಜೊತೆಯಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರತರುವುದು ನಿಜವಾದ ಕಲಿಕೆಯಾಗಿದೆ ಆ ನಿಟ್ಟಿನಲ್ಲಿ ಇಂತಹ ಬೇಸಿಗೆ ಶಿಬಿರಗಳು ಉಪಯುಕ್ತವಾಗಿವೆ ಎಂದರು.
ಪವನ್ ಸೇವಾ ಸಂಸ್ಥೆಯು ಬಹಳ ವರ್ಷಗಳಿಂದ ಸಾಮಾಜಮುಖಿ ಕಾರ್ಯಕ್ರಮಗಳನ್ನು ಸುಮಾರು ವರ್ಷಗಳಿಂದ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಮತ್ತಷ್ಟು ಸಾಮಾಜಮುಖಿ ಕೆಲಸಗಳನ್ನು ಮಾಡಲಿ ಅವರ ಜೊತೆ ಸದಾ ಕರ್ನಾಟಕ ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘ ಇರುತ್ತದೆ ಎಂದರು.
ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ. ಎಂ. ನರಸಿಂಹಮೂರ್ತಿ ಮಾತನಾಡಿ, ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಬೇಸಿಗೆ ಶಿಬಿರ ಸಹಕಾರಿಯಾಗಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ, ಕೌಶಲ್ಯಾಭಿವೃದ್ಧಿ, ಆಕರ್ಷಕ ಚಿತ್ರ ಬರೆಸುವಿಕೆ ಹಾಗು ಮಕ್ಕಳಲ್ಲಿರುವ ಸುಪ್ತಪ್ರತಿಭೆ ಹೆಚ್ಚು ಮಾಡಲು ಇಂತಹ ನೆರವಾಗಲಿದ್ದು, ಮಕ್ಕಳಿಗೆ ಅಶಕ್ತಿಯಿರುವ ಕ್ಷೇತ್ರದಲ್ಲಿ ಪೋಷಕರು ಅವಕಾಶ ಮಾಡಿಕೊಟ್ಟರೆ ಅಂತಹ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಮಕ್ಕಳು ಬೆಳೆಯಲು ಸಾಧ್ಯವಾಗುತ್ತದೆ’ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ಭೂಷಣ, ಜಿಲ್ಲಾ ಖಜಾಂಚಿ ಶಿವಕುಮಾರಯ್ಯ, ಹಿರಿಯ ಉಪಾಧ್ಯಕ್ಷ ಎಂ.ಡಿ ಮಹದೇವಯ್ಯ, ನಿರ್ದೇಶಕ ಶಾಂತರಾಜು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಶಿಬಿರದ ಅಯೋಜಕ ಸಿ.ಎನ್.ಸಂಪತ್‌ಕುಮಾರ್, ಪವನ್ ಸೇವಾ ಟ್ರಸ್ಟ್ ಕಾರ್ಯದರ್ಶಿ ವೀಣಾ ಸಂಪತ್‌ಕುಮಾರ್, ಕಲಾವಿದರಾದ ಎನ್.ಅನಿಲ್‌ಕುಮಾರ್, ರವಿತೇಜ್, ಗೌಸ್, ರಾಜೇಶ್, ಸಮಾಜ ಕಲ್ಯಾಣ ಇಲಾಖೆಯ ಸಿ.ಎ.ರಾಜು, ಶಿಕ್ಷಕರಾದ ಇಂದಿರಾ, ಕಾವೇರಿ, ಜೈತ್ರಾ, ಜಯಶಂಕರ್, ಪೋಷಕರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.