ಚಾಮರಾಜನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಚಾಮರಾಜನಗರ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ತಾಲೂಕಿನ ಲಕ್ಷ್ಮೀಪುರ ಗ್ರಾಮದ ವಿದ್ಯಾರ್ಥಿ ಎಸ್.ಮಹದೇವಸ್ವಾಮಿ ಅವರನ್ನು ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶಿವರಾಜಶೆಟ್ಟಿ, ರತ್ನಮ್ಮ ದಂಪತಿ ಪುತ್ರ ಹಾಗೂ ಮಲ್ಲಯ್ಯನಪುರ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿ ಎಸ್. ಮಹದೇವಸ್ವಾಮಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆಯುವ ಚಾಮರಾಜನಗರ ತಾಲೂಕಿಗೆ ಪ್ರಥಮ ಪಡೆದಿರುವ ಅವರನ್ನು ಜಿಲ್ಲಾ ಉಪ್ಪಾರ ಯುವಕರ ಸಂಘದ ಸನ್ಮಾನಿಸಲಾಯಿತು.
ನಗರದ ಸೆಸ್ಕಾಂ ಕಚೇರಿಯಲ್ಲಿ ವಿದ್ಯಾರ್ಥಿಯನ್ನು ಸನ್ಮಾನಿಸಿದ ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್ ಮಾತನಾಡಿ, ಸರ್ಕಾರಿ ಆದರ್ಶ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಎಸ್. ಮಹದೇವಸ್ವಾಮಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆಯುವ ಚಾಮರಾಜನಗರ ತಾಲೂಕಿಗೆ ಪ್ರಥಮ ಪಡೆದಿರುವ ತುಂಬಾ ಸಂತಸವಾಗಿದೆ. ಅವರ ಮುಂದಿನ ವಿದ್ಯಾಭ್ಯಾನಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಉಪ್ಪಾರ ಸಮುದಾಯಕ್ಕೆ ಹೆಮ್ಮೆ : ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಮಾತನಾಡಿ, ನಮ್ಮ ಸಮುದಾಯದ ವಿದ್ಯಾರ್ಥಿ ಎಂ.ಮಹದೇವಸ್ವಾಮಿ : ಎನ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆಯುವ ಚಾಮರಾಜನಗರ ತಾಲೂಕಿಗೆ ಪ್ರಥಮ ಪಡೆದಿರುವ ಉಪ್ಪಾರ ಸಮುದಾಯಕ್ಕೆ ಹೆಮ್ಮೆ ತರುವಂತಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿ ಹೆಚ್ಚಿನ ಅಂಕ ಪಡೆಯುವ ಮೂಲಕ ವಿದ್ಯಾರ್ಥಿ ಮಹದೇವಸ್ವಾಮಿ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾನೆ ಎಂದರು.
ಈ ಸಂದರ್ಭದಲ್ಲಿ ಸೆಸ್ಕಾಂ ಜೆಇ ಮರಿಸ್ವಾಮಿ, ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ ಹೊಂಗನೂರು ಯಜಮಾನ ಜಯಸಿದ್ದು, ಕೋಡಿಮೋಳೆ ರಂಗಸ್ವಾಮಿ ಇತರರು ಹಾಜರಿದ್ದರು.