- ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ಮುಖ್ಯಮಂತ್ರಿಗಳಿಗೆ ಅಭಿನಂದನೆ.
- ಸಮಾಜದ ಹಲವು ಹೋರಾಟಗಾರರ ದೀರ್ಘಕಾಲದ ಹೋರಾಟದ ಫಲ: ಎಂ.ಶಿವಮೂರ್ತಿ
ಚಾಮರಾಜನಗರ: ಪರಿಶಿಷ್ಟ ಜಾತಿಯಲ್ಲಿನ ಗ್ರೂಪ್ ‘ಎ’ ಗೆ ಶೇ 5.25ರಷ್ಟು, ಗ್ರೂಪ್ ‘ಬಿ’ಗೆ ಶೇ 5.25ರಷ್ಟು ಮತ್ತು ಗ್ರೂಪ್ ‘ಸಿ’ಗೆ ಶೇ 4.5ರಷ್ಟು ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟದ ಸಭೆಯು ಒಮ್ಮತದ ನಿರ್ಧಾರ ಕೈಗೊಂಡಿರುವುದನ್ನು ಸ್ವಾಗತಿಸಿ ನಗರದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ಸಂಭ್ರಮಾಚರಣೆ ನಡೆಸಿದರು.
ನಗರದ ಜಿಲ್ಲಾಡಳಿತ ಮುಂಭಾಗದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ಸಮಾವೇಶ ಗೊಂಡ ಸಂಘದ ಪದಾಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ಸರ್ಕಾರ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಗಳು, ಸಮುದಾಯ ಸಚಿವರು, ಹೋರಾಟಗಾರ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ನೇತೃತ್ವ ವಹಿಸಿದ ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ರಾಜ್ಯದ ಸರ್ವಜಾತಿಯ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶೇಕಡ 15ರ ಮೀಸಲಾತಿಯಲ್ಲಿ ಎಡಗೈ, ಬಲಗೈ ಮತ್ತು ಇತರರಿಗೆ ಹಂಚುವ ನಿರ್ಧಾರ ಸ್ವಾಗತಾರ್ಹ. ಇದು ಸಮಾಜದ ಹಲವು ಹೋರಾಟಗಾರರ ದೀರ್ಘಕಾಲದ ಹೋರಾಟದ ಫಲವಾಗಿದೆ. ಸುಮಾರು 35 ವರ್ಷಗಳ ಶ್ರಮಕ್ಕೆ ನ್ಯಾಯ ದೊರಕಿದಂತಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ಒಳಮೀಸಲಾತಿ ವಿಷಯವಾಗಿ 35 ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ರಾಜ್ಯ ಸರ್ಕಾರವು ತೆರೆ ಎಳೆದಿದೆ. ಜಾತಿಗಳ ಸಂಘರ್ಷ ಸರಿಪಡಿಸಿ, ಸುಪ್ರೀಂಕೋರ್ಟ್ ಆದೇಶ ಉಲ್ಲಂಘಣೆ ಆಗದಂತೆ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಒಂದು ಸಂದೇಶ ಕೊಟ್ಟ ಮುಖ್ಯಮಂತ್ರಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಕರ್ನಾಟಕದ ಮಾದಾರ ಮಹಾಸಭಾ ಜಿಲ್ಲಾ
ಪ್ರಧಾನ ಕಾರ್ಯದರ್ಶಿ ಪಾಳ್ಯರಾಚಪ್ಪ, ತಾಲೂಕು ಎಂ.ರಾಜು, ಉಪಾಧ್ಯಕ್ಷ ರಾಚಯ್ಯ ರಾಮಸಮುದ್ರ, ಗುಂಡ್ಲುಪೇಟೆ ತಾಲೂಕು ಸಿದ್ದಯ್ಯ ಅಂಕಹಳ್ಳಿ, ಕಾರ್ಯದರ್ಶಿ ರಾಚಯ್ಯ, ಮುಖಂಡರಾದ ಜಯಶಂಕರ್, ಸೋಮಶೇಖರ್, ನಾಗಯ್ಯ ಹೊನ್ನೇಗೌಡಹಳ್ಳಿ, ರಂಗಸ್ವಾಮಿ ಮಾದಾಪುರ, ಡಿ.ಕೆ.ಶಿವಕುಮಾರ್, ಕೊತ್ತಲವಾಡಿ ಮಟ್ಟಲಿಂಗಯ್ಯ, ದೊಡ್ಡಮಾದಯ್ಯ, ವೆಂಕಟರಾಜು ಕಿಲಗೆರೆ, ರಾಜೇಶ್, ಆರ್.ಕೆ.ಶಿವಕುಮಾರ್, ರಜಿನಿ, ಲಿಂಗಣ್ಣ,
ರಾಜಣ್ಣ. ರವೀಶ್, ಮಹದೇವಸ್ವಾಮಿ ಅಮಚವಾಡಿ, ಎಸ್.ಸುನೀಲ್ ಕುಮಾರ್, ನಾರಾಯಣ್ಇತರರು ಹಾಜರಿದ್ದರು.