ಕಾಗಲವಾಡಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿ
184 ಮಂದಿ ತಪಾಸಣೆ, 61 ಮಂದಿ ಶಸ್ತ್ರಚಿಕಿತ್ಸೆ ಆಯ್ಕೆ
ಚಾಮರಾಜನಗರ: ತಾಲೂಕಿನ ಕಾಗಲವಾಡಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.
ಗ್ರಾಮದ ಜಾಮಿಯಾ ಮಸೀದಿಯಲ್ಲಿ
ರೋಟರಿ ಕ್ಲಬ್ , ಜಾಮಿಯಾ ಮಸ್ಜಿದ್ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ,ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ 184 ಮಂದಿ ತಪಾಸಣೆ ಮಾಡಿಸಿಕೊಂಡರು.61ಮಂದಿ ಶಸ್ತ್ರ ಚಿಕಿತ್ಸೆ ಗೆ ಆಯ್ಕೆಯಾದರು.
ಜಾಮಿಯಾ ಮಸ್ಜಿದ್ ಮುಖಂಡ ಆಲ್ತಾಫ್ ಅಹಮದ್ ಮಾತನಾಡಿ, ಸಾಮಾಜಿಕ ಕಳಕಳಿಯೊಂದಿಗೆ ಈ ಭಾಗದಲ್ಲಿ ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಜಾಮಿಯಾ ಮಸ್ಜಿದ್, ರೋಟರಿ ಕ್ಲಬ್ , ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ,ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕಣ್ಣಿನ ದೃಷ್ಟಿಯನ್ನು ಸುಧಾರಿಸಬಹುದು ಮತ್ತು ದೀರ್ಘಕಾಲದವರೆಗೆ ಆರೋಗ್ಯವಾಗಿರಿಸಬಹುದು ಎಂದರು.
ಚಂದಕವಾಡಿ ಹೋಬಳಿಯ ಜನರು ಚಾಮರಾನಗರ ಬಂದು ಕಣ್ಣಿನ ತಪಾಸಣೆ ಮಾಡಿಸಲು ತೊಂದರೆಯಾಗುತ್ತಿತ್ತು ಇದನ್ನು ಮನಗಂಡು ಜಾಮಿಯ ಮಸ್ಜಿದ್ ಮುಖಂಡರೊಂದಿಗೆ ಚರ್ಚಿಸಿದಾಗ ಜಾಮಿಯಾ ಮಸ್ಜಿದ್ ಉಚಿತ ಆರೋಗ್ಯ ತಪಾಸಣೆ ಶಿಬಿರ ವನ್ನು ಅಯೋಜಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ವು ಆರೋಗ್ಯ ಶಿಬಿರ ಅಯೋಜಿಸಲಿ ಅದೇ ರೀತಿಯಲ್ಲಿ
ಎಲ್ಲ ಮಸೀದಿಗಳಲ್ಲೂ ಸಹಬಾಳ್ವೆಯೊಂದಿಗೆ ಉಚಿತ ಕಣ್ಣಿನ ಶಿಬಿರಗಳನ್ನು ಅಯೋಜಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗಲಿ ಎಂದು ಆಶಿಸಿದರು.
ಧರ್ಮಗುರುಗಳಾದ ಮೊಹಮ್ಮದ್ ಯಾಸೀರ್ ಅರ್ಫತ್ ರಷಾದಿ, ವಕ್ಪ್ ಬೋರ್ಡ್ ಲೆಕ್ಕಾಧಿಕಾರಿ ರುಮಾನ್ ಖಾನ್, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಮುಖಂಡರಾದ .,ಅಲ್ತಾಫ್ ಅಹಮದ್, ಸೈಯದ್ ಆರೀಪ್ ಉಲ್ಲಾ, ಮುಬಾರಕ್ ಪಾಷ, ಸುಮೇರ್, ಸಿದಾರತ್, ಅಬ್ಜಲ್ ಪಾಷ, ಅಬ್ದುಲ್ಮು ತಾಲಿಬ್, ಪಾಜೀಲ್ ಪಾಷ, ನಿಜಾಂಪಾಷ, ಪಿಆರ್ ಒ ವಿಜಯಕುಮಾರ್ ಇತರರು ಭಾಗವಹಿಸಿದ್ದರು.